ಚಿತ್ರದುರ್ಗ ನ. 21
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜಾತಿ-ಲಿಂಗ ಭೇದವಿಲ್ಲದೆ ಶರಣರೆಲ್ಲರೂ ಒಂದಾಗಿ ಶರಣ ಮೇಳದಲ್ಲಿ ಪಾಲ್ಗೊಳ್ಳಬೇಕು ಹಾಗೂ ಅನುಭಾವ ಮತ್ತುಆಚಾರಗಳೊಂದಿಗೆ ಬಸವ ತತ್ವದ ಹಾದಿಯಲ್ಲಿ ಮುನ್ನಡೆಯಬೇಕು ಈ ಮೇಳದಲ್ಲಿ ಎಲ್ಲರೂ ಅನುಭಾವ ಹಾಗೂ ಆಚಾರದ ಮೂಲಕಭಕ್ತಿಯನ್ನು ಅರ್ಥೈಸಿಕೊಳ್ಳಬೇಕು ಶರಣರಿಗಾಗಿ ಶರಣರೇ ಮಾಡುವ ಮೇಳವೇ ಶರಣ ಮೇಳವಾಗಿದ್ದು, ಇದಕ್ಕೆ ಎಲ್ಲರೂ ಬರಬೇಕು,ಸಹಕಾರ ನೀಡಬೇಕು ಮತ್ತು ಚರ್ಚೆ ನಡೆಸಿ ಕಾರ್ಯಕ್ರಮ ರೂಪಿಸಬೇಕು ಎಂದು ಕೊಡಲ ಸಂಗಮ ಬಸವಧರ್ಮ ಪೀಠದಅಧ್ಯಕ್ಷರಾದ ಮಾತೆ ಗಂಗಾದೇವಿ ಕರೆ ನೀಡಿದರು.
ಕೊಡಲ ಸಂಗಮದಲ್ಲಿ 2027ರ ಜನವರಿ 11 ರಿಂದ 14ರವರೆಗೆ ನಡೆಯಲಿರುವ ಶರಣ ಮೇಳದ ಅಂಗವಾಗಿ ಶುಕ್ರವಾರ ಸಂಜೆ ಬಸವಮಂಟಪದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾತಾಜಿಯವರು, ಶರಣ ಮೇಳದ ಪ್ರಚಾರದ ಸಲುವಾಗಿಊರಿಂದೂರಿಗೆ ತೆರಳಿ ಪ್ರಚಾರ ಮಾಡುತ್ತಾ ಚಿತ್ರದುರ್ಗ ನಗರಕ್ಕೆ ಪ್ರವೇಶ ಮಾಡಲಾಗಿದೆ. ಹಲವಾರು ವರ್ಷಗಳಿಂದ ಬೇರೆ ಬೇರೆಕಡೆ ಪ್ರಚಾರ ಮಾಡಿಕೊಂಡು, ಈ ಊರಿಗೂ ಬಂದು ಮುಂದಿನ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಪ್ರಚಾರಕೈಗೊಳ್ಳಲಾಗಿದೆ ಎಂದು ಹೇಳಿ, ವಿವಿಧ ಧರ್ಮಗಳ ಅನುಯಾಯಿಗಳು ವರ್ಷಕ್ಕೊಮ್ಮೆ ತಮ್ಮ ಧರ್ಮಕ್ಷೇತ್ರಗಳಿಗೆ ತೆರಳುವಂತೆಶರಣರು ಕೂಡಲಸಂಗಮಕ್ಕೆ ಬರುತ್ತಿದ್ದಾರೆ. ಇಲ್ಲಿ ಜಾತಿ ಭೇದ, ಲಿಂಗ ಭೇದ ಹಾಗೂ ಆ ಜಾತಿ-ಈ ಜಾತಿ ಎಂಬ ಭೇದಗಳಿಲ್ಲದೆಎಲ್ಲರೂ ಬರಬೇಕು ಎಂಬ ಉದ್ದೇಶದಿಂದ ಪ್ರಚಾರ ಮಾಡಲಾಗುತ್ತಿದೆ ಎಂದರು.

ಹನ್ನೆರಡನೇ ಶತಮಾನದಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ವರ್ಷಕ್ಕೊಮ್ಮೆ ವಿಶೇಷ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು,ಅದಕ್ಕೆ ‘ಗಣಪರ್ವ’ ಎಂದು ಹೆಸರಿಡಲಾಗಿತ್ತು ಹರಿಹರ ಮಹಾಕವಿಯು ಬಸವಣ್ಣನವರನ್ನು ಸ್ತುತಿಸುವಾಗ ಅವರು ಸಾಮಾನ್ಯರಲ್ಲ,ಗಣಪರ್ವವನ್ನು ಸುಫಲಗೊಳಿಸಲು ಬಂದ ಕಾರಣಿಕ ಬಸವಣ್ಣ ಎಂದ ಅವರು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿಸಂಪ್ರದಾಯವಾದಿಗಳ ವಿರೋಧ ಮತ್ತು ಕೊಂಡಿ ಮಂಚಣ್ಣನ ನೇತೃತ್ವದ ಬೆಳವಣಿಗೆಗಳ ನಡುವೆ ಶರಣರು ಚದುರಿ ಹೋದರುಮಡಿವಾಳ ಮಾಚಿದೇವರು ಮುಂದೆ ಇಲ್ಲಿ ನಡೆಯುವುದಿಲ್ಲ, ಗಣಪರ್ವ ನಡೆಯಲು ಸಾಧ್ಯವಿಲ್ಲ; ಮತ್ತೆ ಒಂದಾನೊಂದು ಕಾಲಬರುತ್ತದೆ, ದಕ್ಷಿಣದ ಕೃಷ್ಣೆಗೆ ಕರೆವರಯ್ಯ, ಜನ ನೆರೆವರಯ್ಯ ಎಂದು ಹೇಳಿದ್ದನ್ನು ಹಾಗೂ ಮೊದಲಿಗೆ ಕೃಷ್ಣಾ ನದಿಯ ದಂಡೆಗೆ ಆಗುತ್ತದೆ ಎಂದು ತಿಳಿಸಿದ್ದನ್ನು ಪ್ರಸ್ತಾಪಿಸಿ ಕಳೆದ ನಲವತ್ತು ವರ್ಷಗಳಿಂದ ಶರಣ ಮೇಳವು ಕೃಷ್ಣಾ ನದಿಯ ದಂಡೆಯತ್ತ ಸಾಗುತ್ತಿದ್ದು,ಚದುರಿಹೋದ ಶರಣರು ಮತ್ತೆ ಒಂದಾಗಿ ಸೇರುವ ಅವಕಾಶ ಒದಗಿಬಂದಿದೆ ಎಂದು ತಿಳಿಸಿದರು.
ಹಿಂದೆ ನಿಂತುಹೋಗಿದ್ದ ಗಣ ಪರ್ವವು ಶರಣಬಳಗದ ಪ್ರಯತ್ನದಿಂದ ಶರಣ ಮೇಳವಾಗಿ ಪರಿವರ್ತನೆಗೊಂಡಿದ್ದು, ಲಿಂಗಾನಂದಅಪ್ಪಾಜಿ ಮತ್ತು ಮಾತಾಜಿ ಅವರು ಇದಕ್ಕೆ ಚಾಲನೆ ನೀಡಿದ್ದಾರೆ ಇದನ್ನು ಮುಂದೆಯೂ ನಿರಂತರವಾಗಿ ನಡೆಸಿಕೊಂಡು ಹೋಗಬೇಕುಹಾಗೂ ಎಲ್ಲಾ ಪರ-ಬಸವಪರ ಸಂಘಟನೆಗಳು ಒಟ್ಟಾಗಿ ಹೋರಾಟ ಹಾಗೂ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿ ಭಕ್ತಿಗೆ ಅನುಭಾವವೇ ಬೀಜವಾಗಬೇಕು; ಅನುಭಾವವಿಲ್ಲದ ಭಕ್ತಿ ಮೂಢಭಕ್ತಿ ಅಥವಾ ಯಾಂತ್ರಿಕ ಭಕ್ತಿಯಾಗುತ್ತದೆ ಭಕ್ತಿಗೆ ಅನುಭಾವವೇಆಚಾರವಾಗಬೇಕು ಮತ್ತು ಆಚಾರವೇ ಪ್ರಾಣವಾಗಬೇಕು ಕೇವಲ ಭಾಷಣ ಮಾಡುವುದಕ್ಕಿಂತ ಆಚಾರ ಮತ್ತು ವಿಚಾರಗಳು ನಡೆ-ನುಡಿಯಲ್ಲಿ ಹೊಂದಿಕೆಯಾಗಬೇಕು ಎಂದು ಪ್ರತಿಪಾದಿಸಿ ಶರಣ ಮೇಳದಲ್ಲಿ ಉತ್ತಮ ಭಾಷಣಕಾರರು ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವುಗಳಲ್ಲಿ ಭಾಗಿಯಾಗುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಸಮುದಾಯದ ಸಹಭಾಗಿತ್ವಅಗತ್ಯವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷರಾದ ಕೆ.ವಿರೇಶ್ ಕುಮಾರ್, ಚಿತ್ರದುರ್ಗ ಬಸವ ಮಂಟಪದ ಗೌರವಾಧ್ಯಕ್ಷರಾದ ದಾನೇಶ್ವರಿ ಮಾತೆ, ಲಿಂಗಾಯತ ಧರ್ಮ ಮಹಾ ಸಭಾದ ಅಧ್ಯಕ್ಷರಾದ ಎಂ.ಬಿ. ಶಂಕರಪ್ಪ, ಅಕ್ಕ ನಾಗಲಾಂಬಿಕಮಹಿಳಾ ಗಣ ಮಹಾ ಸಭಾದ ಅಧ್ಯಕ್ಷರಾದ ಅಕ್ಕ ಮಹಾದೇವಿ, ನಂದಿಶ್, ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇಸಂದರ್ಭದಲ್ಲಿ ಕೊಡಲ ಸಂಗಮದಲ್ಲಿ 2027ರ ಜನವರಿ 11 ರಿಂದ 14ರವರೆಗೆ ನಡೆಯಲಿರುವ ಶರಣ ಮೇಳದ ಅಂಗವಾಗಿ ಭಿತ್ತಿ ಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು