ಸಮಾಜಸೇವೆ ಮತ್ತು ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ: ಶಾಸಕ ಡಾ. ಎಂ. ಚಂದ್ರಪ್ಪ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನ. 21

ದೇವರಾಜು ಅರಸು ವಿದ್ಯಾಸಂಸ್ಥೆಯನ್ನು ಕಟ್ಟುವಾಗ ತಾವು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಹಾಗೂ ಇದು ಬಹಳ ಲಾಭದಾಯಕ ಸಂಸ್ಥೆಯಾಗುತ್ತದೆ ಎಂದು ಭಾವಿಸಿರಲಿಲ್ಲ. ವಿದ್ಯಾರ್ಥಿಗಳನ್ನು ಸಮಾಜದ ಗೌರವಾನಿತ ಜಾಗದಲ್ಲಿ ಕೂರಿಸಿ ನೋಡಬೇಕು, ಅವರ ಭವಿಷ್ಯ ರೂಪಿಸಬೇಕು ಹಾಗೂ ಅವರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಎಂದು ದೇವರಾಜು ಅರಸು ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ಶಾಸಕರಾದ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯಲ್ಲಿರುವ ದೇವರಾಜು ಅರಸು ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ನಡೆದ ಪರಿಣಿತ್-ಪÀದವಿ ದಿನ 2026 ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರಧಾನ ಮಾಡಿ ಮಾತನಾಡಿದ ಅವರು, 46-47 ವರ್ಷಗಳ ಹಿಂದೆಯೇ ಸಮಾಜದಲ್ಲಿ ಬದಲಾವಣೆ ತರುವ ಮತ್ತು ಮಕ್ಕಳ ಜೀವನದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಇಂದಿಗೂ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವು ದಾಗಿ ತಿಳಿಸಿ ವಿದ್ಯಾರ್ಥಿಗಳು ಕೇವಲ ಉದ್ಯೋಗಗಳಿಗೆ ಸೀಮಿತವಾಗದೆ, ಸಮಾಜಕ್ಕೆ ಉಪಯುಕ್ತವಾದ ಕೆಲಸಗಳನ್ನು ಮಾಡಿ, ಇತರರಿಗೂ ಮಾರ್ಗದರ್ಶಕರಾಗಬೇಕು ಎಂದು ಕರೆ ನೀಡಿದ್ದಾರೆ.

ಇಡೀ ದೇಶ ಹಾಗೂ ರಾಜ್ಯದ ಬದಲಾವಣೆ ಸಾಧ್ಯವಾಗದಿದ್ದರೂ, ತಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸಬೇಕು ಎಂಬ ದೃಷ್ಟಿಯಿಂದ ಈ ಹೆಜ್ಜೆ ಇಡಲಾಯಿತು. ಅಂದಿನ ಕಾಲದಲ್ಲಿ ಶಿಕ್ಷಕರನ್ನು ತಯಾರು ಮಾಡಿ ಸಮಾಜದ ಒಳಿತಿಗಾಗಿ ಬಿ.ಎಡ್ ಕಾಲೇಜು, ಡಿಗ್ರಿ ಕಾಲೇಜು, ಬಿ.ಎಸ್ಸಿ ನರ್ಸಿಂಗ್, ಜನರಲ್ ನರ್ಸಿಂಗ್, ಪೋಸ್ಟ್ ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮಾ, ಪ್ರಗ್ರೇಡ್ ಕಾಲೇಜು, ಆಯುರ್ವೇದ ಕಾಲೇಜು ಹಾಗೂ ಸಿಬಿಎಸ್‍ಇ ಶಾಲೆಯ ಮೂಲಕ ಸುಮಾರು ಐದು, ಐದೂವರೆ ಸಾವಿರ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಸಂಸ್ಥೆಯನ್ನು ಕಟ್ಟಲಾಗಿದೆ. ಪದವಿ ಪಡೆದ ತಕ್ಷಣ ಯಾವುದೋ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವುದಷ್ಟೇ ಮುಖ್ಯವಲ್ಲ.ಅತ್ಯುತ್ತಮ ಪದವಿ ಪಡೆದ ನಂತರ ಹತ್ತಾರು ಜನರನ್ನು ತಮ್ಮಂತೆಯೇ ತಯಾರು ಮಾಡುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕು. ಒಬ್ಬ ರೈತ ತನ್ನ ಜಮೀನಿನಲ್ಲಿ ನೂರಾರು ಜನರಿಗೆ ಕೂಲಿ ಕೊಟ್ಟು ದುಡಿಸಿ ಸಮಾಜಕ್ಕೆ ಅನ್ನ ನೀಡುವಂತೆ, ಭವಿಷ್ಯ ರೂಪಿಸಿಕೊಳ್ಳುವ ಶಕ್ತಿ ಪಡೆದಿರುವ ವಿದ್ಯಾರ್ಥಿಗಳು ಸಮಾಜಕ್ಕೆ ಒಳ್ಳೆಯದು ಮಾಡುವ ಮತ್ತು ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ವಿದ್ಯಾರ್ಥಿಗಳು ಕೂಡ ಅಂತಹ ಪ್ರಯತ್ನ ಮಾಡಿ ಮುಂಚೂಣಿಯಲ್ಲಿ ಇರಬೇಕು. ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಇಡೀ ವಿಶ್ವವಿದ್ಯಾಲಯದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳೂ ಗೌರವ ನೀಡಲು ಸಾಧ್ಯವಾಗದ ಕಾರಣ, ಕಳೆದ ಮೂರು ವರ್ಷಗಳಿಂದ ಅರ್ಹವಾದ ಫೆಲೋಶಿಪ್ ನೀಡಲಾಗುತ್ತಿದೆ. ಇದರ ಮೂಲಕ ವಿದ್ಯಾರ್ಥಿಗಳು ಸಮಾಜದಲ್ಲಿ ತಲೆ ಎತ್ತಿ, ತಮ್ಮ ತಂದೆ-ತಾಯಿಯ ನಿರೀಕ್ಷೆಯನ್ನು ಹುಸಿಗೊಳಿಸದೆ, ಸಮಾಜಕ್ಕೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. ತಾವು 32 ವರ್ಷಗಳ ಹಿಂದೆ ಶಾಸಕರಾಗಿ ಆಯ್ಕೆಯಾಗಿ, ಎಲ್ಲರ ಆಶೀರ್ವಾದದಿಂದ ಐದು ಬಾರಿ ಶಾಸಕರಾಗಿದ್ದಾಗಿ ತಿಳಿಸಿದ್ದಾರೆ. ಸಮಾಜದ ಬಗ್ಗೆ ಕಳಕಳಿ ಇದ್ದು, ಕ್ಷೇತ್ರದ ಜನರಿಗೆ ಸಹಾಯ ಮಾಡಿ ಸಮಾಜದ ಭವಿಷ್ಯ ರೂಪಿಸುವ ಕೆಲಸ ಮಾಡಿದಾಗ ಜನರು ಪದೇಪದೇ ಆಯ್ಕೆ ಮಾಡುತ್ತಾರೆ. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡು, ಇತರ ಹತ್ತಾರು ಜನರಿಗೆ ಭವಿಷ್ಯ ನೀಡುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ತಮ್ಮ ತಂದೆ-ತಾಯಿಯರ ಶ್ರಮ ಮತ್ತು ನಿರೀಕ್ಷೆಯನ್ನು ಹುಸಿಗೊಳಿಸದೆ, ತಮಗೆ ಶಿಕ್ಷಣ ನೀಡಿದ ಪ್ರಾಧ್ಯಾಪಕರು ಹಾಗೂ ಶಿಕ್ಷಕರಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು. ಭವಿಷ್ಯದಲ್ಲಿ ಸಮಾಜವನ್ನು ಎತ್ತಿ ಹಿಡಿಯುವ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಂ.ಸುರೇಶ್ ಮಾತನಾಡಿ, ಪದವಿ ಪ್ರಮಾಣಪತ್ರ ಪಡೆದು ಮುಂದಿನ ಬದುಕಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳು ಕೇವಲ ಅಂಕಗಳು ಮತ್ತು ಪ್ರಮಾಣಪತ್ರಗಳಿಗೆ ಸೀಮಿತವಾಗದೆ, ಕೌಶಲ್ಯ ನಿರಂತರ ಪರಿಶ್ರಮ ಮತ್ತು ಸಾಮಾಜಿಕ ನಡವಳಿಕೆಗಳ ಮೂಲಕ ಸಮಾಜದಲ್ಲಿ ತಮ್ಮ ಛಾಪು ಮೂಡಿಸಬೇಕುವಿದ್ಯಾರ್ಥಿಗಳ ಪ್ರಮಾಣಪತ್ರಗಳು ಜೀವನೋಪಾಯಕ್ಕೆ ದಾರಿಯಾಗಬಹುದಾದರೂ, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದು ಅವರ ನಡವಳಿಕೆ, ಸಮಾಜದೊಂದಿಗಿನ ಒಡನಾಟ, ಹಿರಿಯರಿಗೆ ನೀಡುವ ಗೌರವ ಮತ್ತು ಕಿರಿಯರ ಮೇಲಿನ ಪ್ರೀತಿಯನ್ನು ಅವಲಂಬಿಸಿದೆ ಎಂದು ತಿಳಿಸಿದರು.

ಹಿಂದಿನ ದಿನಗಳಲ್ಲಿ ಪಡೆದ ಉತ್ತಮ ಅಂಕಗಳು ಅಥವಾ ಸಾಧನೆಗಳು ಮುಂದಿನ ದಿನಗಳಲ್ಲಿ ಶ್ರಮಿಸದಿದ್ದರೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಪ್ರತಿದಿನದ ಕಾರ್ಯಕ್ಷಮತೆ ಮತ್ತು ಶ್ರಮ ದೊಡ್ಡ ಪ್ರಮಾಣದಲ್ಲಿರಬೇಕು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಲು ಕೇವಲ ಓದಿನ ಜೊತೆಗೆ ಕೌಶಲ್ಯ ರೂಪಿಸಿಕೊಳ್ಳುವುದು ಅತ್ಯಗತ್ಯ. ವಿವಿಧ ಪುಸ್ತಕಗಳ ಓದು, ಕಂಪ್ಯೂಟರ್ ಜ್ಞಾನದ ನವೀಕರಣ ಮತ್ತು ಸಮಾಜದೊಂದಿಗಿನ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಕೇವಲ ಹಣ ಸಂಪಾದನೆ ಅಥವಾ ಹೆಸರು ಮಾಡುವ ಗುರಿಗಿಂತ, ಒಳ್ಳೆಯ ಹೆಸರು ತರುವಂತಹ ಕೆಲಸವನ್ನು ಶ್ರದ್ಧೆಯಿಂದ ಆರಂಭಿಸಿದರೆ, ಯಶಸ್ಸು ಮತ್ತು ಸಂಪತ್ತು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಮುಂದಿನ ದಿನಗಳಲ್ಲಿ ಭಾಷಾ ಅಧ್ಯಯನ ಮತ್ತು ಬೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿವೆ. ಆಳವಾದ ಜ್ಞಾನ ಮತ್ತು ಕೌಶಲ್ಯ ಹೊಂದಿರುವವರಿಗೆ ಉತ್ತಮ ಭವಿಷ್ಯವಿದೆ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಳ್ಳುವ ಯಾವುದೇ ವೃತ್ತಿ ಅಥವಾ ಕ್ಷೇತ್ರದಲ್ಲಿ ಶ್ರದ್ಧೆ, ನಂಬಿಕೆ ಮತ್ತು ಪೂರ್ಣ ಪ್ರಮಾಣದ ಶ್ರಮದೊಂದಿಗೆ ಕಾರ್ಯನಿರ್ವಹಿಸಬೇಕು. ಸಾಮಾಜಿಕ ಬದ್ಧತೆ ಮತ್ತು ಕೌಶಲ್ಯದೊಂದಿಗೆ ಮುನ್ನಡೆದಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ದೇವರಾಜು ಅರಸು ವಿದ್ಯಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಘು ಚಂದನ್ ಮಾತನಾಡಿ, 1983ರಲ್ಲಿ ಸ್ಥಾಪನೆಯಾದ ದೇವರಾಜ ಅರಸು ಶಿಕ್ಷಣ ಸಂಸ್ಥೆಯು, ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗದಲ್ಲಿ ಹಲವು ಸವಾಲುಗಳ ನಡುವೆ ಬೆಳೆದು ಬಂದಿದೆ. ನಗರ ಮತ್ತು ಗ್ರಾಮೀಣ ಭಾಗದ ಪ್ರತಿಯೊಂದು ಮೂಲೆಗೂ ಗುಣಮಟ್ಟದ ಶಿಕ್ಷಣವನ್ನು ತಲುಪಿಸುವುದು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಪ್ರತಿ ವರ್ಷ ಸುಮಾರು 400ರಿಂದ 450 ವಿದ್ಯಾರ್ಥಿಗಳು ಇಲ್ಲಿಂದ ಪದವಿ ಪಡೆಯುತ್ತಿದ್ದಾರೆ. ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಸಂಸ್ಥೆಯ ತಾಯಿ ಬೇರು ಈ ಮಹಾವಿದ್ಯಾಲಯದ ಅಡಿಯಲ್ಲಿ 1983ರಲ್ಲಿ ಆರಂಭವಾದ ಎಂ. ಎಂ. ಪ್ರೌಢಶಾಲೆ ವೃತ್ತಿಪರ ತರಬೇತಿ, ಸೂಕ್ಷ್ಮ ಬೋಧನಾ ಕಾರ್ಯಾ ಗಾರ, ಬೋಧನಾ ಕೌಶಲ್ಯ ಮತ್ತು ಶಿಕ್ಷಣದಲ್ಲಿ ರಂಗಕಲೆ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಉತ್ತಮ ಶೈಕ್ಷಣಿಕ ಸಾಧನೆ ಮೂಡಿಬಂದಿದೆ ಎಂದರು.

1998ರಲ್ಲಿ ಆರಂಭವಾದ ನರ್ಸಿಂಗ್ ಸಂಸ್ಥೆಯಲ್ಲಿ ಬಿ. ಎಸ್ಸಿ. ನರ್ಸಿಂಗ್, ಜಿ. ಎನ್. ಎಂ. ಮತ್ತು ಸ್ನಾತಕೋತ್ತರ ನರ್ಸಿಂಗ್ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದು, ದೇಶ-ವಿದೇಶಗಳ ವಿವಿಧ ಆಸ್ಪತ್ರೆಗಳಲ್ಲಿ ಪೂರ್ವ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ, ಆದ್ಯ ಫಾರ್ಮಸಿ ಕಾಲೇಜು ತ್ವರಿತ ಬೆಳವಣಿಗೆ ಕಂಡಿದ್ದು, ವಿದ್ಯಾರ್ಥಿಗಳು ವಿವಿಧ ಔಷಧೀಯ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾದ ಮೈತ್ರಿ ಸಮೂಹ ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮೂರು ತಿಂಗಳ ವಿನಿಮಯ ಕಾರ್ಯಕ್ರಮದ ಮೂಲಕ ಸಂಸ್ಥೆಗೆ ಗೌರವ ದೊರೆತಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಮಟ್ಟದಲ್ಲಿ ನಮ್ಮ ಕಾಲೇಜಿನಲ್ಲಿ ಅಬ್ಯಾಸ ಮಾಡಿದ ಕುಮಾರಿ ಕವಿತಾ ವಿ. ಪ್ರಥಮ ಶ್ರೇಣಿ ಪಡೆದಿರುವುದನ್ನು ಹಾಗೂ ತರುಣ್ ಕುಮಾರ್, ಕುಮಾರಿ ವೀಣಾ, ಕುಮಾರಿ ರಕ್ಷಿತಾ ಮತ್ತು ಕುಮಾರಿ ಮಮತಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಜೊತೆಗೆ, ವಿಭಿನ್ನ ಪದವಿ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಶ್ರೇಣಿ ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಕೃತಿ ಆಯುರ್ವೇದ ವೈದ್ಯಕೀಯ ಕಾಲೇಜು ಮುಂದಿನ ವರ್ಷ ಪದವಿ ಹಂತಕ್ಕೆ ತಲುಪಲಿದ್ದು, ಮೂರನೇ ವರ್ಷದತ್ತ ಸಾಗುತ್ತಿದೆ. ಪ್ರತಿ ವರ್ಷ 500ರಿಂದ 600 ವಿದ್ಯಾರ್ಥಿಗಳು ಪದವಿ ಪಡೆಯುತ್ತಿರುವ ಸಂದರ್ಭದಲ್ಲಿ,ಕೇವಲ ಶಿಕ್ಷಣ ನೀಡುವುದಷ್ಟೇ ಅಲ್ಲದೆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ಕಲಿಸುತ್ತಿದ್ದೇವೆಯೇ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅತ್ಯಂತ ಮಹತ್ವದ ಅಂಶವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿ ಶೈಕ್ಷಣಿಕ ಮತ್ತು ಸಾಧನಾ ವರದಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ದೇವರಾಜು ಅರಸು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಚಂದ್ರಕಲಾ, ಅಧ್ಯಕ್ಷರಾದ ಶ್ರೀಮತಿ ಯಶಸ್ವಿನಿ, ಡೀನ್ ಆನಂತರಾಮು, ಶ್ರೀ ವೆಂಕಟೇಶ್ವರ ಕಾಲೇಜು ಆಫ್ ಎಜುಕೇಶಷನ್ ನ ಪ್ರಾಂಶುಪಾಲರಾದ ಡಾ.ಕೆ.ಪಿ.ನಾಗಭೂಷಣ ಶಟ್ಟಿ, ಶ್ರೀ ವೆಂಕಟೇಶ್ವರ ಫಸ್ಟ್ ಗ್ರೇಡ್ ಕಾಲೇಜಿನ ಪ್ರಾಂಶುಪಾಲ ರಾದ ಡಾ.ಎ.ಜೆ.ಶಿವಕುಮಾರ್, ಎಸ್.ಎಲ್.ವಿ, ಸ್ಕೂಲ್ ಕಾಲೇಜ್ ಆಫ್ ನರ್ಸಿಂಗ್‍ನ ಪ್ರಾಂಶುಪಾಲರಾದ ಡಾ.ಮಹಾಂತೇಶ್, ಅದ್ಯ ಕಾಲೇಜಿ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ.ಆರ್.ಕೆ. ಮಹಮ್ಮದ್ ಮುತ್ತಾರ್ ಉಪಸ್ಥಿತರಿದ್ದರು,

ಇದೇ ಸಂದರ್ಭದಲ್ಲಿ ಕುಮಾರಿ ಸುನೀತರವರಿಗೆ ಕಾಲೇಜಿನಿಂದ ಕೂಡಲ್ಲಪಡುವ ಮಸಿಯಪ್ಪ ಪ್ರಶಸ್ತಿಗೆ ಪಾತ್ರರಾಗಿ 50 ಸಾವಿರ ನಗದು ಹಾಗೂ ಪಾರಿತೋಷಕವನ್ನು ನೀಡಲಾಯಿತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *