ಚಿತ್ರದುರ್ಗ ನ. 15
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ತಮಕಲ್ಲು ರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‍ವತಿಯಿಂದ ಮಾಲೆ ಧರಿಸಿದ ಅಯ್ಯಪ್ಪ ಸ್ವಾಮಿಗಳಿಗೆ ಪ್ರತಿ ನಿತ್ಯ ಅನ್ನ ಪ್ರಸಾದ ಕಾರ್ಯಕ್ರಮಕ್ಕೆ ನ. 16ರಂದು ಚಾಲನೆ ನೀಡಲಾಗುತ್ತದೆ ಎಂದು ಸ್ವಾಮಿಯ ಸೇವಾ ಟ್ರಸ್ಟ್ ತಿಳಿಸಿದೆ.
ನ.16 ರಿಂದ ಪ್ರಾರಂಭವಾಗುವ ಅನ್ನ ಪ್ರಸಾದ ಕಾರ್ಯಕ್ರಮ 2027ರ ಜನವರಿ 13ರವರೆಗೆ ಪ್ರತಿ ದಿನ ಮಧ್ಯಾಹ್ನ 1 ರಿಂದ 3ರವರೆಗೆ ರಾತ್ರಿ 8 ರಿಂದ 10ರವರೆಗೆ ಅನ್ನ ಪ್ರಸಾದ ಕಾರ್ಯಕ್ರಮ ನಡೆಯಲಿದೆ, ಈ ಅನ್ನ ಪ್ರಸಾದದ ಅಂಗವಾಗಿ ನ. 16ರ ಸೋಮವಾರದಂದು 11 ಗಂಟೆಗೆ ಶ್ರೀ ಮಹಾ ಗಣಪತಿ ಹೋಮ ಹಾಗೂ ನವಗ್ರಹ ಪುರಸ್ಕರ ಶ್ರೀ ರುದ್ರ ಹೋಮ ನಡೆಯಲಿದೆ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಕಾರ್ಯ ನಡೆಯಲಿದೆ.
ಇದೇ ದಿನ ಮಧ್ಯಾಹ್ನ 12.45ಕ್ಕೆ ಅನ್ನ ಪ್ರಸಾದ ಕಾರ್ಯಕ್ರಮವನ್ನು ಬಿ.ಪಿ. ಹನುಮಂತೇಗೌಡ ಉದ್ಘಾಟನೆ ಯನ್ನು ಮಾಡಲಿದ್ದು, ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಶರಣ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಆಗಮಿಸಿ ಪ್ರಸಾದವನ್ನು ಸ್ವೀಕಾರ ಮಾಡಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು