Daily Horoscope (15-10-2026): ನವರಾತ್ರಿಯ ಐದನೇ ದಿನ ನಿಮ್ಮ ದಿನಭವಿಷ್ಯ ಹೇಗಿದೆ?

ಸಮಗ್ರ ಸುದ್ದಿ — ನಿಖರತೆಗೆ ಮತ್ತೊಂದು ಹೆಸರು

ಇಂದಿನ ಪಂಚಾಂಗ (15-10-2026)

  • ಸಂವತ್ಸರ: ಶಾಲಿವಾಹನ ಶಕೆ ೧೯೪೯, ಪರಾಭವ ನಾಮ ಸಂವತ್ಸರ
  • ಆಯನ ಹಾಗೂ ಋತು: ದಕ್ಷಿಣಾಯನ, ಶರತ್ ಋತು
  • ಮಾಸ ಹಾಗೂ ಪಕ್ಷ: ಆಶ್ವಯುಜ ಮಾಸ, ಶುಕ್ಲ ಪಕ್ಷ, ಕನ್ಯಾ ಸೌರ ಮಾಸ
  • ತಿಥಿ ಹಾಗೂ ವಾರ: ಪಂಚಮೀ, ಗುರುವಾರ
  • ನಕ್ಷತ್ರ ಹಾಗೂ ಯೋಗ: ಮಹಾನಕ್ಷತ್ರ – ಚಿತ್ರಾ, ನಿತ್ಯನಕ್ಷತ್ರ – ಜ್ಯೇಷ್ಠಾ, ಸೌಭಾಗ್ಯ ಯೋಗ, ಬಾಲವ ಕರಣ.
  • ಸೂರ್ಯೋದಯ – ಸೂರ್ಯಾಸ್ತ: ಬೆಳಿಗ್ಗೆ 06:10 ರಿಂದ ಸಂಜೆ 05:59 ರವರೆಗೆ.

ಶುಭಾಶುಭ ಸಮಯಗಳು:

  • ರಾಹು ಕಾಲ: ಮಧ್ಯಾಹ್ನ 01:34 ರಿಂದ 03:02 ರವರೆಗೆ
  • ಯಮಗಂಡ ಕಾಲ: ಬೆಳಿಗ್ಗೆ 06:11 ರಿಂದ 07:40 ರವರೆಗೆ
  • ಗುಳಿಕ ಕಾಲ: ಬೆಳಿಗ್ಗೆ 09:08 ರಿಂದ 10:37 ರವರೆಗೆ

ನವರಾತ್ರಿ ವಿಶೇಷ: ಇಂದು ಶರನ್ನವರಾತ್ರಿಯ ಐದನೇ ದಿನ. ಜಗನ್ಮಾತೆ ಸ್ಕಂದಮಾತೆಯು ಸಕಲರ ಸಂಕಷ್ಟಗಳನ್ನು ಪರಿಹರಿಸಿ, ಜಗತ್ತನ್ನು ವಾತ್ಸಲ್ಯದಿಂದ ಕಾಯಲಿ ಎಂಬ ಪ್ರಾರ್ಥನೆಯೊಂದಿಗೆ ಇಂದಿನ ಭವಿಷ್ಯದ ವಿವರ ಇಲ್ಲಿದೆ.

ಇಂದಿನ ದ್ವಾದಶ ರಾಶಿಗಳ ಭವಿಷ್ಯ

ಮೇಷ ರಾಶಿ: ಅಪರಿಚಿತರೊಂದಿಗಿನ ನಿಮ್ಮ ಸೌಜನ್ಯದ ಮಾತುಕತೆಗಳು ಹೊಸ ಸಂಬಂಧಗಳನ್ನು ಬೆಸೆಯಲಿವೆ. ಅನಿರೀಕ್ಷಿತ ಧನಲಾಭದ ಯೋಗವಿದೆ. ಸುಲಭವಾಗಿ ಆಗಬೇಕಿದ್ದ ಕೆಲಸಗಳಿಗೆ ಕೊಂಚ ಶ್ರಮಪಡಬೇಕಾದೀತು. ದಾಂಪತ್ಯದಲ್ಲಿ ನಂಬಿಕೆ ವೃದ್ಧಿಸಲಿದ್ದು, ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಲಿದೆ. ವಿರೋಧಿಗಳ ಎದುರು ಮೌನವೇ ನಿಮ್ಮ ಅಸ್ತ್ರವಾಗಲಿ.

ವೃಷಭ ರಾಶಿ: ಅತಿಯಾದ ನಂಬಿಕೆ ನಿರಾಸೆ ಮೂಡಿಸಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಮರುಪರಿಶೀಲನೆ ಅಗತ್ಯ, ಆತುರದ ಒಪ್ಪಿಗೆ ಬೇಡ. ಆರ್ಥಿಕ ವಂಚನೆಯಾಗುವ ಸಾಧ್ಯತೆ ಇರುವುದರಿಂದ ಎಚ್ಚರವಹಿಸಿ. ಕಚೇರಿಯ ಕೆಲಸಗಳಿಗಿಂತ ವೈಯಕ್ತಿಕ ಕೆಲಸಗಳಿಗೆ ಹೆಚ್ಚು ಒತ್ತು ನೀಡುವಿರಿ. ಆರೋಗ್ಯದ ಕಡೆ ವಿಶೇಷ ಗಮನ ಹರಿಸುವುದು ಒಳಿತು.

ಮಿಥುನ ರಾಶಿ: ಅಪರಿಚಿತ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಳ್ಳದಿರಿ. ಕುಶಲಕರ್ಮಿಗಳಿಗೆ ಭರ್ಜರಿ ಲಾಭ ಕಾದಿದೆ. ಸರ್ಕಾರಿ ಕೆಲಸಗಳಿಗಾಗಿ ಅಲೆದಾಟ ಹೆಚ್ಚಾಗಬಹುದು. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ, ಆದರೆ ಮುಖ್ಯ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ಬೇಡ. ನಿಮ್ಮ ವಿಶಾಲ ಮನೋಭಾವಕ್ಕೆ ಸಮಾಜದಲ್ಲಿ ಗೌರವ ಲಭಿಸಲಿದೆ.

ಕರ್ಕಾಟಕ ರಾಶಿ: ವಿರೋಧಿಗಳು ನಿಮ್ಮನ್ನು ಗುರಿಯಾಗಿಸುವ ಸಾಧ್ಯತೆ ಇದೆ ಎಚ್ಚರ. ಬಹುನಿರೀಕ್ಷಿತ ಬಡ್ತಿ ಅಥವಾ ಉನ್ನತ ಸ್ಥಾನ ದೊರೆಯುವ ಯೋಗವಿದೆ. ನಿಮ್ಮ ಆಧ್ಯಾತ್ಮಿಕ ಒಲವಿಗೆ ತಕ್ಕ ಪ್ರತಿಫಲ ಸಿಗಲಿದೆ. ನಿಮ್ಮ ಸಾಮರ್ಥ್ಯ ಪ್ರದರ್ಶಿಸಲು ಹಿಂದೇಟು ಹಾಕದಿರಿ. ಕೌಟುಂಬಿಕ ಸಂಬಂಧಗಳಲ್ಲಿನ ಸಣ್ಣಪುಟ್ಟ ಸವಾಲುಗಳನ್ನು ತಾಳ್ಮೆಯಿಂದ ಎದುರಿಸಿ.

ಸಿಂಹ ರಾಶಿ: ನಿಮ್ಮ ಸತತ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಹೋದ್ಯೋಗಿಗಳ ಕಿರಿಕಿರಿಯಿಂದ ಕೆಲಸದಲ್ಲಿ ಅಸಮಾಧಾನ ಮೂಡಬಹುದು. ದೈವಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಮನಸ್ಸಿಗೆ ಶಾಂತಿ ನೀಡಲಿದೆ. ಪಿತೃಕಾರ್ಯಗಳಿಂದ ಕೆಲವು ವಿಘ್ನಗಳು ನಿವಾರಣೆಯಾಗಲಿವೆ. ಮಕ್ಕಳ ವರ್ತನೆಯಿಂದ ಕೊಂಚ ಬೇಸರವಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಆರ್ಥಿಕ ವಿಚಾರಗಳಲ್ಲಿ ಶುಭಫಲಗಳಿವೆ. ಹೊಸ ಯೋಜನೆಗಳು ನಿಮ್ಮನ್ನು ಅರಸಿ ಬರಲಿವೆ. ಮಾತುಗಳು ನೇರ ಹಾಗೂ ಸ್ಪಷ್ಟವಾಗಿರಲಿ, ಸುತ್ತಿಬಳಸಿ ಮಾತನಾಡಿ ಸಮಯ ವ್ಯರ್ಥ ಮಾಡಬೇಡಿ. ಉದ್ಯೋಗದ ಸ್ಥಳದಲ್ಲಿ ತಾಳ್ಮೆ ಕಾಯ್ದುಕೊಳ್ಳುವುದು ಅತ್ಯಗತ್ಯ. ಯಾವುದೋ ಅಗೋಚರ ಶಕ್ತಿ ನಿಮ್ಮನ್ನು ಕಾಪಾಡುತ್ತಿರುವ ಅನುಭವವಾಗಲಿದೆ.

ತುಲಾ ರಾಶಿ: ಕೆಲಸದ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಸಂಗಾತಿಯ ಇಷ್ಟಾರ್ಥಗಳನ್ನು ಪೂರೈಸುವ ಮೂಲಕ ನೆಮ್ಮದಿ ಕಾಣುವಿರಿ. ನಿಮ್ಮ ಅತಿಯಾದ ಒಳ್ಳೆಯತನವೇ ನಿಮಗೆ ಮುಳುವಾಗಬಹುದು. ಇಷ್ಟವಿಲ್ಲದ ವ್ಯಕ್ತಿಗಳೊಂದಿಗೆ ಒಡನಾಡಬೇಕಾದ ಅನಿವಾರ್ಯತೆ ಎದುರಾಗಬಹುದು.

ವೃಶ್ಚಿಕ ರಾಶಿ: ವಿವಾಹ ಸಂಬಂಧಿತ ವಿಚಾರಗಳಲ್ಲಿ ಮನೆಯವರಿಂದ ಒತ್ತಡ ಹೆಚ್ಚಾಗಬಹುದು. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಆಧ್ಯಾತ್ಮದತ್ತ ಮನಸ್ಸು ವಾಲಲಿದೆ. ಇತರರ ಮಾತುಗಳನ್ನು ಕುರುಡಾಗಿ ನಂಬಿ ಕಾರ್ಯಪ್ರವೃತ್ತರಾದರೆ ಅಪಮಾನ ಎದುರಿಸಬೇಕಾದೀತು, ಎಚ್ಚರಿಕೆ ಹೆಜ್ಜೆ ಇಡಿ. ಅಂದುಕೊಂಡ ಕೆಲಸಗಳು ಸುಲಭವಾಗಿ ಈಡೇರುವುದಿಲ್ಲ.

ಧನು ರಾಶಿ: ನಿಮ್ಮನ್ನು ನೀವು ಒಂಟಿ ಎಂದು ಭಾವಿಸದಿರಿ. ಸಾಮಾಜಿಕ ಮನ್ನಣೆ ದೊರಕುವ ಅವಕಾಶವಿದ್ದರೂ ಕೆಲವು ಅಡೆತಡೆಗಳಾಗಬಹುದು. ಜವಾಬ್ದಾರಿಯುತ ಸ್ಥಾನಮಾನ ನಿಮ್ಮದಾಗಲಿದೆ. ಆಹಾರ ಸೇವನೆಯಲ್ಲಿ ಎಚ್ಚರವಿರಲಿ, ಆರೋಗ್ಯ ಕೆಡಿಸಿಕೊಳ್ಳದಿರಿ. ಸಂಗಾತಿಗೆ ಅಚ್ಚರಿಯ ಉಡುಗೊರೆ ನೀಡುವ ಮೂಲಕ ಸಂತಸ ಹಂಚಿಕೊಳ್ಳಿ.

ಮಕರ ರಾಶಿ: ಅನಿರೀಕ್ಷಿತ ಸುದ್ದಿಯೊಂದು ನಿಮ್ಮನ್ನು ಚಿಂತೆಗೀಡುಮಾಡಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳ ಸೂಚನೆಯಂತೆ ನಡೆಯುವುದು ಉತ್ತಮ, ನಿಮ್ಮದೇ ನಿರ್ಧಾರಗಳು ನಿಮ್ಮ ಮೇಲೆ ಅಪವಾದ ತರಬಹುದು. ಮನೆಕೆಲಸದ ಒತ್ತಡ ಹೆಚ್ಚಲಿದ್ದು, ಅಪರಿಚಿತ ಸಂಸ್ಥೆಗಳಲ್ಲಿ ಆರ್ಥಿಕ ಹೂಡಿಕೆ ಮಾಡುವ ಸಾಹಸಕ್ಕೆ ಕೈಹಾಕದಿರಿ.

ಕುಂಭ ರಾಶಿ: ದೀರ್ಘಕಾಲದ ಸ್ನೇಹದಲ್ಲಿ ಮಾತಿನ ಚಕಮಕಿಯಿಂದ ಬಿರುಕು ಮೂಡುವ ಸಾಧ್ಯತೆ ಇದೆ. ಆದ್ದರಿಂದ, ಏಕಾಂತವನ್ನು ಹೆಚ್ಚು ಬಯಸುವಿರಿ. ಆರ್ಥಿಕ ಹೂಡಿಕೆಗಳ ಕಡೆಗೆ ಗಮನ ಹರಿಸಲಿದ್ದೀರಿ. ವೈಯಕ್ತಿಕ ಕೆಲಸಗಳಿಗೆ ಸಮಯ ಹೊಂದಿಸುವುದು ಕಷ್ಟವಾದರೂ, ನಿಮ್ಮ ಕಾರ್ಯಕ್ಷಮತೆಯಿಂದ ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ.

ಮೀನ ರಾಶಿ: ಆದಾಯದ ಮೂಲಗಳಲ್ಲಿ ಕೊಂಚ ಇಳಿತ ಕಂಡುಬರಬಹುದು, ಆದ್ದರಿಂದ ಇರುವ ಸಂಪತ್ತಿನ ಉಳಿತಾಯಕ್ಕೆ ಸೂಕ್ತ ಯೋಜನೆ ರೂಪಿಸಿ. ಅನಿರೀಕ್ಷಿತ ಧನಲಾಭದ ಆಸೆ ಕೈಬಿಡಿ. ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯಗಳನ್ನು ನಿಮ್ಮ ವಿವೇಚನೆಯಿಂದ ಬಗೆಹರಿಸಿಕೊಳ್ಳಿ, ಗೊಂದಲಗಳೊಂದಿಗೆ ಮುನ್ನಡೆಯುವುದು ಬೇಡ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group
Join WhatsApp Group

🔵 Facebook Page
Follow Facebook Page

⚫ Twitter / X
Follow on X (Twitter)

🟣 Threads
Follow on Threads

🟠 Instagram
Follow on Instagram

🔵 Telegram
Join Telegram Channel

🟢 WhatsApp Channel
Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *