ನ. 28, 29ರಂದು ಬೆಂಗಳೂರಿನಲ್ಲಿ ಸಮಾಜಮುಖಿ ನುಡಿ ಹಬ್ಬ – ಸಾಹಿತ್ಯ ಸಮ್ಮೇಳನ: ಯೋಗೀಶ್ ಸಹ್ಯಾದ್ರಿ.

ಚಿತ್ರದುರ್ಗ:

ಸಮಾಜಮುಖಿ ಪ್ರಕಾಶನದ ವತಿಯಿಂದ 2026ನೇ ಸಾಲಿನ ‘ಸಮಾಜಮುಖಿ ನುಡಿ ಹಬ್ಬ – ಸಾಹಿತ್ಯ ಸಮ್ಮೇಳನ’ವನ್ನು ನವೆಂಬರ್ 28 ಮತ್ತು 29ರಂದು ಬೆಂಗಳೂರಿನ ಅರಮನೆ ರಸ್ತೆಯ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಆಯೋಜಿಸಲಾಗಿದೆ. ಎರಡು ದಿನಗಳ ಈ ಸಾಹಿತ್ಯ ಸಮ್ಮೇಳನದಲ್ಲಿ ನಾಲ್ಕು ವೇದಿಕೆಗಳ ಅಡಿಯಲ್ಲಿ ಒಟ್ಟು 42 ಗೋಷ್ಠಿಗಳು ನಡೆಯಲಿವೆ ಎಂದು ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ತಿಳಿಸಿದರು.

ನಗರದಲ್ಲಿ ಸಮಾಜಮುಖಿ ಓದುಗರ ಬಳಗದ ವತಿಯಿಂದ ಆಯೋಜಿಸಿದ್ದ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ನಾಲ್ಕು ವೇದಿಕೆಗಳಿಗೆ ಬಹುವಚನ ವೇದಿಕೆ, ಸಂಸ್ಕೃತಿ ಸಂಪದ ವೇದಿಕೆ, ಸೃಜನಶೀಲ ವೇದಿಕೆ ಮತ್ತು ಶಾಸ್ತ್ರೀಯ ವೇದಿಕೆ ಎಂದು ಹೆಸರಿಸಲಾಗಿದೆ. ಎರಡು ದಿನಗಳ ಕಾಲ ನಡೆಯುವ ಗೋಷ್ಠಿಗಳು ಕನ್ನಡ ಸಾಹಿತ್ಯ, ಭಾಷೆ, ಸಂಸ್ಕೃತಿ ಹಾಗೂ ಸಮಕಾಲೀನ ಸಮಾಜದ ವಿವಿಧ ಆಯಾಮಗಳ ಕುರಿತು ಚರ್ಚೆಗೆ ವೇದಿಕೆಯಾಗಲಿವೆ ಎಂದರು.

ಬಹುವಚನ ವೇದಿಕೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಗತಿ, ಕನ್ನಡಪರ ಹೋರಾಟದ ಇಂದಿನ ಸ್ಥಿತಿ, ಕನ್ನಡದಲ್ಲಿ ಸಂಶೋಧನೆಯ ಹೊಸ ದಾರಿಗಳು, ಜೆನ್ ಝೀ ತಲೆಮಾರಿನ ತಲ್ಲಣಗಳು ಮತ್ತು ಭರವಸೆಗಳು, ಕೃತಕ ಬುದ್ಧಿಮತ್ತೆಯ ಸೃಜನಶೀಲ ಸಾಧ್ಯತೆಗಳು, ಭಕ್ತಿ ಮತ್ತು ಅನುಭಾವ, ಭಾಷೆಗಳೊಡನೆ ಬದುಕು ಹಾಗೂ ಕನ್ನಡದ ಅಭಿಜಾತ ಪಠ್ಯಗಳ ಕುರಿತ ಇಂಗ್ಲಿಷ್ ಸಂವಾದಗಳು ನಡೆಯಲಿವೆ ಎಂದು ವಿವರಿಸಿದರು.

ಸಂಸ್ಕೃತಿ ಸಂಪದ ವೇದಿಕೆಯಲ್ಲಿ ನೃತ್ಯ, ರಂಗವಿನ್ಯಾಸ, ರಂಗಸಂಗೀತ, ಚಿತ್ರಕಲೆ, ಅನುವಾದ ಸಾಹಿತ್ಯ, ಪಶ್ಚಿಮ ಘಟ್ಟಗಳ ಪರಿಸರ ರಾಜಕೀಯ, ಕನ್ನಡ ಚಿತ್ರರಂಗದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ, ಸಮಕಾಲೀನ ಕಾದಂಬರಿಗಳ ಕುರಿತ ಸಂವಾದ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಮಕ್ಕಳು ಕನ್ನಡ ಸಾಹಿತ್ಯವನ್ನು ಏಕೆ ಓದುತ್ತಿಲ್ಲ ಎಂಬ ಮಹತ್ವದ ಪ್ರಶ್ನೆಯ ಬಗ್ಗೆಯೂ ವಿಚಾರ ವಿನಿಮಯ ನಡೆಯಲಿದೆ. ಅಲ್ಲದೆ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನದ ಅಂಗವಾಗಿ ವಿಶೇಷ ನಮನ ಗೋಷ್ಠಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿಗಳು, ಚಿಂತಕರು ಭಾಗಿ

ಸಮ್ಮೇಳನದ ಕುರಿತು ಮಾತನಾಡಿದ ಸಾಹಿತಿ ಹಾಗೂ ಬರಹಗಾರ್ತಿ, ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಭರಮಸಾಗರ ಅವರು, ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಪನಾ, ಎಂ. ವೀರಪ್ಪ ಮೊಯಿಲಿ, ಆರ್. ಸುನಂದಮ್ಮ, ಎನ್.ಆರ್. ವಿಶುಕುಮಾರ್ ಹಾಗೂ ಬೈರಮಂಗಲ ರಾಮೇಗೌಡ ಭಾಗವಹಿಸಲಿದ್ದಾರೆ ಎಂದರು.

ಸಮಾರೋಪ ಸಮಾರಂಭದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿ, ವಿಜಯಮ್ಮ, ಬಂಜಗೆರೆ ಜಯಪ್ರಕಾಶ್, ಕೆ.ವೈ. ನಾರಾಯಣಸ್ವಾಮಿ ಹಾಗೂ ಎಚ್.ಆರ್. ಸುಜಾತ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಹಿರಿಯ ಸಾಹಿತಿಗಳು, ಲೇಖಕರು, ಕಲಾವಿದರು ಹಾಗೂ ಚಿಂತಕರಾದ ಎಚ್.ಎಸ್. ಶಿವಪ್ರಕಾಶ್, ಓ.ಎಲ್. ನಾಗಭೂಷಣಸ್ವಾಮಿ, ಬಿ. ಜಯಶ್ರೀ, ಕರಿಯಪ್ಪ ಮಾಳಿಗೆ, ಬಂಜಗೆರೆ ಜಯಪ್ರಕಾಶ್, ತಾರಿಣಿ ಶುಭದಾಯಿನಿ, ಸುದೇಶ್ ಮಹಾನ್, ಶಶಿಧರ ಅಡಪ, ಅರವಿಂದ ಚೊಕ್ಕಾಡಿ, ಸುರೇಶ ಆನಗಳ್ಳಿ, ಬಿ. ಸುರೇಶ, ಜಿ.ಎನ್. ದೇವಿ, ಎಸ್.ಎನ್. ಶ್ರೀಧರ್, ಎಸ್.ಜಿ. ಸಿದ್ಧರಾಮಯ್ಯ, ಜಯಪ್ರಕಾಶಗೌಡ, ಕೃಪಾಕರ ಸೇನಾನಿ, ನಟರಾಜ ಹುಳಿಯಾರ್, ರಾಜೇಂದ್ರ ಚೆನ್ನಿ, ಚ.ಹ. ರಘುನಾಥ್, ಎಂ.ಎಸ್. ಆಶಾದೇವಿ, ಎಸ್. ನಟರಾಜ ಬೂದಾಳ್, ಎಸ್.ಆರ್. ವಿಜಯಶಂಕರ, ವಸುಂಧರ ಭೂಪತಿ, ವೈಜಯಂತಿಕಾಶಿ, ಹಿ.ಶಿ. ರಾಮಚಂದ್ರೇಗೌಡ, ಬಾ.ಹ. ರಮಾಕುಮಾರಿ, ತಮಿಳ್‌ಸೆಲ್ವಿ, ಎನ್.ಆರ್. ಲಲಿತಾಂಬ, ಮೇಟಿ ಮಲ್ಲಿಕಾರ್ಜುನ, ಆರ್. ಪೂರ್ಣಿಮಾ ಹಾಗೂ ಕಮಲಾಕರ ಭಟ್ಟ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತಿನ ಜಿಲ್ಲಾಧ್ಯಕ್ಷ ಮಾಲತೇಶ್ ಅರಸ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮಳಲಿ ಶ್ರೀನಿವಾಸ್, ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಶಿಕ್ಷಕಿ ಬ್ಲೆಸ್ಸಿ ಏಂಜೆಲ್, ಶಿಕ್ಷಕ ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *