WPL 2023: ಚೊಚ್ಚಲ ಆವೃತ್ತಿಗೆ ಹೊಸ ಜೆರ್ಸಿ ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್; ಫೋಟೋ ನೋಡಿ

WPL 2023 Mumbai Indians unveil their new jersey for inaugural Womens Premier League see photos

ಭಾರತದಲ್ಲಿ ಮೊದಲ ಬಾರಿಗೆ ಆಯೋಜನೆಯಾಗುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್​ಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 4 ರಂದು ಮೊದಲ ಪಂದ್ಯ ನಡೆಯುವುದರೊಂದಿಗೆ ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರ್ತಿಯರ ಮೇಲೆ ಹಣದ ಮಳೆಯನ್ನೇ ಸುರಿಸಿದವು. ಇದರೊಂದಿಗೆ ತಮ್ಮ ತಮ್ಮ ತಂಡಗಳನ್ನು ಬಲಿಷ್ಠಗೊಳಿಸಿಕೊಂಡಿದ್ದವು. ಆ ಬಳಿಕ ತಮ್ಮ ತಮ್ಮ ತಂಡಗಳಿಗೆ ನಾಯಕಿಯರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ಇದೀಗ ಎಲ್ಲಾ ಫ್ರಾಂಚೈಸಿಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ತನ್ನ ಮಹಿಳಾ ತಂಡದ ಜೆರ್ಸಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಮುಂಬೈನ ಮಹಿಳಾ ತಂಡದ ಜೆರ್ಸಿ ತಿಳಿ ನೀಲಿ ಬಣ್ಣದ್ದಾಗಿದ್ದು, ಇದು ಬದಿಯಲ್ಲಿ ಕಿತ್ತಳೆ ಬಣ್ಣ ಮತ್ತು ಗೋಲ್ಡನ್ ಬಣ್ಣದ ಗೆರೆಗಳನ್ನು ಹೊಂದಿದೆ. ಮಹಿಳಾ ತಂಡದ ಜೆರ್ಸಿಗೂ, ಪುರುಷರ ತಂಡದ ಜೆರ್ಸಿಗೂ ಸಾಕಷ್ಟು ಸಾಮ್ಯತೆ ಇದೆ. ಈ ಜೆರ್ಸಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮುಂಬೈ ತಂಡ ಮಾಹಿತಿ ಹಂಚಿಕೊಂಡಿದೆ.

source https://tv9kannada.com/sports/cricket-news/wpl-2023-mumbai-indians-unveil-their-new-jersey-for-inaugural-womens-premier-league-see-photos-psr-au14-526515.html

Leave a Reply

Your email address will not be published. Required fields are marked *