Virat Kohli: RCB…RCB ಎಂದು ಕೂಗಿದ ಅಭಿಮಾನಿಗಳಿಗೆ ಖಡಕ್ ಸೂಚನೆ ನೀಡಿದ ವಿರಾಟ್ ಕೊಹ್ಲಿ

Virat Kohli Urges Fans to Stop Chanting 'RCB, RCB'

India vs Australia: ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ (Team India)  2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಅದರಲ್ಲೂ ದೆಹಲಿ ಟೆಸ್ಟ್​ನಲ್ಲಿ ಭಾರತ ತಂಡವು 6 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಇದೀಗ ಈ ಪಂದ್ಯದ ವಿಡಿಯೋ ಕ್ಲಿಪ್ಪಿಂಗ್​ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದ ಆರ್​ಸಿಬಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವೇಳೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಆರ್​ಸಿಬಿ ಆರ್​ಸಿಬಿ…ಘೋಷವಾಕ್ಯ ಮೊಳಗಿಸಲಾರಂಭಿಸಿದರು. ಇತ್ತ ತಮ್ಮನೇ ನೋಡಿ ಆರ್​ಸಿಬಿ ಅಭಿಮಾನಿಗಳು ಘೋಷಣೆ ಕೂಗುತ್ತಿರುವುದು ವಿರಾಟ್ ಕೊಹ್ಲಿಗೂ ಸ್ಪಷ್ಟವಾಗಿತ್ತು.

ತಕ್ಷಣವೇ ವಿರಾಟ್ ಕೊಹ್ಲಿ ತಾನು ಧರಿಸಿರುವ ಭಾರತ ತಂಡದ ಜೆರ್ಸಿಯನ್ನು ತೋರಿಸಿದ್ದಾರೆ. ಅಲ್ಲದೆ ಆರ್‌ಸಿಬಿ ಬದಲಿಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದರು. ಇದನ್ನು ಗಮನಿಸಿದ ಅಭಿಮಾನಿಗಳು ಆರ್​ಸಿಬಿ ಬದಲಿಗೆ ಇಂಡಿಯಾ, ಇಂಡಿಯಾ… ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು. ಇತ್ತ ಖುಷಿ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ಮತ್ತಷ್ಟು ಜೋರಾಗಿ ಕೂಗುವಂತೆ ಅಭಿಮಾನಿಗಳನ್ನು ಹುರಿದುಂಬಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಹಿಂದೆ ಕೂಡ ಬದ್ಧತೆ ಮರೆದಿದ್ದ ಕೊಹ್ಲಿ:

ವಿರಾಟ್ ಕೊಹ್ಲಿಗೆ ಇಂತಹ ಅನುಭವ ಇದೇ ಮೊದಲೇನಲ್ಲ. ಈ ಹಿಂದೆ ಅಂದರೆ ಕಳೆದ ವರ್ಷ ನಡೆದ ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯ ವೇಳೆಯೂ ಆರ್​ಸಿಬಿ ಅಭಿಮಾನಿಗಳು ಘೋಷವಾಕ್ಯ ಮೊಳಗಿಸಿದ್ದರು.
ತಕ್ಷಣವೇ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಜೆರ್ಸಿ ಮೇಲಿರುವ ಲೋಗೋವನ್ನು ತೋರಿಸಿದರು. ಈ ಮೂಲಕ ನಾನು ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಹೊರತು ಐಪಿಎಲ್ ಫ್ರಾಂಚೈಸಿ ಅಲ್ಲ ಎಂದು ಅಭಿಮಾನಿಗಳಿಗೆ ಸನ್ನೆ ಮಾಡಿದರು.

ಕೊಹ್ಲಿಯ ಸನ್ನೆಯನ್ನು ಗಮನಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳು ತಕ್ಷಣವೇ ಆರ್​ಸಿಬಿ ಘೋಷಣೆಗಳನ್ನು ನಿಲ್ಲಿಸಿದ್ದರು. ಇದೀಗ ದೆಹಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಫ್ರಾಂಚೈಸಿಯ ಬದಲಿಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸುವಂತೆ ತಿಳಿಸಿ ಎಲ್ಲರ ಮನಗೆದ್ದಿದ್ದಾರೆ.

 

source https://tv9kannada.com/sports/cricket-news/virat-kohli-urges-fans-to-stop-chanting-rcb-rcb-zp-au50-524307.html

Leave a Reply

Your email address will not be published. Required fields are marked *