ಚಿತ್ರದುರ್ಗದ ಕಬೀರಾನಂದಾಶ್ರಮದಲ್ಲಿ ನವರಾತ್ರಿ ಸಂಭ್ರಮ: ವಿಜೃಂಭಣೆಯಿಂದ ಜರುಗಿದ ಚಂಡಿಕಾ ಹೋಮ ಹಾಗೂ ಶ್ರೀದೇವಿ ಪುರಾಣ ಪ್ರವಚನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಅ. 18 ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿನ ಶ್ರೀ ಕಬೀರಾನಂದಾಶ್ರಮದಲ್ಲಿನ ಶ್ರೀ ಭಗವತಿ ಬಗಳಾಂಬಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಕಳೆದ 11 ರಿಂದ ಪ್ರತಿ ದಿನ ಸಂಜೆ 7 ರಿಂದ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ಸಾನಿಧ್ಯದಲ್ಲಿ ಶ್ರೀದೇವಿ ಪುರಾಣವನ್ನು ಪ್ರವಚನ ಮಾಡಲಾಗುತ್ತಿದೆ.


ಮಲ್ಲಾಪುರ ಗೊಲ್ಲರಹಟ್ಟಿಯ ತಿಪ್ಪೇಸ್ವಾಮಿಯವರು ದೇವಿಯ ಚರಿತ್ರೆಯನ್ನು ಪಠಿಸಿದರೆ ಸಾಹಿತಿಗಳಾದ ಹುರಳಿ ಬಸವರಾಜು ಚರಿತ್ರೆಯನ್ನು ಪ್ರವಾಚನ ಮಾಡುತ್ತಿದ್ದಾರೆ. ಇವರೊಂದಿಗೆ ಜಾನಪದ ಕಲಾವಿದರಾದ ಆಯಿತೋಳ ವಿರೂಪಾಕ್ಷಪ್ಪ ಹಾರ್ಮೋನಿಯಂ, ಯಶವಂತಕುಮಾರ್ ತಬಲವನ್ನು ನುಡಿಸುತ್ತಿದ್ದಾರೆ. ಅ. 18ರ ಭಾನುವಾರದ ಇಂದು ಶ್ರೀ ಸದ್ಗುರು ಕಬೀರಾನಂದಸ್ವಾಮಿ ಸಂಸ್ಕøತ ಪಾಠ ಶಾಲೆಯ ಶಿಕ್ಷಕರಾದ ಸುಬ್ರಾಯ ತಿಮ್ಮಣ್ಣ ಹಾಗೂ ಮಂಜುನಾಥ್ ಭಟ್ಟರ ನೇತೃತ್ವದಲ್ಲಿ ಚಂಡಿಕಾ ಹೋಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಆಗಮಿಸುವುದರ ಮೂಲಕ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದರು.


ಅ. 21ರವರೆಗೆ ಪ್ರತಿ ದಿನ ಸಂಜೆ ದೇವಿ ಪ್ರವಚನ ನಡೆಯಲಿದ್ದು, ಅ, 21ರ ಮಧ್ಯಾಹ್ನ 4 ಗಂಟೆಗೆ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳವರ 120ನೇ ವರ್ಷದ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7 ಗಂಟೆಗೆ ಬನ್ನಿ ಮುಡಿಯುವುದು ಹಾಗೂ ಶ್ರೀ ದೇವಿ ಪುರಾಣದ ಮುಕ್ತಾಯ ಸಮಾರಂಭ ನಡೆಯಲಿದೆ.


ಈ ಸಂದರ್ಭದಲ್ಲಿ ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ ಯೋಗಿಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *