October 29 Horoscope: ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲಗಳು

ಶಾಲಿವಾಹನ ಶಕವರ್ಷ 1949ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಈ ಗುರುವಾರವು ಎಲ್ಲಾ ರಾಶಿಚಕ್ರದವರಿಗೆ ವಿಭಿನ್ನ ಫಲಿತಾಂಶಗಳನ್ನು ತಂದಿದೆ. ಕೆಲವು ರಾಶಿಗಳಿಗೆ ಆಕಸ್ಮಿಕ ಧನಲಾಭ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಸಿಕ್ಕರೆ, ಇನ್ನು ಕೆಲವು ರಾಶಿಗಳಿಗೆ ಆರೋಗ್ಯ ಅಥವಾ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆಯಿದೆ. ಇಂದಿನ ರಾಶಿ ಭವಿಷ್ಯದ ಸಂಪೂರ್ಣ ವಿವರ ಇಲ್ಲಿದೆ.

ಮೇಷ ರಾಶಿ

ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲವಾದ್ದರಿಂದ ನಿಮ್ಮ ದಾರಿಯ ಬಗ್ಗೆ ನಿಮಗೆ ಸಂಪೂರ್ಣ ವಿಶ್ವಾಸವಿರಲಿ. ನಿಮ್ಮಿಂದ ಕೆಲಸ ಮಾಡಿಸಿಕೊಳ್ಳಲು ಕೆಲವರು ಹೊಗಳಬಹುದು. ಉದ್ಯೋಗದಲ್ಲಿ ಬಡ್ತಿಯನ್ನು ನಿರೀಕ್ಷಿಸಬಹುದಾಗಿದ್ದು, ಸಣ್ಣ ವ್ಯಾಪರಿಗಳಿಗೆ ಉತ್ತಮ ಪ್ರೋತ್ಸಾಹ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರನ್ನು ಮನೆಯಿಂದ ದೂರವಿರಿಸುವ ಸಂದರ್ಭ ಬರಬಹುದು.

ವೃಷಭ ರಾಶಿ

ನಿಮ್ಮ ಹಣವು ಯಾವುದೋ ಒಂದು ರೀತಿಯಲ್ಲಿ ಖರ್ಚಾಗುವ ಸಾಧ್ಯತೆಯಿದ್ದು, ಅದನ್ನು ಸರಿಯಾಗಿ ನಿಭಾಯಿಸಿ. ವಿದ್ಯಾಭ್ಯಾಸದಲ್ಲಿ ಪ್ರಗತಿಯ ಜೊತೆಗೆ ಅಡೆತಡೆಗಳೂ ಇರಲಿವೆ. ನಿಯಮದ ಉಲ್ಲಂಘನೆಗಾಗಿ ದಂಡ ತೆರಬೇಕಾದ ಸ್ಥಿತಿ ಎದುರಾಗಬಹುದು. ಹಳೆಯ ಸ್ನೇಹಿತರು ಉಪಕಾರ ಸ್ಮರಣೆಯೊಂದಿಗೆ ನಿಮಗೆ ಸಹಾಯ ಮಾಡಲಿದ್ದಾರೆ.

ಮಿಥುನ ರಾಶಿ

ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ಕದಡಬಹುದು, ಆದ್ದರಿಂದ ಅನ್ನಿಸಿದ್ದನ್ನು ಕೂಡಲೇ ಮಾತನಾಡದೆ ಸಮಯಕ್ಕಾಗಿ ಕಾಯಿರಿ. ದೂರಪ್ರಯಾಣ ಮಾಡಿ ಅತಂತ್ರರಂತೆ ಆಗುವ ಪರಿಸ್ಥಿತಿ ಎದುರಾಗಬಹುದು. ದಾಂಪತ್ಯದಲ್ಲಿ ಮನಸ್ತಾಪ ಉಂಟಾದರೂ ಜಾಣ್ಮೆಯಿಂದ ಅದನ್ನು ಅಲ್ಲೇ ಮೊಟಕುಗೊಳಿಸುವಿರಿ.

ಕರ್ಕಾಟಕ ರಾಶಿ

ಮನೆಯ ಹಿರಿಯರ ಸೇವೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮನಸ್ಸು ಸ್ಥಿರವಿಲ್ಲದ ಕಾರಣ ನಿಮ್ಮ ಗುರಿಯೂ ಬದಲಾಗಬಹುದು. ಬಂಧುಗಳು ನಿಮ್ಮನ್ನು ನೋಡಲು ಆಗಮಿಸಲಿದ್ದಾರೆ. ಸಂತೋಷದ ವಿಚಾರವನ್ನು ಹಂಚಿಕೊಳ್ಳಲು ಸ್ವಲ್ಪ ಮುಜುಗರ ಪಡಬಹುದು. ನಿಮ್ಮ ಕಾರ್ಯಸಾಧನೆಗೆ ಸಾಕ್ಷಿಗಳ ಅವಶ್ಯಕತೆ ಇರುವುದು.

ಸಿಂಹ ರಾಶಿ

ಪರರ ಕಷ್ಟಕ್ಕೆ ಸುಮ್ಮನೆ ಕಿವಿಯಾಗುವುದು ಸಾಕು. ಬದಲಾದ ನಿಮ್ಮ ಸ್ವಂತ ವ್ಯಕ್ತಿತ್ವವೇ ನಿಮಗೆ ಅಚ್ಚರಿ ಮೂಡಿಸಬಹುದು. ಮನೆಯಲ್ಲಿಯೇ ಇದ್ದು ಬೇಸರವಾದ ಕಾರಣ ಎಲ್ಲಿಗಾದರೂ ವಿಹಾರಕ್ಕೆ ತೆರಳುವಿರಿ. ಅಧಿಕಾರಿಗಳಿಂದ ನಿಮ್ಮ ಉದ್ಯಮದ ಪರಿಶೀಲನೆ ನಡೆಯಲಿದ್ದು, ಆದಾಯಕ್ಕೆ ಸಮನಾದ ಖರ್ಚು ಇರಲಿದೆ.

ಕನ್ಯಾ ರಾಶಿ

ವಿದೇಶದಲ್ಲಿ ಪಾಲುದಾರರಾಗಿ ಹೂಡಿಕೆ ಮಾಡುವ ಯೋಗವಿದೆ. ಇಂದು ನೀವು ಮಾಡುವ ಕಾರ್ಯವು ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡಲಿದೆ. ಉತ್ಪನ್ನ ತಯಾರಕರಿಗೆ ಹೆಚ್ಚು ಆದಾಯ ಬರಲಿದ್ದು, ಮನೆಯಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ. ವೈದ್ಯವೃತ್ತಿಯಲ್ಲಿರುವವರಿಗೆ ಸ್ವಲ್ಪ ಮಟ್ಟಿನ ಒತ್ತಡವಿರಲಿದೆ.

ತುಲಾ ರಾಶಿ

ದೇಹ ಪೀಡೆಯು ಅಧಿಕವಾಗಿರುವುದರಿಂದ ನಿಮ್ಮ ಇಂದಿನ ಕೆಲಸಗಳು ವಿಳಂಬವಾಗಬಹುದು. ಅನಿವಾರ್ಯವಾಗಿ ಪ್ರಯಾಣವನ್ನು ಮಾಡಬೇಕಾಗಿ ಬರಬಹುದು. ಭೂವ್ಯವಹಾರದಿಂದ ಕೆಲವು ತೊಂದರೆಗಳು ಎದುರಾಗಬಹುದು. ಯಾರನ್ನೂ ಸಮೀಪಕ್ಕೆ ಸೇರಿಸಿಕೊಳ್ಳಲು ಬಿಡದ ಕಾರಣ ಒಂಟಿತನದ ಅನುಭವವಾಗಲಿದೆ.

ವೃಶ್ಚಿಕ ರಾಶಿ

ಪ್ರೇಮವು ನಿಮಗೆ ಬಂಧನದಂತೆ ತೋರಬಹುದು. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ದ್ವೇಷವಾಗಿ ಪರಿಣಮಿಸಬಹುದು. ವ್ಯವಹಾರದಲ್ಲಿ ಮಗ್ನರಾಗುವ ನೀವು, ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಗುಣವನ್ನು ಮೈಗೂಡಿಸಿಕೊಳ್ಳುವಿರಿ.

ಧನು ರಾಶಿ

ನಿಮ್ಮ ನಡತೆಯು ಸಾಮಾನ್ಯರಂತೆ ಕಂಡರೂ ಪ್ರಭಾವವು ಅಧಿಕವಾಗಿರುತ್ತದೆ. ಆಸ್ತಿಯ ವಿಚಾರದಲ್ಲಿ ಆಂತರಿಕ ಕಲಹಗಳು ದೊಡ್ಡದಾಗುವ ಸಾಧ್ಯತೆಯಿದೆ. ಒತ್ತಡಗಳು ಎಂದಿಗಿಂತ ಕಡಿಮೆ ಇರಲಿದ್ದು, ಆಕಸ್ಮಿಕವಾಗಿ ಸಿಗುವ ಧನಲಾಭವು ನಿಮಗೆ ಅಚ್ಚರಿಯನ್ನುಂಟು ಮಾಡಲಿದೆ.

ಮಕರ ರಾಶಿ

ನಿಮ್ಮ ಕಾರ್ಯದ ದಕ್ಷತೆಯಿಂದ ಉನ್ನತ ಸ್ಥಾನಮಾನಗಳು ಲಭಿಸಲಿವೆ. ಪ್ರಾಪಂಚಿಕ ಸುಖದಲ್ಲಿ ಆಸಕ್ತಿ ಕಡಿಮೆಯಿರಲಿದ್ದು, ಒಂದರ ಮೇಲೊಂದು ಸವಾಲುಗಳು ಎದುರಾಗಲಿವೆ. ಇಂದು ಸ್ವಾರ್ಥವನ್ನು ಬದಿಗಿಟ್ಟು ಕೆಲಸ ಮಾಡಲು ಬಯಸುವಿರಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗೊಂದಲವಿರಲಿದೆ.

ಕುಂಭ ರಾಶಿ

ಮನೆಯ ಕೆಲಸಗಳಿಂದ ನಿಮಗೆ ಸ್ವಲ್ಪ ಆಯಾಸವಾಗಬಹುದು. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ. ಅನಿರೀಕ್ಷಿತ ವಾರ್ತೆಗಳಿಂದ ಮನಸ್ಸಿಗೆ ಬೇಸರವಾಗಬಹುದು. ವೈದ್ಯ ವೃತ್ತಿಯಲ್ಲಿರುವವರಿಗೆ ಅಪವಾದಗಳು ಬರುವ ಸಾಧ್ಯತೆಯಿದ್ದು, ಎಚ್ಚರಿಕೆ ವಹಿಸುವುದು ಉತ್ತಮ.

ಮೀನ ರಾಶಿ

ಭೂಮಿಯ ವಿಚಾರವಾಗಿ ಕಲಹಗಳು ಏಳಬಹುದು. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದೂರ ಕಳುಹಿಸುವಿರಿ. ಸ್ಥಾನಮಾನವನ್ನು ಪಡೆಯಲು ಹೊಸ ಮಾರ್ಗಗಳನ್ನು ಅನ್ವೇಷಿಸುವಿರಿ. ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವುದರ ಜೊತೆಗೆ ಹಿರಿಯರಿಂದ ಯೋಗ್ಯ ಸಲಹೆಗಳನ್ನು ಪಡೆದು ಮುನ್ನಡೆಯಿರಿ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *