ಚಿತ್ರದುರ್ಗದಲ್ಲಿ ಭಗವಾನ್ ಬಿರ್ಸಾ ಮುಂಡಾ ಜಯಂತಿ ಆಚರಣೆ: ಸ್ವಾತಂತ್ರ್ಯ ಹೋರಾಟದ ಕೊಡುಗೆ ಸ್ಮರಣೆ.

ಚಿತ್ರದುರ್ಗ ನ. 15

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಭಾನುವಾರ ಬುಡಕಟ್ಟು ಸಮುದಾಯದ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಾಜಪ ಮುಖಂಡರು ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‍ಗಢ, ಮಹಾರಾಷ್ಟ್ರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಇದೇ ವೇಳೆ, ಬ್ರಿಟಿಷರ ವಿರುದ್ಧ ಧೀರ ಹೋರಾಟ ನಡೆಸಿದ ಭಗವಾನ್ ಬಿರ್ಸಾ ಮುಂಡಾ ಅವರ ಸ್ಮರಣಾರ್ಥವಾಗಿ ಜನಜಾತಿ ಸಂಘ ಹಾಗೂ ಉತ್ಸವ ಸಂಘಗಳನ್ನು ರಚಿಸಲಾಗಿದೆ ಭಗವಾನ್ ಬಿರ್ಸಾ ಮುಂಡಾ ಅವರ ಆದರ್ಶಗಳನ್ನು ಸ್ಮರಿಸುತ್ತಾ, ದೇಶದಾದ್ಯಂತ ಮತ್ತು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳು ಹಾಗೂ ಕಚೇರಿಗಳಲ್ಲಿ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮತ್ತು ಯುವಜನತೆಯಲ್ಲಿ ರಾಷ್ಟ್ರೀಯ ಪ್ರಜ್ಞೆ ಹಾಗೂ ಐತಿಹಾಸಿಕ ಜಾಗೃತಿ ಮೂಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಮಾಡಲಾಗಿದೆ ಎಂದು ವಿವರಿಸಿದರು.

ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಮಾತನಾಡಿ, ಬಿರ್ಸಾ ಮುಂಡಾ ಅವರು ಜಾರ್ಖಂಡ್‍ನ ಒಂದು ಕುಗ್ರಾಮದಲ್ಲಿ ಜನಿಸಿದವರು. ಕಾಡಿನಲ್ಲಿ ಗೆಡ್ಡೆ-ಗೆಣಸುಗಳನ್ನು ಸಂಗ್ರಹಿಸುತ್ತಾ ಮತ್ತು ಬೇಟೆಯಾಡುತ್ತಾ ಜೀವನ ನಡೆಸುವ ಬುಡಕಟ್ಟು ಸಮುದಾಯದಲ್ಲಿ ಅವರು ಜನಿಸಿದ್ದರು. ಬಾಲ್ಯದ ಸಂಕಷ್ಟಗಳು ಹಾಗೂ ಬ್ರಿಟಿಷರ ಮತ್ತು ಕ್ರಿಶ್ಚಿಯನ್ ಮಿಷನರಿಗಳ ಪ್ರಭಾವ ಬಿರ್ಸಾ ಮುಂಡಾ ಅವರು ಹುಟ್ಟಿ ಕೇವಲ ಹದಿಮೂರು ವರ್ಷದ ಬಾಲ್ಯದಲ್ಲೇ ಅವರಿಗೆ ಒಂದು ಘೋರ ಆಪತ್ತು ಎದುರಾಗಿತ್ತು. ಕಾಡಿನಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಾ, ಸಂಸ್ಕೃತಿಯನ್ನು ನಡೆಸುತ್ತಾ, ಬೇಟೆಯಾಡುತ್ತಾ ಇದ್ದ ಬಿರ್ಸಾ ಮುಂಡಾ ಅವರ ಕಾಲದಲ್ಲಿ, ಬ್ರಿಟಿಷರು ಹಾಗೂ ಅವರ ಜೊತೆಯಲ್ಲಿದ್ದ ಕ್ರಿಶ್ಚಿಯನ್ ಮಿಷನರಿಗಳು ಮತಾಂತರವೆಂಬ ವಿಚಾರಕ್ಕೆ ಮುಂದಾಗಿದ್ದರು. ಬುಡಕಟ್ಟು ಸಂಸ್ಕೃತಿಯ ಕಾಡುಗಳಲ್ಲಿ ಇವರು ದಾಳಿ ನಡೆಸಿ, ಅಲ್ಲಿಗೆ ಲಗ್ಗೆ ಇಡುವ ಕೆಲಸವನ್ನು ಮಾಡಿದ್ದರು. ಇದನ್ನು ವಿರೋಧಿಸುತ್ತಿದ್ದ ಹಾಗೂ ಮನಗಂಡಿದ್ದ ಎಲ್ಲಾ ಬುಡಕಟ್ಟು ಕುಟುಂಬಗಳು ಮತಾಂತರವಾಗಿ ಅವರ ಜೊತೆ ಸೇರಿಕೊಳ್ಳುತ್ತಾ, ಕೊನೆಗೆ ಆ ಬುಡಕಟ್ಟು ಸಂಸ್ಕೃತಿಯೇ ಅಳಿದುಹೋಗುವಂತಹ ಭೀಕರ ಸ್ಥಿತಿ ನಿರ್ಮಾಣವಾಗಿತ್ತು. ಅದೇ ರೀತಿ ಬಿರ್ಸಾ ಮುಂಡಾ ಅವರ ಕುಟುಂಬ ಕೂಡ ಮತಾಂತರಕ್ಕೆ ಬಲಿಯಾಗಿತ್ತು. ಶಾಲೆಗಳಿಗೆ ಹೋಗುವುದು ಮತ್ತು ಕ್ರಿಶ್ಚಿಯನ್ ಮಿಷನರಿಗಳ ಜೊತೆ ಸೇರಿಕೊಳ್ಳುವುದರಿಂದ ಬುಡಕಟ್ಟು ಸಂಸ್ಕೃತಿ

ಕಳೆದುಹೋಗುತ್ತದೆ ಎಂಬುದನ್ನು ಮನಗಂಡ ಬಿರ್ಸಾ ಮುಂಡಾ ಅವರು, ನಮ್ಮ ಸಂಸ್ಕೃತಿ ಹಾಗೂ ಬುಡಕಟ್ಟು ವ್ಯವಸ್ಥೆ ಉಳಿಯಬೇಕೆಂಬ ದೃಢ ತೀರ್ಮಾನ ಕೈಗೊಂಡರು. ಬಿರ್ಸಾ ಮುಂಡಾ ಅವರ ದೇವಮಾನವ ರೂಪ ಹಾಗೂ ಕಾನೂನು ಹೋರಾಟಬಿರ್ಸಾ ಮುಂಡಾ ಅವರೇ ಒಬ್ಬ ದೇವಮಾನವರಾಗಿ ಮಾರ್ಪಾಡಾಗಿ, ತಾವೇ ಒಂದು ಕಾನೂನನ್ನು ತಂದರು. ತಾವು ತಂದ ಕಾನೂನಿಗೆ ಬುಡಕಟ್ಟು ಸಂಸ್ಕೃತಿಯ ಮುಕ್ಕಾಲು ಭಾಗ ಜನ ಬೆಂಬಲ ವ್ಯಕ್ತಪಡಿಸಿದರು ಎಂದರು.

ಬಿರ್ಸಾ ಮುಂಡಾ ಅವರು ನೀಡಿದ ಭಾಷಣಗಳಿಂದ ಪ್ರೇರಿತರಾಗಿ, ಅವರು ನೀಡಿದ ಬುಡಕಟ್ಟು ಸಂಸ್ಕೃತಿಯ ಆರಾಧನಾ ಮಾರ್ಗವನ್ನು ಅನುಸರಿಸುವ ಜಾರಿಗೆ ತರುವ ಕೆಲಸವನ್ನು ಬುಡಕಟ್ಟು ಸಮುದಾಯದವರು ಮಾಡಿದರು. ಇದನ್ನು ಕಣ್ಣಾರೆ ಕಂಡ ಬ್ರಿಟಿಷರು ಬಿರ್ಸಾ ಮುಂಡಾ ಅವರ ಮೇಲೆ ಪ್ರಭಾವವನ್ನು ಬೀರಿದರು ಮತ್ತು ಅವರನ್ನು ಬಂದಿಸುವ ಕೆಲಸವನ್ನು ಮಾಡಿದರು. ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಬಿರ್ಸಾ ಮುಂಡಾ ಅವರು, ಅಲ್ಲಿಂದಲೇ ತಮ್ಮ ಸಂಘಟನೆಗಳನ್ನು ಮುಂದುವರಿಸಿ, ತಮ್ಮ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಗಳ ವಿರುದ್ಧ ಹೋರಾಟಗಳನ್ನು ನಡೆಸಿದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿ, ಅತ್ಯಂತ ಕ್ರೂರವಾದ ಸೈನ್ಯವನ್ನು ನಿರ್ಮಾಣ ಮಾಡಿಕೊಂಡರು. ಈ ಸೈನ್ಯವು ಬ್ರಿಟಿಷರ ಮೇಲೆ ಅತ್ಯಂತ ಭೀಕರವಾದ ದಾಳಿಗಳನ್ನು ಮಾಡುವುದರ ಮುಖಾಂತರ ಸ್ವಾತಂತ್ರ್ಯ ಹೋರಾಟವಾಗಿ ರೂಪಗೊಂಡಿತು. ಹುತಾತ್ಮತೆ ಮತ್ತು ಪ್ರಸ್ತುತ ಸರ್ಕಾರದ ಗೌರವಅತ್ಯಂತ ಕಡಿಮೆ ವಯಸ್ಸಿನಲ್ಲಿ, ಅಂದರೆ ತಮ್ಮ 25ನೇ ವಯಸ್ಸಿಗೆ ಬಿರ್ಸಾ ಮುಂಡಾ ಅವರು ದುರ್ಮರಣವನ್ನಪ್ಪಿದರು. ಮೋಸದಿಂದ ಅವರನ್ನು ಮಲಗಿದ್ದ ಸಂದರ್ಭದಲ್ಲಿ ಯಾಮಾರಿಸಿ, ಕೊಲೆ ಮಾಡತಕ್ಕ ಕೆಲಸವನ್ನು ಹಾಗೂ ಅವರ ಉದರದಲ್ಲಿ ವಿಷವನ್ನು ಹಾಕಿ ಸಾಯಿಸುವ ಕೆಲಸವನ್ನು ಬ್ರಿಟಿಷರು ಮಾಡಿದರು. ಹಾಗಾಗಿ ಬಿರ್ಸಾ ಮುಂಡಾ ಅವರ ಕೊಡುಗೆ ತುಂಬಾ ಅಪಾರವಾದದ್ದು. ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರ್ಕಾರ ಬಂದಂತಹ ಸಂದರ್ಭದಲ್ಲಿ, ನರೇಂದ್ರ ಮೋದಿ ಅವರ ಸರ್ಕಾರವು ಅತ್ಯಂತ ವಿಚಾರವನ್ನು ಇಟ್ಟುಕೊಂಡು ಬಿರ್ಸಾ ಮುಂಡಾ ಅವರಿಗೆ ಗೌರವವನ್ನು ಕೊಡುವ ಕೆಲಸ ಮಾಡಿದೆ. ರಾಂಚಿಯ ವಿಮಾನ ನಿಲ್ದಾಣಕ್ಕೂ ಸಹ ಬಿರ್ಸಾ ಮುಂಡಾ ವಿಮಾನ ನಿಲ್ದಾಣವೆಂಬ ಹೆಸರನ್ನು ನೀಡಲಾಗಿದೆ. ಇಂತಹ ಮಹಾನ್ ಕ್ರಾಂತಿಕಾರಿಗಳು ಸಮಾಜವನ್ನು ತಿದ್ದುವ ಕೆಲಸಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಎಸ್.ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ಜೆ.ಬಿ. ರಾಜು ಮಾತನಾಡಿ. ಜಾರ್ಖಂಡ್‍ನಲ್ಲಿ ಹುಟ್ಟಿ ಬಡ ಕುಟುಂಬದಿಂದ ಬೆಳೆದು ಬಂದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಕೊಡುಗೆ ಅಪಾರವಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿ ಬಡ ಜನರಿಗೆ ನ್ಯಾಯ ಒದಗಿಸಲು ಅವರು ಶ್ರಮಿಸಿದ್ದರುಬಿಜೆಪಿಯ ಕಡೆಯಿಂದ ಬಿರ್ಸಾ ಮುಂಡಾ ಅವರ ಹೆಸರನ್ನು ಬಹಳ ಅದ್ಭುತವಾಗಿ ಸ್ಮರಿಸಲಾಗುತ್ತಿದ್ದು, ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಹೋರಾಡಿ, ಬಡ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದ ಕಾರಣದಿಂದ ಅವರ ವಿರುದ್ಧವೇ ಹೆಚ್ಚು ಹೋರಾಟಗಳು ನಡೆದವು ಮತ್ತು ಚಿಕ್ಕ ವಯಸ್ಸಿನಲ್ಲೇ ಬ್ರಿಟಿಷರು ಅವರನ್ನು ಅಂತ್ಯಗೊಳಿಸಿದರು ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಬಡವರ ಪರವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಬಿರ್ಸಾ ಮುಂಡಾ ಅವರ ಆದರ್ಶಗಳು ಮತ್ತು ಕೊಡುಗೆಗಳನ್ನು ಸ್ಮರಿಸುತ್ತಾ, ಅವರ ಹೆಸರಿನಲ್ಲಿ ಸಂಘಟನೆ ಹಾಗೂ ಸ್ಮರಣೆಯನ್ನು ಮತ್ತಷ್ಟು ವಿಸ್ತರಿಸುವ ಅಗತ್ಯ ಇದೆ ಎಂದರು.

ನ. 13 ರಂದು ಶಾಲಾ-ಕಾಲೇಜುಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಜಯಂತಿ ಪ್ರಯುಕ್ತ ಹಣ್ಣು ವಿತರಣೆ ಕಾರ್ಯಕ್ರಮ ನ. 14 ರಂದು ರಾಜಾವೀರ ಮದಕರಿ ನಾಯಕ ಪ್ರತಿಮೆಯನ್ನು ಸ್ವಚ್ಛಗೊಳಿಸಿ, ಸಂಜೆ ದೀಪಾರಾಧನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಎಸ್.ಟಿ. ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾದ ಶಿವಣ್ಣ, ಎಸ್.ಟಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ನವೀನ್ ಎನ್. ಬೋಸೇರಂಗಪ್ಪ, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಆರುಣ್, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ರೇಖಾ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *