ಚಿತ್ರದುರ್ಗ ನ. 07
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯನ್ನು ಸಂಪೂರ್ಣ ಹಸಿರುಗೊಳಿಸಬೇಕು, ಎಲ್ಲ ಕೆರೆಗಳನ್ನು ತುಂಬಿಸಬೇಕೆಂಬ ಒತ್ತಾಯಿಸಿ ಚಳ್ಳಕೆರೆ ತಾಲ್ಲೂಕು ಟಿ.ಎನ್.ಕೋಟೆ ಗ್ರಾಮದಲ್ಲಿ ನ.9ರ ಸೋಮವಾರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರರೆಡ್ಡಿಹಳ್ಳಿ ಬಸವರೆಡ್ಡಿ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ 1 ಗಂಟೆಗೆ ಸಮಾವೇಶ ಹಮ್ಮಿಕೊಂಡಿದ್ದು, ಅದೇ ವೇದಿಕೆಯಲ್ಲಿ ಹಸಿರು ಶಾಲು ಧೀಕ್ಷೆ ಹಾಗೂ ರೈತಸಂಘ ಗ್ರಾಮ ಘಟಕ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಸಂಬಂಧ ತಮ್ಮ ಬದ್ಧತೆ ಪ್ರದರ್ಶಿಸಬೇಕು. ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಹಣವನ್ನು ಷರತ್ತು ರಹಿತವಾಗಿ ಬಿಡುಗಡೆ ಮಾಡಬೇಕು. ಜಿಲ್ಲೆಯ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಂದು ಸಮಾವೇಶದಲ್ಲಿ ಒತ್ತಾಯಿ ನಿರ್ಣಯ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪ್ರಧಾನಮಂತ್ರಿ ಮೋದಿ ಹಾಗೂ ಕೇಂದ್ರ ಬಜೆಟ್‍ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ 5300 ಕೋಟಿ ರೂ. ಪ್ರಕಟಿಸಿದ್ದು, ಈವರೆಗೂ ಬಿಡುಗಡೆ ಮಾಡದೆ ಕೇಂದ್ರ ಸರ್ಕಾರ ಜಿಲ್ಲೆಯನ್ನು ನಿರ್ಲಕ್ಷ್ಯಿಸುತ್ತಾ ಕಾಲಹರಣ ಮಾಡುತ್ತಿದೆ. ಯಾವುದೇ ನಿಬಂಧನೆ ವಿಧಿಸದೆ ಘೋಷÀಣೆ ಮಾಡಿದ ಹಣ ಬಿಡುಗಡೆ ಮಾಡಿ ಪ್ರಧಾನಮಂತ್ರಿ ಮಾತು ಉಳಿಸಿಕೊಳ್ಳಬೇಕು.ಮುಖ್ಯವಾಗಿ ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಮಾಡುವ ಮಾತು ಉಳಿಸಿಕೊಳ್ಳಬೇಕು. ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳು ಸೇರಿ ಯೋಜನೆಯಿಂದ ಕೈಬಿಟ್ಟಿರುವ ಎಲ್ಲ ಕೆರೆಗಳನ್ನು ನೀರು ತುಂಬಿಸಬೇಕು. ಯೋಜನೆ ಪ್ರಾರಂಭವಾಗಿ 20 ವಷರ್ಗಳೇ ಕಳೆದಿದ್ದು ರಾಜ್ಯದಲ್ಲಿ ಬಹುದೊಡ್ಡ ನೀರಾವರಿ ಯೋಜನೆ ಇದಾಗಿದ್ದು, ಎಲ್ಲಾ ಪಕ್ಷಗಳ ಸರ್ಕಾರಗಳು ಹಣ ನೀಡಿ ಕಾಮಗಾರಿ ಮುಗಿಸುವಲ್ಲಿ ಹಾಗೂ ಜಿಲ್ಲೆ ನೀರು ಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದು ಬರದ ಜಿಲ್ಲೆಗೆ ಯೋಜನೆಗೆ ಸಂಪೂರ್ಣ ಹಣ ನೀಡಿ ಯೋಜನೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಲಾಗುವುದು.
ಬರದಿಂದ ರೈತರು ಸತತ ಕಂಗಾಲಾಗಿದ್ದು, 2500 ರೂ. ಬರ ಘೋಷÀಣೆ ಮಾಡಿ ರೈತರನ್ನು ಅಣಕಿಸದಂತಿದ್ದು, ಆದ್ದರಿಂದ 1 ಎಕರೆಗೆ 25 ಸಾವಿರ ರೂ. ಗಳನ್ನು ರೈತರ ಖಾತೆಗೆ ಜಮಾ ಮಾಡಬೇಕು.ಕೃಷಿ ಸಾಲ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ಮಾಡಲು ತಕ್ಷಣ ಮುಂದಾಗಬೇಕು. ಬರದಿಂದ ತತ್ತರಿಸಿ ಜನರು ಗುಳೆ ಹೋಗುತ್ತಿದ್ದು ದುಡಿಯುವ ಕೈಗಳಿಗೆ ಕೆಲಸ, ಧನ, ಕರುಗಳಿಗೆ ಮೇವು, ನೀರಿಗೆ ಗೋಶಾಲೆ ತೆರೆಯಬೇಕು. ಹೀಗೆ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸಮಾವೇಶ ಹಮ್ಮಿಕೊಂಡಿದ್ದು, ಸಹಸ್ರಾರು ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದು, ಇದೇ ಸಮಾವೇಶದಲ್ಲಿ ಹಸಿರು ಶಾಲು ದೀಕ್ಷೆ ನೀಡಲಾಗುವುದು. ಸಮಾವೇಶಕ್ಕೆ ರೈತಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಪ್ರಮುಖರು, ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು