VIDEO: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಡೇವಿಡ್ ವಾರ್ನರ್: ವಿಡಿಯೋ ವೈರಲ್

David Warner turns into another popular South actor

ಆಸ್ಟ್ರೇಲಿಯಾ (Australia) ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ (David Warner) ಸೋಷಿಯಲ್ ಮೀಡಿಯಾದಲ್ಲಿ ನಾನಾ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಬಾಲಿವುಡ್ ಬಾದ್​ಷಾ ಶಾರೂಖ್ ಖಾನ್​ ಅಭಿನಯದ ಪಠಾಣ್ ಲುಕ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದ ವಾರ್ನರ್ ಇದೀಗ ಸೌತ್ ಸ್ಟಾರ್ ರೂಪದಲ್ಲಿ ಎಲ್ಲರ ಗಮನ ಸೆಳೆದಿರುವುದು ವಿಶೇಷ.

ಡೇವಿಡ್ ವಾರ್ನರ್ ತಮಿಳಿನ ವಿಕ್ರಮ್​ ಅಭಿನಯದ ಸೂಪರ್ ಹಿಟ್​ ಚಿತ್ರ ಐ ಸಿನಿಮಾದ ದೃಶ್ಯವೊಂದರ ಕ್ಲಿಪ್​ವೊಂದಕ್ಕೆ ಫೇಸ್-ಸ್ವಾಪ್ ಮಾಡಿದ್ದಾರೆ. ವಿಶೇಷ ಎಂದರೆ ಆಸೀಸ್ ಕ್ರಿಕೆಟಿಗ ಹೀಗೆ ಫೇಸ್ ಸ್ವಾಪ್ ಮಾಡಿರುವು ಐ ಚಿತ್ರದ ಹೈಲೇಟ್​ಗಳಲ್ಲಿ ಒಂದಾಗಿರುವ ಜಿಮ್ ಫೈಟ್​ ಸೀಸನ್​ನಲ್ಲಿ. ಇದುವೇ ಈಗ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ಮೂಲ ಚಿತ್ರದಲ್ಲಿ ನಟ ವಿಕ್ರಮ್ ಜಿಮ್​ ಮಾಡುತ್ತಿರುವ ವೇಳೆ ವಿಲನ್​ಗಳ ಜೊತೆ ಫೈಟಿಂಗ್ ನಡೆಯುತ್ತದೆ.​ ಅದೇ ದೃಶ್ಯಕ್ಕೆ ಡೇವಿಡ್ ವಾರ್ನರ್ ಮುಖಚಹರೆ ಎಡಿಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಆಸ್ಟ್ರೇಲಿಯಾ ಆಟಗಾರ ಇನ್​ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಇದೀಗ ವಾರ್ನರ್ ಅವರ ಹೊಸ ಅವತಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ನಾನಾ ರೀತಿಯಲ್ಲಿ ಕಾಲೆಳೆಯುವ ಕಮೆಂಟ್​ಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.

ಬಾರ್ಡರ್-ಗವಾಸ್ಕರ್ ಸರಣಿಯಿಂದ ಔಟ್:

ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಡೇವಿಡ್ ವಾರ್ನರ್ ಹೊರಗುಳಿದಿದ್ದಾರೆ. 2ನೇ ಟೆಸ್ಟ್ ಪಂದ್ಯದ ವೇಳೆ ಕೈಗೆ ಗಾಯ ಮಾಡಿಕೊಂಡಿರುವ ವಾರ್ನರ್ ಇದೀಗ ಆಸ್ಟ್ರೇಲಿಯಾಗೆ ಮರಳಿದ್ದಾರೆ. ಹೀಗಾಗಿ ಮೂರನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್​ ಆಟಗಾರ ಕಾಣಿಸಿಕೊಳ್ಳುವುದಿಲ್ಲ. ಇದಾಗ್ಯೂ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯ ಮೂಲಕ ಡೇವಿಡ್ ವಾರ್ನರ್ ಕಂಬ್ಯಾಕ್ ಮಾಡಲಿದ್ದಾರೆ.

source https://tv9kannada.com/sports/cricket-news/david-warner-turns-into-another-popular-south-actor-kannada-news-zp-au50-526769.html

Leave a Reply

Your email address will not be published. Required fields are marked *