ಕಂಟೆಂಟ್ ಕ್ರಿಯೇಟರ್ಗಳಿಗೆ ಶುಭ ಸುದ್ದಿ. ಶಾರ್ಟ್ ವಿಡಿಯೋ ಮಾಡುವವರಿಗೆ ಇನ್ನು ಮುಂದೆ ಬಂಪರ್ ಆದಾಯ ಕಾದಿದೆ. ಜನಪ್ರಿಯ ಸಾಮಾಜಿಕ ಜಾಲತಾಣ ‘ಎಕ್ಸ್’ (ಹಿಂದಿನ ಟ್ವಿಟರ್) ಹೊಸದಾಗಿ ‘ವಿಡಿಯೋ ಕಿಕ್-ಸ್ಟಾರ್ಟ್ ಬೋನಸ್’ (Video Kickstart Bonus) ಎಂಬ ವಿನೂತನ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ.
ಸಾಮಾನ್ಯವಾಗಿ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ವೀಕ್ಷಣೆ (ವ್ಯೂವ್ಸ್) ಮತ್ತು ವೀಕ್ಷಿಸಿದ ಅವಧಿಯ ಆಧಾರದ ಮೇಲೆ ಹಣ ನೀಡಲಾಗುತ್ತದೆ. ಆದರೆ ಎಕ್ಸ್ ಪ್ಲಾಟ್ಫಾರ್ಮ್ ತರುತ್ತಿರುವ ಈ ಹೊಸ ಯೋಜನೆಯಲ್ಲಿ, ಕೇವಲ ನಿಯಮಿತವಾಗಿ ವಿಡಿಯೋ ಪೋಸ್ಟ್ ಮಾಡಿದರೆ ಸಾಕು, ತಿಂಗಳಿಗೆ ಬರೋಬ್ಬರಿ 3,000 ಡಾಲರ್ (ಅಂದಾಜು 2.85 ಲಕ್ಷ ರೂಪಾಯಿ) ಗಳಿಸುವ ಅವಕಾಶವಿದೆ ಎಂದು ಕ್ರಿಯೇಟರ್ ಪ್ರಾಡಕ್ಟ್ ಮುಖ್ಯಸ್ಥರಾದ ಅಲೀಗ್ರಾ ಜಾಚಿಯಾ ಮಾಹಿತಿ ನೀಡಿದ್ದಾರೆ.
ಹಳೆಯ ಯೋಜನೆಗೂ ಇದಕ್ಕೂ ಏನು ವ್ಯತ್ಯಾಸ? ಈಗಾಗಲೇ ಎಕ್ಸ್ನಲ್ಲಿ ‘ಒರಿಜಿನಲ್ ಕಂಟೆಂಟ್ ರಿವಾರ್ಡ್ಸ್’ ಎಂಬ ಪ್ರೋಗ್ರಾಮ್ ಇದೆ. ಆದರೆ ಅದಕ್ಕೆ ಪ್ರೀಮಿಯಂ ಸಬ್ಸ್ಕ್ರಿಪ್ಷನ್, ಕನಿಷ್ಠ 500 ವೆರಿಫೈಡ್ ಫಾಲೋವರ್ಸ್ ಹಾಗೂ 5 ಲಕ್ಷ ಇಂಪ್ರೆಷನ್ಸ್ ಇರುವುದು ಕಡ್ಡಾಯವಾಗಿತ್ತು. ಆದರೆ, ಈ ಹೊಸ ‘ವಿಡಿಯೋ ಕಿಕ್-ಸ್ಟಾರ್ಟ್ ಬೋನಸ್’ ಯೋಜನೆಗೆ ಯಾವುದೇ ಪ್ರೀಮಿಯಂ ಚಂದಾದಾರಿಕೆ ಅಥವಾ ಫಾಲೋವರ್ಸ್ ಗುರಿಯ ಷರತ್ತುಗಳಿಲ್ಲ. ಬದಲಾಗಿ, ಕಂಟೆಂಟ್ ಕ್ರಿಯೇಟರ್ಗಳನ್ನು ಎಕ್ಸ್ ಸಂಸ್ಥೆಯೇ ನೇರವಾಗಿ ಆಯ್ಕೆ ಮಾಡಲಿದೆ.
ನಿಯಮ ಮತ್ತು ಷರತ್ತುಗಳೇನು?
- ವಿಡಿಯೋ ಸ್ವರೂಪ: ವಿಡಿಯೋಗಳು ಲಂಬವಾಗಿ (Vertical Format) ಇರಬೇಕು ಹಾಗೂ 3 ನಿಮಿಷಕ್ಕಿಂತ ಕಡಿಮೆ ಅವಧಿಯದ್ದಾಗಿರಬೇಕು.
- ಒರಿಜಿನಲ್ ಕಂಟೆಂಟ್: ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಿಮ್ಮದೇ ವಿಡಿಯೋಗಳನ್ನು ಇಲ್ಲಿಯೂ ಬಳಸಬಹುದು. ಆದರೆ, ಆ ವಿಡಿಯೋಗಳ ಮೇಲೆ ಯಾವುದೇ ಪ್ಲಾಟ್ಫಾರ್ಮ್ನ ವಾಟರ್ಮಾರ್ಕ್ (Watermark) ಇರಬಾರದು.
- ಅಪ್ಲೋಡ್ ಮಿತಿ: 30 ದಿನಗಳ ಅವಧಿಯಲ್ಲಿ ಕನಿಷ್ಠ 15 ದಿನಗಳ ಕಾಲ, ದಿನಕ್ಕೊಂದರಂತೆ ವಿಡಿಯೋ ಪಬ್ಲಿಷ್ ಮಾಡಲೇಬೇಕು. (ಯಾವುದೋ ಒಂದೇ ದಿನ 15 ವಿಡಿಯೋಗಳನ್ನು ಒಟ್ಟಿಗೆ ಹಾಕುವಂತಿಲ್ಲ).
ನೋಂದಣಿಗೆ ಕೊನೆಯ ದಿನಾಂಕ: ಈ ಯೋಜನೆಗೆ ಸಂಸ್ಥೆಯಿಂದಲೇ ನೇರವಾಗಿ ಆಯ್ಕೆಯಾದ ಅರ್ಹ ಕಂಟೆಂಟ್ ಕ್ರಿಯೇಟರ್ಗಳಿಗೆ ‘ಇನ್ವಿಟೇಶನ್’ (ಆಹ್ವಾನ) ಕಳುಹಿಸಲಾಗುತ್ತದೆ. ಈ ರೀತಿ ಆಹ್ವಾನ ಪಡೆದವರು ಅಕ್ಟೋಬರ್ 30, 2026ರ ಒಳಗೆ ಕಡ್ಡಾಯವಾಗಿ ಎನ್ರೋಲ್ ಆಗಬೇಕಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು