ಸಮಗ್ರ ಸುದ್ದಿ, ಚಿತ್ರದುರ್ಗ
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ನಗರದಲ್ಲಿ ವಿಶ್ವ ಹಿಂದೂ ಪರಿಷತ್ (VHP) ಮತ್ತು ಭಜರಂಗದಳದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಷ್ಠಿತ ‘ಹಿಂದೂ ಮಹಾಗಣಪತಿ ಮಹೋತ್ಸವ’ದ ಅಂಗವಾಗಿ ಶನಿವಾರ ಅದ್ಧೂರಿ ಶೋಭಾಯಾತ್ರೆ ಜರುಗಿತು. ಪ್ರತಿ ವರ್ಷದಂತೆ ಈ ವರ್ಷವೂ ಅಪಾರ ಭಕ್ತಸಾಗರದ ನಡುವೆ ಗಣೇಶೋತ್ಸವವನ್ನು ಅತ್ಯಂತ ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು.

ಈ ಬಾರಿಯ ಉತ್ಸವದಲ್ಲಿ ವಿಶೇಷ ಗಮನ ಸೆಳೆದಿದ್ದು ಗಣಪತಿಯ ಕೈಯಲ್ಲಿದ್ದ ಧ್ವಜದ ಹರಾಜು ಪ್ರಕ್ರಿಯೆ. ಕಳೆದ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 2ರವರೆಗೆ ಗಣೇಶನ ಮೂರ್ತಿಯ ಕೈಯಲ್ಲಿದ್ದ ಈ ಪವಿತ್ರ ಧ್ವಜವನ್ನು ಶೋಭಾಯಾತ್ರೆಯ ವೇಳೆ ಹರಾಜು ಹಾಕಲಾಯಿತು. ಧ್ವಜವನ್ನು ಒಲಿಸಿಕೊಳ್ಳಲು ಹರಾಜಿನಲ್ಲಿ ಹಲವರು ತೀವ್ರ ಪೈಪೋಟಿ ನಡೆಸಿದರು. ಅಂತಿಮವಾಗಿ, ಮಧುಗಿರಿಯ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಹನುಮಂತೇಗೌಡ ಅವರು ಬರೋಬ್ಬರಿ 4 ಲಕ್ಷ ರೂಪಾಯಿಗಳ ಬಿಡ್ ಕೂಗುವ ಮೂಲಕ ಈ ಧ್ವಜವನ್ನು ತಮ್ಮದಾಗಿಸಿಕೊಂಡರು.
ಈ ಅದ್ದೂರಿ ಶೋಭಾಯಾತ್ರೆ ಹಾಗೂ ಹರಾಜು ಪ್ರಕ್ರಿಯೆಯಲ್ಲಿ ನಾಡಿನ ಹಲವು ಗಣ್ಯರು ಮತ್ತು ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಪ್ರಮುಖವಾಗಿ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಮತ್ತು ಕೆ.ಎಸ್. ನವೀನ್, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್, ಹಾಗೂ ಪ್ರಮುಖ ಮುಖಂಡರಾದ ಅನಿತ್ ಕುಮಾರ್, ಡಾ. ಸಿದ್ದಾರ್ಥ ಗುಂಡಾರ್ಪಿ, ಜಿ.ಎಂ. ಸುರೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
🟣 ShareChat
Follow on sharechat.com
⚫ Twitter / X
Follow on X (Twitter)
🟣 Threads
Follow on Threads
🟠 Instagram
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel