ಚಿತ್ರದುರ್ಗದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ವಾಗ್ದಾಳಿ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಬೆಂಬಲಿಸಲು ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಅ. 18: ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಘೋಷಿಸಿ ವಿಜೃಂಭಿಸುತ್ತಿದೆ ಹೊರತು, ಗ್ಯಾರಂಟಿ ಕೊಡುವು ದಕ್ಕಿಂತ ಮುಂಚೆ ಜನತೆ ಉಸಿರಾಡುತ್ತಿರಲಿಲ್ಲವೇ ಅವರು, ಗ್ಯಾರಂಟಿ ಕೊಟ್ಟ ಮೇಲೆಯೇ ಹೆಣ್ಣು ಮಕ್ಕಳು, ಪದವೀಧರರು ಬದುಕುತ್ತಿದ್ದಾರೆ ಎಂಬಂತೆ ಸರ್ಕಾರ ಬಿಂಬಿಸುತ್ತಿದೆ ವಿದ್ಯುತ್ ಬಿಲ್ ಕಟ್ಟಲಾಗದೆ ಕತ್ತಲಲ್ಲಿ ವಾಸಿಸುತ್ತಿದ್ದ ಮಹಿಳೆಯರು ಇಂದು ಬದುಕುಳಿದಿದ್ದಾರೆ ಎನ್ನುವ ಮಟ್ಟಕ್ಕೆ ಸರ್ಕಾರ ಜಪ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರು, ರಾಜ್ಯ ಬಿಜೆಪಿ ವಕ್ತಾರರಾದ ಕೆ.ಎಸ್.ನವೀನ್ ಸರ್ಕಾರದ ಗ್ಯಾರೆಂಟಿಯನ್ನು ಟೀಕಿಸಿದರು.

ಚಿತ್ರದುರ್ಗ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ ನೀಡುವುದಾಗಿ ಘೋಷಿಸಿದ್ದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಪದವೀಧರರಿಗೆ ಅನ್ಯಾಯಮಾಡಿದೆ.. ಯುವನಿಧಿ ಹೆಸರಿನಲ್ಲಿ ಮಾಸಾಶನ ನೀಡುತ್ತೇನೆ ಎಂದು ಹೇಳಿ ಪದವೀದರ ನೋಂದಣಿಯಲ್ಲಿಯೂ ನ್ಯೂನತೆ ಮಾಡಿದೆಸರ್ಕಾರ, ರಾಜ್ಯದಲ್ಲಿ 60,000 ಜನರಿಗೆ ಮಾತ್ರ ಇದನ್ನು ನೀಡುತ್ತಿದ್ದೇವೆ ಎಂದು ವಿಧಾನಸಭೆಯಲ್ಲಿ ಉತ್ತರಿಸಿದೆ. ಆದರೆ ವಾಸ್ತವದಲ್ಲಿ ಯುವನಿಧಿಯನ್ನು ಸರಿಯಾಗಿ ಅನುಷ್ಠಾನಗೊಳಿಸದೆ, ಅರ್ಜಿ ಹಾಕಿಸಿಕೊಳ್ಳುವುದೇ ಕಷ್ಟಕರವಾಗಿಸಿ ನಿರುದ್ಯೋಗಿಗಳಿಗೆ ಅನ್ಯಾಯ ಮಾಡಲಾಗಿದೆ. ರೈತರು, ನೇಕಾರರು ಮತ್ತು ಮೀನುಗಾರರ ಮಕ್ಕಳಿಗಾಗಿ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಹಾಗೂ ‘ವಿದ್ಯಾಸಿರಿ’ ಕಾರ್ಯಕ್ರಮಗಳನ್ನು ಹಾಗೂ 7 ಹೊಸ ವಿಶ್ವವಿದ್ಯಾಲಯಗಳನ್ನು ಪ್ರಸ್ತುತ ಸರ್ಕಾರ ರದ್ದು ಪಡಿಸಿದೆ. ಕೆಪಿಎಸ್ಸಿ ಮೂಲಕ ನೇಮಕಾತಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸರ್ಕಾರಿ ಹುದ್ದೆಗಳನ್ನು ತುಂಬುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುತ್ತೇವೆ ಎಂದಿದ್ದ ಸರ್ಕಾರ ಸಮಿತಿಯೊಂದನ್ನು ರಚಿಸಿ ಮರೆತುಹೋಗಿದೆ. ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಕಾಯಂಗೊಳಿಸುವುದಾಗಿ ಭರವಸೆ ನೀಡಿ, ಈಗ ಅವರನ್ನು ಕೆಲಸದಿಂದ ಕಿತ್ತಹಾಕುವ ಪರಿಸ್ಥಿತಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಹುಸಿ ಭರವಸೆಗಳು ಮತ್ತು ಜನವಿರೋಧಿ ಧೋರಣೆಗಳಿಂದ ರಾಜ್ಯದಲ್ಲಿ ತೀವ್ರ ಆರ್ಥಿಕ ಹಾಗೂ ಸಾಮಾಜಿಕ ಬರಗಾಲ ನಿರ್ಮಾಣವಾಗಿದೆ. ಆದ್ದರಿಂದ ಪ್ರಜ್ಞಾವಂತ ಶಿಕ್ಷಕಹಾಗೂ ಪದವೀಧರ ಮತದಾರರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ, ಎನ್.ಡಿ.ಎ. ಅಭ್ಯರ್ಥಿಗಳನ್ನು, ವಿಶೇಷವಾಗಿ ಆಗ್ನೇಯ ಪದವೀಧರ ಕ್ಷೇತ್ರದ ಕೆ.ಎಂ. ಸುರೇಶ್ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಮನವಿ ಮಾಡಲಾಯಿತು.

ಆಗ್ನೇಯ ಪದವೀಧರ ಕ್ಷೇತ್ರವನ್ನು ಇದುವರೆಗೂ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ. 08 ಬಾರಿ ಬಿಜೆಪಿ ಪಕ್ಷ, 01 ಬಾರಿ ಜನ ಸಂಘ ಹಾಗೂ 01 ಬಾರಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದೆ. ಕಾಂಗ್ರೆಸ್ ಪಕ್ಷ ಯಾವತ್ತೂ ಸಹ ಪದ ವೀಧರ ಪರವಾಗಿಲ್ಲ.. ಅವರ ವಿರುದ್ಧವಾಗಿಯೇ ಕೆಲಸವನ್ನು ಮಾಡುತ್ತಿದೆ ಇದನ್ನು ಆಗ್ನೇಯ ಪದವೀಧರ ಕ್ಷೇತ್ರದ ಮತದಾರರು ಅರಿಯಬೇಕಿದೆ.ಅಕ್ಟೋಬರ್-23ರ ಚುನಾವಣೆಯ ನಂತರ ಯುವಜನತೆಯನ್ನು ದಾರಿ ತಪ್ಪಿಸಿ ಅವರನ್ನು ದಂಗೆಗೆ ಪ್ರಚೋದಿಸುತ್ತಿರುವ ರಾಹುಲ್ ಗಾಂಧಿಯವರ ನಡೆಯನ್ನು ಖಂಡಿಸಿ ಪ್ರತಿಭಟನೆ ಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಮಾಧುರೀ ಗೀರೀಶ್ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group
Join WhatsApp Group

🔵 Facebook Page
Follow Facebook Page

⚫ Twitter / X
Follow on X (Twitter)

🟣 Threads
Follow on Threads

🟠 Instagram
Follow on Instagram

🔵 Telegram
Join Telegram Channel

🟢 WhatsApp Channel
Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *