ಮಹಿಳಾ ಪ್ರೀಮಿಯರ್ ಲೀಗ್ (WPL) 2027ರ ಮಿನಿ ಹರಾಜು ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮುಂಬರುವ ರೋಮಾಂಚಕಾರಿ ಆವೃತ್ತಿಗಾಗಿ ಸಜ್ಜಾಗುತ್ತಿರುವ ಐದು ಪ್ರಾಂಚೈಸಿಗಳು ತಮ್ಮ ತಂಡಗಳನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಹಲವು ಪ್ರತಿಭಾವಂತ ಮತ್ತು ಸ್ಟಾರ್ ಆಟಗಾರ್ತಿಯರನ್ನು ಭರ್ಜರಿ ಮೊತ್ತಕ್ಕೆ ಖರೀದಿಸಿವೆ. ಈ ಬಾರಿಯ ಹರಾಜಿನಲ್ಲಿ ಯುಪಿ ವಾರಿಯರ್ಸ್ ಅತ್ಯಂತ ಸಕ್ರಿಯವಾಗಿ ಕಾಣಿಸಿಕೊಂಡು ಪ್ರಮುಖ ಆಟಗಾರ್ತಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.


ಸೋಫಿ ಮೊಲಿನ್ಯೂಕ್ಸ್ಗೆ ಗರಿಷ್ಠ ಮೊತ್ತ
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಸೋಫಿ ಮೊಲಿನ್ಯೂಕ್ಸ್ ಈ ಬಾರಿಯ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಯುಪಿ ವಾರಿಯರ್ಸ್ ತಂಡವು ಅವರನ್ನು ಬರೋಬ್ಬರಿ 1.1 ಕೋಟಿ ರೂ. ನೀಡಿ ತನ್ನ ಬಳಗಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇವರೊಂದಿಗೆ ಆಸ್ಟ್ರೇಲಿಯಾದ ಮತ್ತೊಬ್ಬ ಸ್ಫೋಟಕ ಆಲ್ರೌಂಡರ್ ಗ್ರೇಸ್ ಹ್ಯಾರಿಸ್ ಕೂಡ ಯುಪಿ ತಂಡದ ಪಾಲಾಗಿದ್ದಾರೆ. ಬಲಿಷ್ಠ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಯುಪಿ ವಾರಿಯರ್ಸ್ ಮುಂಬರುವ WPL 2027ರಲ್ಲಿ ಚಾಂಪಿಯನ್ ಆಗುವ ಗುರಿ ಹೊಂದಿದೆ.
ಈ ಹರಾಜು ಪ್ರಕ್ರಿಯೆಗಾಗಿ ಒಟ್ಟು 146 ಆಟಗಾರ್ತಿಯರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿತ್ತು. ಐದು ಫ್ರಾಂಚೈಸಿಗಳಲ್ಲಿ ಖಾಲಿ ಇದ್ದ ಒಟ್ಟು 27 ಸ್ಥಾನಗಳನ್ನು ಭರ್ತಿ ಮಾಡಲು ಈ ಹರಾಜು ನಡೆಸಲಾಗಿದ್ದು, ಇದರಲ್ಲಿ 7 ಸ್ಥಾನಗಳನ್ನು ವಿದೇಶಿ ಆಟಗಾರ್ತಿಯರಿಗಾಗಿ ಮೀಸಲಿಡಲಾಗಿತ್ತು.
ಇತರ ಪ್ರಮುಖ ಆಟಗಾರ್ತಿಯರ ಮಾರಾಟ ವಿವರ:
- ಗುಜರಾತ್ ಜೈಂಟ್ಸ್: ಭಾರತದ ಪ್ರತಿಭಾನ್ವಿತ ಆಟಗಾರ್ತಿ ಜಿ. ಕಮಲಿನಿ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
- ಯುಪಿ ವಾರಿಯರ್ಸ್: ಅನುಭವಿ ಆಟಗಾರ್ತಿ ಸ್ನೇಹ್ ರಾಣಾ ಅವರನ್ನು ಖರೀದಿಸಿ ತಂಡದ ಬಲ ಹೆಚ್ಚಿಸಿದೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಜೆಸ್ ಜೊನಾಸೆನ್ ಹಾಗೂ ಕ್ಲೋಯ್ ಟ್ರಯಾನ್ ಅವರನ್ನು ತಂಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.
- ಮುಂಬೈ ಇಂಡಿಯನ್ಸ್: ಶ್ವೇತಾ ಸೆಹ್ರಾವತ್ ಮತ್ತು ಅಕ್ಷಿತಾ ಭಗತ್ ಅವರನ್ನು ಹೊಸ ಮುಖಗಳಾಗಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಐದು ತಂಡಗಳ ಸಂಪೂರ್ಣ ಆಟಗಾರ್ತಿಯರ ಪಟ್ಟಿ
- ಮುಂಬೈ ಇಂಡಿಯನ್ಸ್: ಅಮನ್ಜೋತ್ ಕೌರ್, ಅಮೆಲಿಯಾ ಕೆರ್, ಹರ್ಮನ್ಪ್ರೀತ್ ಕೌರ್, ಹ್ಯಾಲಿ ಮ್ಯಾಥ್ಯೂಸ್, ನ್ಯಾಟಲಿ ಸ್ಕಿವರ್-ಬ್ರಂಟ್, ನಿಕೋಲಾ ಕ್ಯಾರಿ, ರಹೀಲಾ ಫಿರ್ದೌಸ್, ಸಜೀವನ್ ಸಜನಾ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ವೈಷ್ಣವಿ ಶರ್ಮಾ, ಸನಿಕಾ ಚಾಲ್ಕೆ, ಶ್ವೇತಾ ಸೆಹ್ರಾವತ್, ಅಕ್ಷಿತಾ ಭಗತ್.
- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಅರುಂಧತಿ ರೆಡ್ಡಿ, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಪ್ರತ್ಯೂಷಾ ಕುಮಾರ್, ಪ್ರೇಮಾ ರಾವತ್, ರಾಧಾ ಯಾದವ್, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಜೆಸ್ ಜೊನಾಸೆನ್, ತೇಜಲ್ ಹಸಬ್ನಿಸ್, ವೃಂದಾ ದಿನೇಶ್, ಕ್ಲೋಯ್ ಟ್ರಯಾನ್.
- ಯುಪಿ ವಾರಿಯರ್ಸ್: ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಮೆಗ್ ಲ್ಯಾನಿಂಗ್, ಫೋಬಿ ಲಿಚ್ಫೀಲ್ಡ್, ಪ್ರತಿಕಾ ರಾವಲ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರನ್ ಶೇಖ್, ಸೋಫಿ ಎಕ್ಲೆಸ್ಟೋನ್, ತಾರಾ ನಾರಿಸ್, ಸೋಫಿ ಮೊಲಿನ್ಯೂಕ್ಸ್, ಸ್ನೇಹ್ ರಾಣಾ, ಗ್ರೇಸ್ ಹ್ಯಾರಿಸ್, ಸುಷ್ಮಾ ವರ್ಮಾ, ಕ್ಯಾಥರಿನ್ ಬ್ರೈಸ್, ಮನಾಲಿ ದಕ್ಷಿಣಿ, ಸಹನಾ ಪವಾರ್, ಆಶಾ ಶೋಭನಾ.
- ಡೆಲ್ಲಿ ಕ್ಯಾಪಿಟಲ್ಸ್: ಅನ್ನಾಬೆಲ್ ಸದರ್ಲ್ಯಾಂಡ್, ಚಿನೆಲ್ಲೆ ಹೆನ್ರಿ, ದಿಯಾ ಯಾದವ್, ಜೆಮಿಮಾ ರೋಡ್ರಿಗಸ್, ಲಾರಾ ವೋಲ್ವಾರ್ಟ್, ಲೂಸಿ ಹ್ಯಾಮಿಲ್ಟನ್, ಮಮತಾ ಮಡಿವಾಳ, ಮ್ಯಾರಿಜಾನ್ ಕಾಪ್, ಮಿನ್ನು ಮಣಿ, ಎನ್. ಶ್ರೀ ಚರಣಿ, ನಂದಿನಿ ಶರ್ಮಾ, ನಿಕಿ ಪ್ರಸಾದ್, ಶಫಾಲಿ ವರ್ಮಾ, ಕಿರಣ್ ನವಗಿರೆ, ಕಿರ್ಸ್ಟಿ ಗಾರ್ಡನ್, ಉಮಾ ಕಾಶ್ವಿ, ನಜ್ಮಾ ಖಾನ್.
- ಗುಜರಾತ್ ಜೈಂಟ್ಸ್: ಅನುಷ್ಕಾ ಶರ್ಮಾ, ಆಶ್ಲೆ ಗಾರ್ಡ್ನರ್, ಬೆತ್ ಮೂನಿ, ಭಾರತಿ ಫುಲ್ಮಾಲಿ, ಜಾರ್ಜಿಯಾ ವೇರ್ಹ್ಯಾಮ್, ಹ್ಯಾಪಿ ಕುಮಾರಿ, ಜಿಂತಿಮಣಿ ಕಲಿತಾ, ಕನಿಕಾ ಅಹುಜಾ, ಕಾಶ್ವೀ ಗೌತಮ್, ಕಿಮ್ ಗಾರ್ತ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ಸೋಫಿ ಡಿವೈನ್, ತನುಜಾ ಕನ್ವರ್, ಯಾಸ್ತಿಕಾ ಭಾಟಿಯಾ, ಜಿ. ಕಮಲಿನಿ, ಓರ್ಲಾ ಪ್ರೆಂಡರ್ಗಾಸ್ಟ್, ಸಮೈರಾ ರಾಘವ್.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು