ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. 28
ಜಂತಕಲ್ಲಿನಲ್ಲಿ ಮೈನಿಂಗ್ ಪ್ರಾರಂಭವಾಗುವುದರಿಂದ ಸುತ್ತಾ-ಮುತ್ತಲಿನ ಗ್ರಾಮಸ್ಥರು ಹಾಗೂ ಕಾರ್ಮಿಕರ ಅನುಕೂಲವಾಗಲಿದೆ ಇಲ್ಲಿನ ಶೇಕಡಾ 95 ರಷ್ಟು ಜನತೆಯ ಆಶಯದಂತೆ ಮೈನಿಂಗ್ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂದು ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಹಿರೇಕಂದವಾಡಿ ಗೌಡ್ರುಸ್ವಾಮಿ ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈನಿಂಗ್ ಬೇಡಿಕೆಯನ್ನು ನಿಲ್ಲಿಸಬೇಕು ಎಂಬ ಶಿವಪ್ರಕಾಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಗೌಡ್ರುಸ್ವಾಮಿ ಮೇಗಳಹಳ್ಳಿಯಲ್ಲಿ ಶೇಕಡಾ 90 ರಿಂದ 95 ರಷ್ಟು ಜನ ಮೈನಿಂಗ್ ಪ್ರಾರಂಭಿಸಬೇಕು ಎಂದು ಬಯಸುತ್ತಿದ್ದಾರೆ. ಮೈನಿಂಗ್ ಆರಂಭಿಸುವುದರಿಂದ ಗ್ರಾಮಗಳ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ತಮ್ಮದೇ ಕುಟುಂಬದವರು ಒಂಬತ್ತು ವರ್ಷಗಳ ಕಾಲ ಅದೇ ಸ್ಥಳದಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡಿ ಇಂದು ಸ್ವಂತ ವಾಹನಗಳನ್ನು ಹೊಂದಿದ್ದಾರೆ ವೈಯಕ್ತಿಕ ಕಾರಣಗಳಿಗಾಗಿ ನೂರಾರು ಕುಟುಂಬಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.


ಮೈನಿಂಗ್ ಚಟುವಟಿಕೆಗಳು ಆರಂಭವಾದರೆ ಸುಮಾರು ಇನ್ನೂರಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಗಲಿದೆ. ಇದರಿಂದ ಗ್ರಾಮದ ಯುವಕರು, ಕುಟುಂಬಗಳು ಮತ್ತು ಪರಿವಾರಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ ಸುತ್ತಮುತ್ತಲಿನ ಮೈನ್ಸ್ಗಳು ಅಭಿವೃದ್ಧಿ ಹೊಂದಿ ಐದು-ಆರು ವರ್ಷಗಳಿಂದ ಮೈನಿಂಗ್ ನಡೆಸುತ್ತಿರುವುದರಿಂದ ಆ ಹಳ್ಳಿಗಳು ಸಾಕಷ್ಟು ಅಭಿವೃದ್ಧಿ ಸಾಧಿಸಿವೆ ಜಿ.ಎಸ್.ಡಬ್ಲ್ಯೂ. ಮೈನ್ಸ್ ವತಿಯಿಂದ ಗೋಕಟ್ಟೆಯಿಂದ ಕೆರೆಗೆ ಪೈಪ್ಲೈನ್ ಅಳವಡಿಕೆ, ಶಾಲೆಗಳ ನಿರ್ಮಾಣ, ಸುಶೋಧನೆ ಹಾಗೂ ಕಾಂಪೌಂಡ್ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಲಾಗಿದೆ ಅಕ್ಕಪಕ್ಕದ ಎಲ್ಲಾ ಮೈನ್ಸ್ಗಳು ಅಭಿವೃದ್ಧಿ ಹೊಂದಿರುವಂತೆ ನಮ್ಮ ಗ್ರಾಮದಲ್ಲೂ ಮೈನ್ಸ್ ಆರಂಭವಾಗಬೇಕು ಎಂದು ಅವರು ಒತ್ತಾಯಿಸಿ ದರು.
ಓಬಳೇಶ್ ನಾಯ್ಕ್, ಗುರುಸ್ವಾಮಿ, ಕೋಟಿ ರಾಮಣ್ಣ ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು