ಚಿತ್ರದುರ್ಗ ಅ. 28
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮೀಸಲಾತಿಯು ಯಾವುದೇ ಭಿಕ್ಷೆಯಲ್ಲ, ಅದು ಸಮುದಾಯದ ಮೂಲಭೂತ ಹಕ್ಕು. ಈ ಹಕ್ಕನ್ನು ರಕ್ಷಿಸಲು ಮತ್ತು ಸಂವಿಧಾನದ 9ನೇ ಪರಿಚ್ಛೇದಕ್ಕೆ ಮೀಸಲಾತಿ ಕಾಯ್ದೆಯನ್ನು ಸೇರಿಸಲು ರಾಜಕಾರಣಿಗಳು, ಖಾವಿದಾರಿಗಳು, ಚಿಂತಕರು ಹಾಗೂ ಸಮಾಜದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಹೋರಾಟಕ್ಕೆ ಮುಂದಾಗಬೇಕು ಹಾಗೂ ಈ ವರ್ಗದವರಿಗೆ ಆಗುವ ಅನ್ಯಾಯವನ್ನು ತಪ್ಪಿಸಲು ಸರ್ಕಾರಗಳು ಕೂಡಲೇ ಇಚ್ಛಾಶಕ್ತಿ ಪ್ರದರ್ಶಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮಾಜಿ ಸಂಸದ ಉಗ್ರಪ್ಪ ಕರೆ ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ಒಳಮೀಸಲಾತಿ ಹಾಗೂ ಪರಿಶಿಷ್ಟ ಜಾತಿ (ಎಸ್‍ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‍ಟಿ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಹೊರಡಿಸಿದ್ದ ಆದೇಶ ಅಥವಾ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ರುವುದು ಖಂಡನೀಯ ಇದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು ಸರ್ಕಾರದ ಮಟ್ಟದಲ್ಲಿ ತಡಮಾಡದೆ ವಿಶೇಷ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಸಂಬಂಧ ಅಗತ್ಯವಿದ್ದರೆ ಸರ್ವಪಕ್ಷ ಸಭೆ ಕರೆದು ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
1991ರ ಏಪ್ರಿಲ್ 19ರಿಂದ ವಾಲ್ಮೀಕಿ ಸಮುದಾಯದವರು ಮತ್ತು ಇತರರು ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ, 2022ರಲ್ಲಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರವಿದ್ದಾಗ ಜಸ್ಟೀಸ್ ನಾಗಮೋಹನ್ ದಾಸ್ ವರದಿಯ ಶಿಫಾರಸಿನಂತೆ ಮೀಸಲಾತಿ ಹೆಚ್ಚಳ ಮಾಡಲಾಗಿತ್ತು. ಎಸ್‍ಸಿ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಹಾಗೂ ಎಸ್‍ಟಿ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಲಾಗಿದ್ದು, ಒಬಿಸಿ ಮೀಸಲಾತಿಯನ್ನು ಶೇ. 32ರಿಂದ 56ಕ್ಕೆ ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಈ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದು ಎಸ್‍ಸಿ, ಎಸ್‍ಟಿ ಹಾಗೂ ಒಬಿಸಿ ವರ್ಗದವರಿಗೆ ದೊಡ್ಡ ಮರಣಾಸನವಿದ್ದಂತೆ ಎಂದು ತಿಳಿಸಿದರು.
ಈ ತೀರ್ಪಿನ ವಿರುದ್ಧ ತಕ್ಷಣವೇ ಸುಪ್ರೀಂ ಕೋರ್ಟ್‍ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್‍ಎಲ್‍ಪಿ) ದಾಖಲಿಸಬೇಕು ಮತ್ತು ಸಂವಿಧಾನದ 9ನೇ ಪರಿಚ್ಛೇದಕ್ಕೆ ಈ ಕಾಯ್ದೆಯನ್ನು ಸೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರನ್ನು ಕರೆದುಕೊಂಡು ಹೋಗಿ ಪ್ರಧಾನಿಯವರನ್ನು ಭೇಟಿ ಮಾಡಬೇಕು ಮತ್ತು ಕಾಲಹರಣ ಮಾಡದೆ ಕೂಡಲೇ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಕಾನೂನು ಹೋರಾಟ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಮೀಸಲಾತಿ ಕಲ್ಪಿಸುವ ಮತ್ತು ಆ ಮೂಲಕ ಸಮುದಾಯದವರ ಋಣ ತೀರಿಸುವ ಉದ್ದೇಶದಿಂದ ಕೆಲ ಕಾನೂನುಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದೆ. ಆದರೆ, ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಮೀನಾಮೇಷ ಎನ್ನುತ್ತಿದ್ದು, ಸಮಗ್ರ ಸರ್ವಪಕ್ಷ ನಿಯೋಗವನ್ನು ಪ್ರಧಾನ ಮಂತ್ರಿಯವರ ಬಳಿಗೆ ಕೊಂಡೊಯ್ದು ಒತ್ತಡ ಹೇರುವಲ್ಲಿ ವಿಳಂಬ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಪ್ರಧಾನ ಮಂತ್ರಿಯವರು ಮನಸ್ಸು ಮಾಡಿದರೆ, ಮೇಲ್ವರ್ಗದವರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ಕಲ್ಪಿಸಿದಂತೆ ಈ ಕಾನೂನನ್ನು ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಒಂಬತ್ತನೇ ಶೆಡ್ಯೂಲ್‍ನಲ್ಲಿ ಸೇರಿಸಲು ಸಾಧ್ಯವಿದೆ ಆರ್.ಎಸ್.ಎಸ್. ಹಾಗೂ ಬಿಜೆಪಿ ಪಕ್ಷದವರು ಈ ವಿಚಾರದಲ್ಲಿ ದೊಡ್ಡ ಮಟ್ಟದ ಆಂದೋಲನ ಮಾಡುವಂತೆ ಮಾತನಾಡುತ್ತಾರಾದರೂ, ವಾಸ್ತವದಲ್ಲಿ ಈ ದೇಶದ ಬಹುಸಂಖ್ಯಾತ ಸಮುದಾಯದವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ದೇಶದ ಮೂಲ ನಿವಾಸಿಗಳಾದ ಎಸ್.ಸಿ., ಎಸ್.ಟಿ., ಮತ್ತು ಒಬಿಸಿ ವರ್ಗಗಳ ಹಿತಾಸಕ್ತಿ ಕಾಪಾಡುವ ಹೊಣೆ ಗಾರಿಕೆ ಎಲ್ಲರ ಮೇಲಿದ್ದು, ಆರ್.ಎಸ್.ಎಸ್. ಹಾಗೂ ಬಿಜೆಪಿ ನಾಯಕರು ಈ ಕಾನೂನನ್ನು ಒಂಬತ್ತನೇ ಶೆಡ್ಯೂಲ್‍ನಲ್ಲಿ ಸೇರಿಸುವ ಕುರಿತು ತಕ್ಷಣವೇ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಈ ನಿಟ್ಟಿನಲ್ಲಿ ರಾಜ್ಯಾ ದ್ಯಂತ ಎರಡನೇ ಸುತ್ತಿನ ಪ್ರವಾಸವನ್ನು ಕೈಗೊಳ್ಳಲಾಗಿದ್ದು, ಮುಂದಿನ ಪೀಳಿಗೆಗೆ ಅನ್ಯಾಯವಾಗದಂತೆ ತಡೆಯ ಲು ಈ ವರ್ಗದ ಎಲ್ಲ ನಾಯಕರು ಹಾಗೂ ವಿಚಾರವಂತರು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಮುದಾಯದ ಮುಖಂಡಿರಿಗೆ ಹಾಗೂ ಇತರೆ ಸಮುದಾಯದ ಮಠಾಧೀಶರಿಗೆ ಉಗ್ರಪ್ಪ ಕರೆ ನೀಡಿದರು.
ತಮಿಳುನಾಡಿನ ಮಾದರಿಯಲ್ಲಿ ಶೇಕಡಾ 69 ರಷ್ಟು ಮೀಸಲಾತಿಯನ್ನು 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸರ್ಕಾರಗಳು ಬರೆದಿರುವುದನ್ನು ಉಲ್ಲೇಖಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕುರಿತು ಗಮನಹರಿಸಬೇಕು ಕಳೆದ 80 ವರ್ಷಗಳಲ್ಲಿ ಸುಮಾರು 375 ಕಾಯ್ದೆಗಳನ್ನು 9ನೇ ಪರಿಚ್ಛೇದಕ್ಕೆ ಸೇರಿಸಲಾಗಿದ್ದು, ಯಾವ ಕಾಯ್ದೆಯೂ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‍ನಲ್ಲಿ ತಡೆಗೆ ಒಳಗಾಗಿಲ್ಲ ಅಥವಾ ರದ್ದಾಗಿಲ್ಲ ಎಸ್‍ಸಿ, ಎಸ್‍ಟಿ, ಒಬಿಸಿ ಮೀಸಲಾತಿ ಕಾಯ್ದೆ 2022 ಅನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವುದರಿಂದ ಸಮಾಜದ ಬದುಕಿನಲ್ಲಿ ಆಶಾಕಿರಣ ಮೂಡಲು ಸಾಧ್ಯತೆಯಿದೆ ಎಂದು ಅಭಿಪ್ರಾಯಪಡಲಾಯಿತು.
ಎಂ.ಪಿ. ಕಾರಜೋಳ ಅವರು ಈ ಹಿಂದೆ ಕಾನೂನು ಜಾರಿಯಾದಾಗ ರಾಜ್ಯದಲ್ಲಿ ಸಚಿವರಾಗಿದ್ದವರು ಮತ್ತು ಪ್ರಸ್ತುತ ಬಿಜೆಪಿ ಮುಖಂಡರಾಗಿದ್ದಾರೆ. ಈ ವಿಷಯದಲ್ಲಿ ಅವರು ಏಕೆ ಧ್ವನಿ ಎತ್ತುತ್ತಿಲ್ಲ ಎಸ್.ಸಿ., ಎಸ್.ಟಿ., ಒಬಿಸಿ ಸಮುದಾಯಗಳ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಜನಪ್ರತಿನಿಧಿಗಳು ಈ ವರ್ಗಗಳ ಜನರ ಋಣ ತೀರಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.
ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮುರು, ಹೊಸದುರ್ಗ ಹೊಳಲ್ಕೆರೆ ಸೇರಿದಂತೆ ವಿವಿಧ ಭಾಗಗಳ ಶಾಸಕರು ಈ ಕುರಿತು ಮೌನವಾಗಿರುವುದನ್ನು ಪ್ರಶ್ನಿಸಿ, ಸಮುದಾಯದ ಪರವಾಗಿ ಧ್ವನಿ ಎತ್ತುವಂತೆ ಆಗ್ರಹಿಸಿ ರಾಜಕಾರಣಿಗಳು ಮಾತ್ರವಲ್ಲದೆ ಸ್ವಾಮೀಜಿಗಳು, ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಮೀಸಲಾತಿ ಹಾಗೂ ಸಮಾಜದ ಹಕ್ಕುಗಳ ರಕ್ಷಣೆಗಾಗಿ ಹೋರಾಟಕ್ಕೆ ಮುಂದೆ ಬರಬೇಕು ಎಂದು ಉಗ್ರಪ್ಪ ಕರೆ ನೀಡಿದರು.
ಗೋಷ್ಟಿಯಲ್ಲಿ ಲಕ್ಷೀಸಾಗರದ ರಾಜಣ್ಣ, ಎಸ್.ಬಿ.ಆನಂದ್, ಮಂಜುನಾಥ್, ಹನುಮಂತಪ್ಪ, ಮೂರ್ತಿ, ಅಂಜನಪ್ಪ, ಸಂಪತ್ ಕುಮಾರ್, ಆನಂದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು