ಆಭರಣ ಖರೀದಿಸುವ ಯೋಜನೆಯಲ್ಲಿರುವ ಗ್ರಾಹಕರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 5 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಶುಕ್ರವಾರ (ಅ. 23) ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ಬರೋಬ್ಬರಿ 1900 ರೂ.ಗಳ ಭಾರಿ ಇಳಿಕೆ ಕಂಡುಬಂದಿದೆ.
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಯುದ್ಧದ ಆತಂಕ, ಕಚ್ಚಾತೈಲ ಬೆಲೆ ಏರಿಕೆ ಹಾಗೂ ಹಣದುಬ್ಬರದ ಭೀತಿಯ ನಡುವೆಯೂ ಚಿನ್ನದ ಮೌಲ್ಯ ಕುಸಿಯುತ್ತಿರುವುದು ಗ್ರಾಹಕರಿಗೆ ರಿಲೀಫ್ ನೀಡಿದೆ. ಕಳೆದ ನಾಲ್ಕೇ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 5500 ರೂಪಾಯಿಗೂ ಅಧಿಕ ಕುಸಿತ ದಾಖಲಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆಯಾಗಿದೆ.
ಇಂದಿನ ಚಿನ್ನದ ದರ (ಅಕ್ಟೋಬರ್ 23):
- 24 ಕ್ಯಾರೆಟ್ (ಅಪರಂಜಿ ಚಿನ್ನ): 1 ಗ್ರಾಂ ಬೆಲೆಯಲ್ಲಿ 190 ರೂ. ಇಳಿಕೆಯಾಗಿದ್ದು, ಪ್ರಸ್ತುತ ದರ 14,248 ರೂ. ಇದೆ. 10 ಗ್ರಾಂಗೆ 1900 ರೂ. ಕಡಿತಗೊಂಡಿದ್ದು, 1,42,480 ರೂ.ಗೆ ತಲುಪಿದೆ.
- 22 ಕ್ಯಾರೆಟ್ (ಆಭರಣ ಚಿನ್ನ): 1 ಗ್ರಾಂ ಚಿನ್ನದ ಮೇಲೆ 175 ರೂ. ಕಡಿಮೆಯಾಗಿದ್ದು, ಇಂದಿನ ದರ 13,060 ರೂ. ಆಗಿದೆ. 10 ಗ್ರಾಂ ದರದಲ್ಲಿ 1750 ರೂ. ಇಳಿಕೆಯಾಗಿ, 1,30,600 ರೂಪಾಯಿಗೆ ಮಾರಾಟವಾಗುತ್ತಿದೆ.
- 18 ಕ್ಯಾರೆಟ್ ಚಿನ್ನ: 1 ಗ್ರಾಂಗೆ 143 ರೂ. ಇಳಿಕೆಯೊಂದಿಗೆ 10,686 ರೂ. ಹಾಗೂ 10 ಗ್ರಾಂಗೆ 1430 ರೂ. ಕುಸಿತ ಕಂಡು 1,06,860 ರೂಪಾಯಿ ದಾಖಲಾಗಿದೆ.
ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ: ಸತತ ಎರಡನೇ ದಿನವೂ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ಬೆಲೆಯಲ್ಲಿ 5 ರೂ. ಕುಸಿದು 220 ರೂ.ಗೆ ತಲುಪಿದ್ದರೆ, ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ ಬರೋಬ್ಬರಿ 5000 ರೂ. ಕಡಿತಗೊಂಡು, ಪ್ರಸ್ತುತ ಮಾರುಕಟ್ಟೆಯಲ್ಲಿ 2.20 ಲಕ್ಷ ರೂ. (2,20,000 ರೂ.) ದಾಖಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು