ಚಿತ್ರದುರ್ಗ: ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ವಿದ್ಯಾರ್ಥಿಗಳನ್ನು ತರಗತಿಯಲ್ಲಿ ತೊಡಗಿಸುವುದು ಹೇಗೆ?’ ವಿಶೇಷ ಉಪನ್ಯಾಸ.

ಚಿತ್ರದುರ್ಗ ಜು. 10

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಶಿಕ್ಷಕ ವೃತ್ತಿಗಿಂತ ಬೇರೆ ವೃತ್ತಿಗಳಿಗಿಂತ ವಿಭಿನ್ನವಾಗಿದೆ,ಬೇರೆ ವೃತ್ತಿಗಳು ಹಣದೊಂದಿಗೆ ವ್ಯವಹಾರ ನಡೆದರೆ ಶಿಕ್ಷಕ ವೃತ್ತಿ ಮಾತ್ರ ನೆಮ್ಮದಿ, ಸಂತೋಷ, ಹಾಗೂ ಜೀವಂತ ವ್ಯಕ್ತಿಗಳ ಭಾವನೆಯೊಂದಿಗೆ ವ್ಯವಹಾರ ಮಾಡುವಂತ ವೃತ್ತಿಯಾಗಿದೆ ಎಂದು ಮುಖ್ಯೋಪಾಧ್ಯಯರಾದ ಡಾ. ಕೆ.ಎನ್.ಮಹೇಶ್ ಭಾವಿ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಚಿತ್ರದುರ್ಗ ನಗರದ ಹೂರ ವಲಯದ ಪಿಳ್ಳೇಕೆರೆನಹಳ್ಳಿಯಲ್ಲಿನ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ (ಬಿಇಡಿ) ಸಭಾಂಗಣದಲ್ಲಿ ಶುಕ್ರವಾರ ನಡೆದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ತೊಡಗಿಸುವುದು ಹೇಗೇ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದ ಅವರು, ಶಿಕ್ಷಕ ವೃತ್ತಿ ಬೇರೆ ವೃತ್ತಿಗಿಂತ ವಿಭಿನ್ನವಾಗಿದೆ, ಇಲ್ಲಿ ಹಣಕ್ಕಿಂತ ನೆಮ್ಮದಿ ಸಂತೋಷವನ್ನು ನೀಡುವಂತ ವೃತ್ತಿಯಾಗಿದೆ, ಇತ್ತೀಚಿನ ದಿನದಲ್ಲಿ ಶಿಕ್ಷಕ ವೃತ್ತಿಗೆ ಸರ್ಕಾರ ಬೌಂಡರಿಯನ್ನು ಹಾಕಿದೆ ಆದರೆ ಇದು ಅಗತ್ಯ ಇರಲಿಲ್ಲ ಎಂಬುದು ನಮ್ಮ ಭಾವನೆಯಾಗಿದೆ, ನಮ್ಮಲ್ಲಿ ಶೇ.5 ರಷ್ಟು ಶಿಕ್ಷಕರು ಕೆಟ್ಟವರಿರಬಹುದು ಆದರೆ ಶೇ,95 ರಷ್ಟು ಶಿಕ್ಷಕರಿಗೆ ಇದರಿಂದ ತೊಂದರೆಯಾಗಿದೆ, ಇಂದಿನ ದಿನಮಾನದಲ್ಲಿ ಶಿಕ್ಷಕರ ಸಮಯ ಭೋದನೆಗಿಂತ ಹೆಚ್ಚಿನ ಸಮಯ ವಿವಿಧ ರೀತಿಯ ಪೋಟೋಗಳನ್ನು ತೆಗೆಯುವುದರಲ್ಲಿಯೇ ಕಳೆಯಲಾ ಗುತ್ತದೆ ಎಂದರು.

ಶಿಕ್ಷಕರಾಗುವವರು ಬೇರೆಯವರ ಭಯಕ್ಕಿಂತ ತಮ್ಮ ಕಾಯಕದ ಮೇಲಿನ ಭಯ ಇರಬೇಕಿದೆ, ಒಂದು ಶಾಲೆಯ ಯಶಸ್ವಿಗೆ ಶಾಲೆಯ ಮಕ್ಕಳ ಫಲಿತಾಂಶಕ್ಕಿಂತ ಮಗುವಿನ ಕಲಿಕೆಯಲ್ಲಿನ ನೂನ್ಯತೆಯನ್ನು ಕಂಡು ಹಿಡಿದು ಅದನ್ನು ನಿವಾರಣೆ ಮಾಡುವುದರಲ್ಲಿ ಶಿಕ್ಷಕರಾದವರು ಮುಂದಾಗಬೇಕಿದೆ ಆಗ ಮಾತ್ರ ಶಾಲೆ ಯಶಸ್ವಿಯಾಗಲು ಸಾಧ್ಯವಿದೆ. ಒಂದು ಶಾಲೆಯಲ್ಲಿ ಶಿಕ್ಷಕರಾದವರು ನೂರಕ್ಕೂ ಹೆಚ್ಚು ದಾಖಲಾತಿಗಳನ್ನು ನಿರ್ವಹಣೆ ಮಾಡಬೇಕಾಗಿದೆ, ಶಿಕ್ಷಕರು ಹಿಂದಿನ ರೀತಿಯ ಭೋಧನೆಗಿಂತ ಈಗಿನ ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಭೋಧನೆಯನ್ನು ಮಾಡಬೇಕಿದೆ, ಇಂದಿನ ಮಕ್ಕಳು ಸಹಾ ಹೆಚ್ಚಿನ ಮಟ್ಟದಲ್ಲಿ ಬುದ್ದಿವಂತರಿದ್ದಾರೆ ಅವರ ಬುದ್ದಿಮಟ್ಟಕ್ಕೆ ತಕ್ಕಂತೆ ಭೋಧನೆಯನ್ನು ಮಾಡಬೇಕಿದೆ. ಹಣವನ್ನು ಮಾಡಬೇಕೆಂದರೆ ಈ ವೃತ್ತಿಗೆ ಬರಬೇಡಿ ಸೇವಾ ಮನೋಭಾವದಿಂದ ಮಾತ್ರ ಈ ಕೆಲಸಕ್ಕೆ ಬನ್ನಿ ಇದರಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿದ ಮುಖ್ಯೋಪಾಧ್ಯಾಯರು, ಕರ್ನಾಟಕ ವೈಚಾರಿಕ ಪರಿಷತ್‍ನ ಜಿಲ್ಲಾಧ್ಯಕ್ಷರಾದ ಡಾ.ಲೋಲಾಕ್ಷಮ್ಮ ಬಿ.ಟಿ. ಮಾತನಾಡಿ, ಶಿಕ್ಷಕ ವೃತ್ತಿ ಉತ್ತಮವಾದ ವೃತ್ತಿಯಾಗಿದೆ, ದೇಶದ ಭಾವಿ ಪ್ರಜೆಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಹೊತ್ತ ವ್ಯಕ್ತಿಗಳಾಗಿದ್ದಾರೆ. ಶಿಕ್ಷಕರಾದವರು ಉತ್ತಮವಾದ ಮೌಲ್ಯಗಳನ್ನು ಗುಣಗಳನ್ನು ಜೀವನದಲ್ಲಿ ರೂಪಿಸಿಕೊಳ್ಳಬೇಕಿದೆ. ನಂತರ ಇದನ್ನು ಮಕ್ಕಳಿಗೆ ತಿಳಿಸಬೇಕಿದೆ, ನಮಗೆ ಪ್ರಶಸ್ತಿಗಳು, ಪದವಿಗಳನ್ನು ನಾವು ಹುಡಿಕೊಂಡು ಹೋಗಬಾರದು ಅವುಗಳು ನಮ್ಮನ್ನು ಹುಡುಕಿಕೊಂಡು ಬರುವಂತಾಗಬೇಕಿದೆ, ಇಂದಿನ ದಿನಮಾನದಲ್ಲಿ ಪುಸ್ತಕಗಳು ಕಡಿಮೆಯಾಗಿ ಮೊಬೈಲ್ ಹಿಡಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ, 10 ರಿಂದ 4 ಗಂಟೆಯವರೆಗೆ ಮಾತ್ರ ಮಕ್ಕಳು ನಮ್ಮ ಬಳಿ ಇರುತ್ತಾರೆ ಇದಾದ ಮೇಲೆ ನಮ್ಮ ಕೈಯಲ್ಲಿ ಇರುವುದಿಲ್ಲ ಈ ಸಮಯದಲ್ಲಿ ಮಕ್ಕಳು ಪುಸ್ತಕಕ್ಕಿಂತ ಮೊಬೈಲ್ ಹಾವಳಿ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಶಿಕ್ಷಕರಾದವರು ಮಕ್ಕಳ ಮನಸ್ಸು ಗೆಲ್ಲುವಂತ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ, ಶಿಕ್ಷಕರಾದವರು ನಿಂತ ನೀರಾಗಾದೇ ಚಲಿಸುವ ನೀರಾದಾಗ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯವಿದೆ. ಶಿಕ್ಷಕರಾದವರು ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಆಳವಡಿಕೆ ಮಾಡಿಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಿದೆ. ಶಿಕ್ಷಕ ವೃತ್ತಿ ಜವಾಬ್ದಾರಿ ವೃತ್ತಿಯಾಗಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಿದೆ. ಇದರಿಂದ ವಿದ್ಯಾರ್ಥಿಗಳನ್ನು ಎತ್ತರಕ್ಕೆ ಕರೆದ್ಯೂತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವಿರೇಶ್ ವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಾಧ್ಯಯರಾದ ಟಿ.ಈಶ್ವರಪ್ಪ, ಪರಿಸರ ಮತ್ತು ವನ್ಯ ಜೀವಿ ಛಾಯಾಗ್ರಾಹಕರಾದ ಎಂ.ಕಾರ್ತಿಕ್ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಜಿ. ಹನುಮಂತರೆಡ್ಡಿ, ಕೆ.ಎಂ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುಳ ಉಪಸ್ಥಿತರಿದ್ದರು.

ರೇಖಾ ಪ್ರಾರ್ಥಿಸಿದರೆ, ದೀಪಾ ಸ್ವಾಗತಿಸಿದರೆ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಪ್ರೋ.ಎಂ.ಆರ್.ಜಯಲಕ್ಷ್ಮೀ ಪ್ರಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜನ ಗೌಡ ವಂದಿಸಿದರು, ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *