Onions benefits: ಈರುಳ್ಳಿ ತಿನ್ನುವುದರಿಂದ ಅನೇಕ ಆರೋಗ್ಯದ ಪ್ರಯೋಜನಗಳು ಲಭಿಸುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

Onions Protect You From The Heat: ಅನೇಕ ಜನರು ಹಸಿ ಈರುಳ್ಳಿ ಸೇವಿಸುತ್ತಾರೆ. ಬೇಸಿಗೆ ಸಮಯದಲ್ಲಿ ಹಸಿ ಈರುಳ್ಳಿ ಬಳಕೆ ಇನ್ನಷ್ಟು ಹೆಚ್ಚಾಗುತ್ತದೆ. ಈರುಳ್ಳಿಯನ್ನು ಹಲವು ವಿಧಗಳಲ್ಲಿ ಸೇವನೆ ಮಾಡಲಾಗುತ್ತದೆ. ರೈಸ್ ಬಾತ್ಗಳಲ್ಲಿ, ಕರಿಗಳಿಗೆ ಹಾಗೂ ಸಲಾಡ್‌ಗಳಲ್ಲಿ ಈರುಳ್ಳಿ ಸೇವಿಸುವುದರಿಂದ ದೇಹವನ್ನು ತಂಪಾಗಿಸುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಈರುಳ್ಳಿ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿಕೊಳ್ಳಲು ಅದ್ಭುತವಾದ ಕಾರ್ಯ ಮಾಡುತ್ತದೆ. ಹಸಿ ಈರುಳ್ಳಿ ಸೇವಿಸುವುದರಿಂದ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದನ್ನು ತಿಳಿಯೋಣ.
ಹಸಿ ಈರುಳ್ಳಿಯ ಲಾಭಗಳೇನು?:
ಹೈಡ್ರೇಟ್ ಆಗಿರಿಸುತ್ತೆ: ಹಸಿ ಈರುಳ್ಳಿಯಲ್ಲಿ ನೀರಿನ ಅಂಶ ಇರುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸುವುದರ ಜೊತೆಗೆ ತಂಪಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಬಹಳಷ್ಟು ನೀರು ಪ್ರಮಾಣ ಇರುವುದರಿಂದ ನಾವು ಇದನ್ನು ಸೇವಿಸಿದರೆ, ನಮ್ಮ ದೇಹವು ಹೈಡ್ರೇಟ್ ಆಗಿರಿಸುತ್ತದೆ. ದೇಹಕ್ಕೆ ಅತ್ಯಗತ್ಯವಾಗಿರುವ ಎಲೆಕ್ಟ್ರೋಲೈಟ್ಗೆ ಪೂರಕವಾಗಿರುವ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದು ದೇಹದಲ್ಲಿನ ದ್ರವವನ್ನು ನಿಯಂತ್ರಿಸಲು ಪೂರಕವಾಗಿ ಕೆಲಸ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಈರುಳ್ಳಿ ಸೇರಿಸುವುದರಿಂದ ನೀವು ಹೈಡ್ರೇಟೆಡ್ ಆಗಿರಲು ಸಾಧ್ಯವಾಗುತ್ತದೆ. ಬೆವರಿನಿಂದ ಕಳೆದುಹೋಗುವಂತಹ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಸಹಾಯವಾಗುತ್ತದೆ.

ತೂಕ ಇಳಿಕೆಗೆ ಸಹಾಯ: ಈರುಳ್ಳಿಯು ಸಾಮಾನ್ಯವಾಗಿ ಕಡಿಮೆ ಕ್ಯಾಲೊರಿ ಹೊಂದಿದ್ದು, ಹೆಚ್ಚಿನ ಫೈಬರ್ ಅಂಶವೂ ಇದರಲ್ಲಿ ಇದೆ. ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುವ ಅನುಭವವಾಗುತ್ತದೆ. ಇದರಿಂದ ಹೆಚ್ಚು ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದ ನಿಮ್ಮ ದೇಹದ ತೂಕವು ಬೇಗನೆ ಕಡಿಮೆಯಾಗುತ್ತದೆ. ಈರುಳ್ಳಿ ಸೇವನೆ ಮಾಡುವುದರಿಂದ ಕೂದಲು ಮತ್ತು ಚರ್ಮಕ್ಕೂ ಒಳ್ಳೆಯದು. ಹೆಚ್ಚಿದ ಶಾಖದಿಂದ ಉಂಟಾಗುವ ಮೊಡವೆಗಳು ಹಾಗೂ ಕಲೆಗಳನ್ನು ತಡೆಯುತ್ತದೆ. ಕೂದಲು ಉದುರುವಿಕೆಯನ್ನೂ ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ತಂಪಾಗಿಸುವ ಗುಣ: ಈರುಳ್ಳಿ ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ. ಈರುಳ್ಳಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅತಿಯಾದ ಶಾಖದಿಂದ ಪರಿಹಾರ ನೀಡುತ್ತದೆ. ಹಸಿ ಇಲ್ಲವೇ ಲಘುವಾಗಿ ಬೇಯಿಸಿದ ಈರುಳ್ಳಿ ಸೇವಿಸಿದರೆ, ಸಲ್ಫರ್ ಮತ್ತು ಕ್ವೆರ್ಸೆಟಿನ್‌ನಂತಹ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತವೆ. ಇವುಗಳಿಂದ ದೇಹದ ಉಷ್ಣತೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಈರುಳ್ಳಿಯನ್ನು ಸಲಾಡ್‌ಗಳು, ಸ್ಯಾಂಡ್‌ವಿಚ್‌ಗಳು ಹಾಗೂ ಕೋಲ್ಡ್ ಸೂಪ್‌ಗಳಲ್ಲಿ ಸೇರಿಸಬಹುದು. ಇದರಿಂದ ಬೇಸಿಗೆಯ ಶಾಖದಿಂದ ಪರಿಹಾರ ಕಂಡುಕೊಳ್ಳಬಹುದು.

ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ: ಬೇಸಿಗೆಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತವೆ. ವಾಕರಿಕೆ ಮತ್ತು ಹಸಿವಿನ ಕೊರತೆ ಸಾಮಾನ್ಯವಾಗಿ ಇರುತ್ತದೆ. ಈರುಳ್ಳಿ ಅಂತಹ ವಿಷಯಗಳಿಗೆ ನಿಯಂತ್ರಿಸಬಹುದು. ಇದರ ಆಹಾರದ ಫೈಬರ್, ಪ್ರಿಬಯಾಟಿಕ್‌ಗಳು ಮತ್ತು ಜೀರ್ಣಕಾರಿ ಕಿಣ್ವಗಳು ಜೀರ್ಣಾಂಗ ವ್ಯವಸ್ಥೆ ರಕ್ಷಿಸುತ್ತವೆ. ಜೊತೆಗೆ ಆರೋಗ್ಯಕರವಾಗಿರಿಸುತ್ತದೆ. ಫೈಬರ್ ಭರಿತ ಆಹಾರವಾದ ಈರುಳ್ಳಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ದೂರವಾಗಿಸುತ್ತದೆ. ಕರುಳಿನ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಜೊತೆಗೆ ಬೇಸಿಗೆಯಲ್ಲಿ ಸೋಂಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉತ್ಕರ್ಷಣ ನಿರೋಧಕ ಗುಣ: ದೇಹದಲ್ಲಿ ಉಷ್ಣತೆ ಹೆಚ್ಚಾದರೆ, ಆಕ್ಸಿಡೇಟಿವ್ ಒತ್ತಡ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಇದು ಜೀವಕೋಶಗಳಿಗೆ ಹಾನಿ ಹಾಗೂ ಉರಿಯೂತ ಹೆಚ್ಚಿಸುತ್ತದೆ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಫ್ಲೇವನಾಯ್ಡ್‌ಗಳು, ಫೀನಾಲಿಕ್ ಸಂಯುಕ್ತಗಳು ಹಾಗೂ ಜೀವಸತ್ವಗಳು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ನಿಯಮಿತವಾಗಿ ಈರುಳ್ಳಿ ಸೇವಿಸಿದರೆ ಬೇಸಿಗೆಯ ಶಾಖದಿಂದ ರಕ್ಷಿಸಿಕೊಳ್ಳಬಹುದು. ಜೊತೆಗೆ ಸನ್ ಸ್ಟ್ರೋಕ್ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಆದ್ರೆ, ಹೆಚ್ಚು ತಿನ್ನಬಾರದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಈರುಳ್ಳಿಯನ್ನು ಮಿತವಾಗಿ ಸೇವಿಸಿದರೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ETV Bharath
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1