Dhoni Entertainment: ತಮಿಳು ಸ್ಟಾರ್ ನಟ ಯೋಗಿ ಬಾಬುಗೆ ಸರ್​ಪ್ರೈಸ್ ಗಿಫ್ಟ್ ನೀಡಿದ ಎಂಎಸ್ ಧೋನಿ: ಫೋಟೋ ವೈರಲ್​

Yogi Babu and MS Dhoni

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾದ ಬಳಿಕ ಅನೇಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬಿಟ್ಟರೆ ಧೋನಿ ಇತರೆ ಯಾವುದೇ ಪಂದ್ಯದಲ್ಲಿ ಆಡುತ್ತಿಲ್ಲ. ಬದಲಾಗಿ ತನ್ನದೇ ಒಂದು ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದು ಇದಕ್ಕೆ ಧೋನಿ ಎಂಟರ್​ಟೇನ್​ಮೆಂಟ್ (Dhoni Entertainment) ಎಂದು ಹೆಸರಿಡಲಾಗಿದೆ. ಕಳೆದ ತಿಂಗಳು ಜನವರಿ 27 ರಂದು ಧೋನಿ ಎಂಟರ್​ಟೇನ್​ಮೆಂಟ್ ಕಡೆಯಿಂದ ಚೊಚ್ಚಲ ಸಿನಿಮಾ ಕೂಡ ಘೋಷಣೆ ಆಗಿತ್ತು. ಅವರ ಮೊದಲ ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್​’ (Lets Get Married) ಎಂದು ಶೀರ್ಷಿಕೆ ಇಡಲಾಗಿದೆ.

ಇದೀಗ ಈ ಚಿತ್ರದ ನಾಯಕ ಯೋಗಿ ಬಾಬು ಅವರಿಗೆ ಧೋನಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಎಂಎಸ್​ಡಿ ಅವರು ತನ್ನ ಅಟೋಗ್ರಾಫ್ ಇರುವ ಬ್ಯಾಟ್​ವೊಂದನ್ನು ಯೋಗಿ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಫೋಟೋವನ್ನು ಯೋಗಿ ಬಾಬು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ. ಲೆಟ್ಸ್ ಗೆಟ್ ಮ್ಯಾರೀಡ್ ‘ಎಲ್​ಜಿಎಂ’ ಎಂಬುದು ಸಿನಿಮಾ ಟೈಟಲ್​ನ ಶಾರ್ಟ್​ಫಾರ್ಮ್​. ರಮೇಶ್ ತಮಿಳ್​ಮಣಿ ಅವರು ಚಿತ್ರವನ್ನು ನಿರ್ದೇಶನ ಮಾಡಿದರೆ, ಸಾಕ್ಷಿ ಸಿಂಗ್ ಧೋನಿ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

 

ICC Womens T20 World Cup 2023: ವೆಸ್ಟ್ ಇಂಡೀಸ್​ ತಂಡಕ್ಕೆ ಸೋಲುಣಿಸಿದ ಟೀಮ್ ಇಂಡಿಯಾ

ಈ ಸಿನಿಮಾದಲ್ಲಿ ಯೋಗಿ ಬಾಬು ಜೊತೆಗೆ ಹರೀಶ್ ಕಲ್ಯಾಣ್, ಇವಾನ, ನದಿಯಾ ಸೇರಿದಂತೆ ದೊಡ್ಡ ತಾರಾಗಣ ಇರಲಿದೆ. ಇದೊಂದು ಫ್ಯಾಮಿಲಿ ಎಂಟರ್​ಟೇನ್​ಮೆಂಟ್ ಸಿನಿಮಾ. ಧೋನಿಗೂ ತಮಿಳುನಾಡಿಗೂ ಉತ್ತಮ ನಂಟಿದೆ. ಇದಕ್ಕೆ ಕಾರಣ ಐಪಿಎಲ್. ಧೋನಿ ಅವರು ಈ ಮೊದಲಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ, ತಮಿಳುನಾಡಿನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಮೊದಲ ಚಿತ್ರವನ್ನು ತಮಿಳಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

 

ಕೇವಲ ತಮಿಳು ಸಿನಿಮಾ ಮಾತ್ರವಲ್ಲದೆ ಇನ್ನೂ ಹಲವು ನಿರ್ದೇಶಕರ ಜತೆ ಧೋನಿ ಮಾತುಕತೆಯಲ್ಲಿ ಇದ್ದಾರೆ. ಧೋನಿಗೆ ಈ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದೆ. ಕ್ರಿಕೆಟ್​ನಿಂದ ನಿವೃತ್ತಿ ಪಡೆದ ಬಳಿಕ ಅವರು ಈ ಬಗ್ಗೆ ಗಮನಹರಿಸುತ್ತಿದ್ದಾರೆ. ಮೂಲಗಳ ಪ್ರಕಾರ ವೆಬ್​ ಸೀರಿಸ್​ಗಳನ್ನು ನಿರ್ಮಾಣ ಮಾಡುವತ್ತವೂ ಧೋನಿ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ms-dhoni-gifting-an-autographed-bat-that-he-used-in-the-nets-to-tamil-star-yogi-babu-cricket-news-in-kannada-vb-au48-520960.html

Leave a Reply

Your email address will not be published. Required fields are marked *