ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನ ಚಾಲನಾ ಪರವಾನಗಿ (DL) ಪಡೆಯುವ ಮತ್ತು ನವೀಕರಿಸುವ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮೋಟಾರು ವಾಹನ ಕಾಯ್ದೆಯಡಿ ಮಹತ್ವದ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಕಚೇರಿಗಳಲ್ಲಿನ ವಿಳಂಬ ನೀತಿಯನ್ನು ತಪ್ಪಿಸುವುದು ಮತ್ತು ಡಿಜಿಟಲೀಕರಣವನ್ನು ಉತ್ತೇಜಿಸುವುದು ಈ ಹೊಸ ಪ್ರಸ್ತಾವನೆಯ ಪ್ರಮುಖ ಉದ್ದೇಶವಾಗಿದೆ.
ಕರಡು ಅಧಿಸೂಚನೆಯ ಪ್ರಮುಖ ಅಂಶಗಳು
ಶೇ. 75 ಅಂಕಗಳ ಕಡ್ಡಾಯ ಮತ್ತು ಕಠಿಣ ಪರೀಕ್ಷೆ ರಸ್ತೆ ಅಪಘಾತಗಳನ್ನು ತಡೆಯುವ ಹಾಗೂ ಚಾಲಕರಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ‘ಸುರಕ್ಷಿತ ಚಾಲನಾ ಟ್ಯುಟೋರಿಯಲ್’ ಮೌಲ್ಯಮಾಪನವನ್ನು ಕಠಿಣಗೊಳಿಸಲಾಗುತ್ತಿದೆ. ಈ ಮೊದಲು ಉತ್ತೀರ್ಣರಾಗಲು ಶೇ. 60 ಅಂಕಗಳು ಸಾಕಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ, ಕನಿಷ್ಠ 30 ನಿಮಿಷಗಳ ಕಾಲಾವಧಿಯ ಈ ಪರೀಕ್ಷೆಯಲ್ಲಿ ಶೇ. 75 ಅಂಕ ಪಡೆಯುವುದು ಕಡ್ಡಾಯವಾಗಲಿದೆ.
ಸೇವೆಗಳಿಗೆ 15 ದಿನಗಳ ಕಟ್ಟುನಿಟ್ಟಿನ ಗಡುವು ಲೈಸೆನ್ಸ್ನಲ್ಲಿ ಹೆಸರು ಅಥವಾ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ, ಆರ್ಟಿಒ ಅಧಿಕಾರಿಗಳು ಗರಿಷ್ಠ 15 ದಿನಗಳ ಒಳಗೆ ಅದನ್ನು ವಿಲೇವಾರಿ ಮಾಡಬೇಕು. ತಿರಸ್ಕರಿಸಿದರೆ ಸೂಕ್ತ ಕಾರಣ ಒದಗಿಸಬೇಕು. ಒಂದು ವೇಳೆ 30 ದಿನಗಳಾದರೂ ಅಧಿಕಾರಿಗಳು ವಿಳಾಸ ಬದಲಾವಣೆ ಅರ್ಜಿಯ ಮೇಲೆ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ, ಆ ಅರ್ಜಿಯನ್ನು ‘ಸ್ವಯಂಚಾಲಿತವಾಗಿ ಅನುಮೋದಿಸಲಾಗಿದೆ’ ಎಂದು ಪರಿಗಣಿಸುವ ಕ್ರಾಂತಿಕಾರಿ ನಿಯಮವನ್ನು ತರಲಾಗುತ್ತಿದೆ.
ಉಚಿತ ಆನ್ಲೈನ್ ಸೇವೆಗಳು ಮತ್ತು ಸಮಗ್ರ ಅರ್ಜಿ ಆಧಾರ್ ದೃಢೀಕರಣದ ಮೂಲಕ ಪಡೆಯುವ ಹೆಸರು ಮತ್ತು ವಿಳಾಸ ತಿದ್ದುಪಡಿಯಂತಹ ಆನ್ಲೈನ್ ಸೇವೆಗಳಿಗೆ ಶುಲ್ಕ ವಿನಾಯಿತಿ ನೀಡಲು ಚಿಂತಿಸಲಾಗಿದೆ. ಜತೆಗೆ ಹೊಸ ವಾಹನ ವರ್ಗ ಸೇರ್ಪಡೆ, ನವೀಕರಣ ಹಾಗೂ ನಕಲಿ ಲೈಸೆನ್ಸ್ ಪಡೆಯಲು ‘ಸಾರಥಿ’ (Sarathi) ಪೋರ್ಟಲ್ನಲ್ಲಿ ಪದೇಪದೇ ಮಾಹಿತಿ ನೀಡುವ ಬದಲು, ಒಂದೇ ಸಮಗ್ರ ಅರ್ಜಿಯನ್ನು ಪರಿಚಯಿಸಲಾಗುತ್ತಿದೆ.
ವಿಳಾಸ ಪುರಾವೆಯಾಗಿ ಎಲ್ಐಸಿ ಬಾಂಡ್ ರದ್ದು ಗುರುತು ಮತ್ತು ವಿಳಾಸ ದೃಢೀಕರಣಕ್ಕೆ ಆಧಾರ್, ಪಾಸ್ಪೋರ್ಟ್, ವೋಟರ್ ಐಡಿ, ಶೈಕ್ಷಣಿಕ/ಜನನ ಪ್ರಮಾಣಪತ್ರ ಹಾಗೂ ಕಳೆದ 3 ತಿಂಗಳ ಒಳಗಿನ ವಿದ್ಯುತ್ ಅಥವಾ ಗ್ಯಾಸ್ ಬಿಲ್ಗಳನ್ನು ಬಳಸಬಹುದು. ಆದರೆ, ಈ ಹಿಂದೆ ಮಾನ್ಯತೆ ಹೊಂದಿದ್ದ ‘ಎಲ್ಐಸಿ ಪಾಲಿಸಿ ಬಾಂಡ್’ಗಳನ್ನು ಈ ದಾಖಲೆಗಳ ಪಟ್ಟಿಯಿಂದ ಕೈಬಿಡಲಾಗಿದೆ.
ವಾಹನ ವರ್ಗ ರದ್ದತಿಗೆ 1 ವರ್ಷದ ನಿರ್ಬಂಧ ಯಾರಾದರೂ ತಮ್ಮ ಲೈಸೆನ್ಸ್ನಿಂದ ನಿರ್ದಿಷ್ಟ ವಾಹನದ ವರ್ಗವನ್ನು (ಉದಾ: ಬೈಕ್ ಅಥವಾ ಭಾರಿ ವಾಹನ) ರದ್ದುಗೊಳಿಸಲು ಅರ್ಜಿ ಸಲ್ಲಿಸಿದರೆ ಕೇವಲ 7 ದಿನಗಳಲ್ಲಿ ಅದನ್ನು ತೆಗೆದುಹಾಕಲಾಗುತ್ತದೆ. ಆದರೆ, ಒಮ್ಮೆ ರದ್ದುಪಡಿಸಿದರೆ ಮುಂದಿನ 1 ವರ್ಷದವರೆಗೆ ಆ ವರ್ಗಕ್ಕೆ ಹೊಸದಾಗಿ ಲರ್ನರ್ಸ್ ಅಥವಾ ಡಿಎಲ್ ಪಡೆಯಲು ಅವಕಾಶವಿರುವುದಿಲ್ಲ.
ಈ ಬದಲಾವಣೆಗಳು ಸದ್ಯ ಕರಡು ಹಂತದಲ್ಲಿದ್ದು, ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳಿಗೆ 30 ದಿನಗಳ ಅವಕಾಶ ನೀಡಲಾಗಿದೆ. ಎಲ್ಲವನ್ನೂ ಪರಿಶೀಲಿಸಿದ ಬಳಿಕವಷ್ಟೇ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು