ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದು: ರಾಜ್ಯ ಸರ್ಕಾರದ ವಿರುದ್ಧ ಗೋವಿಂದ ಕಾರಜೋಳ ಆಕ್ರೋಶ, ಹೋರಾಟದ ಎಚ್ಚರಿಕೆ.

ಚಿತ್ರದುರ್ಗ ಅ. 13

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜ್ಯದಲ್ಲಿ ಎಸ್.ಸಿ. ಮತ್ತು ಎಸ್.ಟಿ. ಮೀಸಲಾತಿ ಹೆಚ್ಚಳ ಹಾಗೂ ಸಂವಿಧಾನಿಕ ಹಕ್ಕುಗಳ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಸಂಸದರಾದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಚಿತ್ರದುರ್ಗದ ಅವರ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅಂದಿನ ನಾಯಕರು ಎಸ್‍ಸಿ ಮತ್ತು ಎಸ್‍ಟಿ ಜನಾಂಗದ ಮೇಲೆತ್ತಲು ಮೀಸಲಾತಿ ಸೌಲಭ್ಯ ತಂದಿದ್ದರು.ಅಂದು ಎಸ್‍ಸಿಯಲ್ಲಿ ಕೇವಲ 6 ಜಾತಿಗಳು ಮತ್ತು ಎಸ್‍ಟಿಯಲ್ಲಿ 6 ಜಾತಿಗಳು ಮಾತ್ರ ಇದ್ದವು. ಕಾಲಕ್ರಮೇಣ ಜನಸಂಖ್ಯೆಗೆ ಅನುಗುಣವಾಗಿ ಜಾತಿಗಳು ಮತ್ತು ಮೀಸಲಾತಿ ಹೆಚ್ಚಿಸಬೇಕಿತ್ತು ಆದರೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಲಿಲ್ಲ 2018ರಲ್ಲಿ ಕುಮಾರಸ್ವಾಮಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವನ್ನು ನೇಮಿಸಲಾಯಿತು. ಈ ಆಯೋಗವು ಸಂವಿಧಾನದ ಆಶಯಕ್ಕೆ ಅನುಗುಣವಾಗಿ 2022ರಲ್ಲಿ ಮೀಸಲಾತಿಯನ್ನು ಎಸ್‍ಸಿಗೆ 15 ರಿಂದ 17% ಹಾಗೂ ಎಸ್‍ಟಿಗೆ 3 ರಿಂದ 7% ಹೆಚ್ಚಿಸಲು ವರದಿ ನೀಡಿತ್ತು. ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಈ ವರದಿಯನ್ನು ಒಪ್ಪಿಕೊಂಡು ಎರಡು ಸದನಗಳಲ್ಲಿ ಬಿಲ್ ಮಂಡಿಸಿ, ರಾಜ್ಯಪಾಲರ ಅನುಮತಿ ಪಡೆದು ಗೆಜೆಟ್ ಅಧಿಸೂಚನೆಹೊರಡಿಸಿತ್ತು ಆದರೆ ಈಗ ಮೀಸಲಾತಿಯ ಪ್ರಮಾಣ ರದ್ದಾದ ಆದೇಶದಿಂದಾಗಿ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‍ಗಳಲ್ಲಿ ಸಿಗುತ್ತಿದ್ದ ಸಾವಿರಾರು ಸೀಟುಗಳು ಈಗ ಕಡಿತಗೊಂಡು ಎಸ್‍ಸಿ-ಎಸ್‍ಟಿ ಜನಾಂಗದ ತಲೆ ಮೇಲೆ ದೊಡ್ಡ ಕಲ್ಲು ಬಿದ್ದಂತಾಗಿದೆ. ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಎಸ್‍ಸಿ-ಎಸ್‍ಟಿ ಮೀಸಲಾತಿ ರದ್ದು ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ದಲಿತರಿಗೆ ಮೋಸ ಮಾಡುತ್ತಿದ್ದು, ದ್ರೋಹ ಎಸಗಿದೆ. ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಹೋರಾಟ ನಡೆಸಬೇಕು ಅಥವಾ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ತಪ್ಪಿದಲ್ಲಿ ಸಮಾಜದವತಿಯಿಂದ ಹಾಗೂ ಎಲ್ಲಾ ಶಾಸಕರು, ಮಂತ್ರಿಗಳು, ಮುಖಂಡರ ಸಹಯೋಗದೊಂದಿಗೆ ಪಕ್ಷಾತೀತವಾಗಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳ ಲಾಗುವುದು ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ಸಂಸದರು ನೀಡಿದ್ದಾರೆ.

ಕರ್ನಾಟಕ ಹೈಕೋರ್ಟ್‍ನಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಎಸ್‍ಸಿ ಮತ್ತು ಎಸ್‍ಟಿ ಮೀಸಲಾತಿ ಹೆಚ್ಚಳವನ್ನು ರದ್ದುಪಡಿಸಿರುವ ತೀರ್ಪಿನ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ವಿರುದ್ಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಹೈಕೋರ್ಟ್ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹಾಗೂ ಅಧಿಕಾರಿಗಳು ಗೈರುಹಾಜರಾಗಿರುವುದೇ ಮೀಸಲಾತಿ ರದ್ದಾಗಲು ಪ್ರಮುಖ ಕಾರಣ ಎಂದು ಆರೋಪಿಸಿದರು.

ಹೈಕೋರ್ಟ್‍ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಾಗ ರಾಜ್ಯ ಸರ್ಕಾರವು ಸಮರ್ಪಕವಾಗಿ ವಾದ ಮಂಡಿಸಿಲ್ಲ ಮತ್ತು ದಲಿತರ ಪರವಾಗಿ ಹೋರಾಟ ಮಾಡಿಲ್ಲ. ಸರಿಯಾಗಿ ಕೋರ್ಟ್‍ಗೆ ನಾಲ್ಕು ಬಾರಿ ಮುದತ್ ಬಂದಾಗಲೂ ಕೂಡ ರಾಜ್ಯ ಸರ್ಕಾರ ಅಥವಾ ಅದರ ವಕೀಲರು ಹಾಗೂ ಅಧಿಕಾರಿಗಳು ಹಾಜರಾಗಿರಲಿಲ್ಲ. ಐದನೇ ಬಾರಿ ಮುದತ್ ಎದ್ದಾಗ ಅಡ್ವೊಕೇಟ್ ಜನರಲ್ ಅವರು 17% ಎಸ್‍ಸಿಗೆ ಮತ್ತು 7% ಎಸ್‍ಟಿಗೆ ಮಾಡಿದ್ದನ್ನು ನಾವು ಅನುಷ್ಠಾನ ಮಾಡುವುದಿಲ್ಲ ಎಂದು ಸ್ವತಃ ಕೋರ್ಟ್‍ಗೆ ತಿಳಿಸಿದ್ದಾರೆ. ದತ್ತಾಂಶದ ಕೊರತೆಯಿದೆ ಎಂಬ ಕಾರಣ ನೀಡಿ ಹೈಕೋರ್ಟ್ ಈ ಮೀಸಲಾತಿಯನ್ನು ರದ್ದುಪಡಿಸಿದೆ. ರಾಜ್ಯ ಸರ್ಕಾರ ಕೊಡಬೇಕಾದ ಅಂಕಿ-ಅಂಶಗಳನ್ನು ನೀಡದೆ ಇರುವುದೇ ಇದಕ್ಕೆ ಕಾರಣವಾಗಿದೆ. ಅಲ್ಲದೆ, ಕೇವಲ 50% ಗೆ ಮಿತಿಗೊಳಿಸಲಾಗಿದೆ ಎಂಬ ವಾದ ಸರಿಯಲ್ಲ ಎಂದು ತಿಳಿಸಿದರು.

ಸಂವಿಧಾನಿಕವಾಗಿ ಜಾರಿಗೆ ಬಂದಿರುವ ಎಸ್.ಸಿ. ಮತ್ತು ಎಸ್.ಟಿ. ಮೀಸಲಾತಿ ಸೌಲಭ್ಯಗಳಿಗೆ ಯಾವುದೇ ಧಕ್ಕೆಯಾಗದಂತೆ ರಕ್ಷಿಸಬೇಕು ಹಾಗೂ ಹಿರಿಯ ಸಚಿವರು ರಾಜೀನಾಮೆ ನೀಡಿ ದಲಿತರ ಪರವಾದ ನ್ಯಾಯಯುತ ಹೋರಾಟಕ್ಕೆ ಮುಂದಾಗಬೇಕು ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ನಾಗಮೋಹನ್ ದಾಸ್ ವರದಿಯ ಮೂಲಕ ಅತ್ಯಂತ ಸಂವಿಧಾನಿಕವಾಗಿ ಹಾಗೂ ಸಾಮಾಜಿಕ ನ್ಯಾಯದಡಿ ಎಸ್.ಸಿ. ಮತ್ತು ಎಸ್.ಟಿ. ಮೀಸಲಾತಿ ಹೆಚ್ಚಳವನ್ನು ಜಾರಿಗೆ ತರಲಾಗಿತ್ತು. ಆದರೆ ಪ್ರಸ್ತುತ ಈ ಕುರಿತು ಸರ್ಕಾರದ ನಿಲುವು ಹಾಗೂ ಕೆಲವು ನಾಯಕರ ಮೌನ ದಲಿತ ಸಮುದಾಯಕ್ಕೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.

ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಸರ್ಕಾರಗಳಲ್ಲೂ ದಲಿತರಿಗೆ ಮೋಸವಾಗಿದ್ದು, ಈ ಬಗ್ಗೆ
ಸಮುದಾಯದವರು ಎಚ್ಚೆತ್ತುಕೊಳ್ಳಬೇಕು ದೇಶದ ಹಲವು ರಾಜ್ಯಗಳಲ್ಲಿ ಎಸ್.ಸಿ. ಮತ್ತು ಎಸ್.ಟಿ. ಮೀಸಲಾತಿ ಹೆಚ್ಚಳ ಜಾರಿಯಲ್ಲಿದ್ದರೂ, ಕೇವಲ ಕರ್ನಾಟಕದಲ್ಲಿ ಮಾತ್ರ ಇದು ಅನುಷ್ಠಾನಗೊಳ್ಳದಿರಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಆಕ್ಷೇಪಿಸಿ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರ ಹೆಸರನ್ನು ಹೇಳಿಕೊಂಡು ವಂಚಿಸುತ್ತಿದ್ದು, ಮೀಸಲಾತಿ ಪಟ್ಟಿಯಿಂದ ಕೆಲವು ಜನಾಂಗಗಳನ್ನು ಹೊರ ಹಾಕುವ ಹುನ್ನಾರ ನಡೆಯುತ್ತಿದೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸ್ಪರ್ಶ ಜಾತಿಗಳನ್ನು ಎಸ್.ಸಿ. ಪಟ್ಟಿಯಿಂದ ಹೊರಗಿಡಬೇಕು ಎಂಬ ಚರ್ಚೆಗಳು ನಡೆಯುತ್ತಿದ್ದು, ಲಂಬಾಣಿ, ಬೋವಿ, ಕೊರಮ, ಕೊರ್ಚಾ ಸೇರಿದಂತೆ 38 ಜಾತಿಗಳನ್ನು ಕೈಬಿಡುವ ಪ್ರಯತ್ನಗಳು ನಡೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ವಿಭಾಗ ಸಹ ಪ್ರಬಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರೀಶ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ. ಮೋರ್ಚಾದ ಅಧ್ಯಕ್ಷ ಪರಶುರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ ಕುಮಾರ್, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಯುವ ಮೋರ್ಚಾದ ಮುಖಂಡ ಅರುಣ್ ಕುಮಾರ್ ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group
Join WhatsApp Group

🔵 Facebook Page
Follow Facebook Page

⚫ Twitter / X
Follow on X (Twitter)

🟣 Threads
Follow on Threads

🟠 Instagram
Follow on Instagram

🔵 Telegram
Join Telegram Channel

🟢 WhatsApp Channel
Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *