ಮೂಗುತಿ ನುಂಗಿದ ಯುವತಿ! ವೈದ್ಯರಿಂದ ಬಯಲಾಯ್ತು ಭಯಾನಕ ಸಂಗತಿ, ಇದು ನಂಗೆ ಗೊತ್ತೇ ಇಲ್ಲ ಅಂತಾಳೆ ಈಕೆ.

ಕಿರಿಯ ವಯಸ್ಕರು ಆಟ ಆಡುವಾಗ ತಿಳಿಯದೆ ಏನಾದರೂ ಎಡವಟ್ಟು ಮಾಡಿಕೊಳ್ಳುವುದು, ನಾಣ್ಯ ಅಥವಾ ಇತರೆ ವಸ್ತುಗಳನ್ನು ನುಂಗಿ ಜೀವಕ್ಕೆ ತೊಂದರೆ ತಂದುಕೊಂಡ ಅದೆಷ್ಟೋ ಘಟನೆಗಳನ್ನು ನೋಡಿದ್ದೇವೆ. ಇಂತಹ ಅನೇಕ ಘಟನೆಗಳ ನಿದರ್ಶನಗಳು ಇಂದು ನಮ್ಮ ಕಣ್ಣಮುಂದಿವೆ. ಆದರೆ, ದೊಡ್ಡವರು ಗೊತ್ತಿಲ್ಲದೆಯೂ ಈ ರೀತಿಯ ತಪ್ಪುಗಳಿಗೆ ಸಿಲುಕಲ್ಲ.ಕಾರಣ, ಅವರು ಹೆಚ್ಚು ಜವಾಬ್ದಾರಿಯಿಂದ ಇರುತ್ತಾರೆ ಎಂಬುದು. ಆದರೆ, ಇಲ್ಲಿ ಅದೇ ಉಲ್ಟಾ ಹೊಡೆದಿದೆ.

ಇಲ್ಲೊಬ್ಬರು ಮಹಿಳೆ ತಾವು 16-17 ವರ್ಷಗಳ ಹಿಂದೆ ಮದುವೆಯಾದಾಗ ಧರಿಸಿದ್ದ ಮೂಗುತಿಯ ಪಿನ್​ ಸ್ಕ್ರೂವನ್ನು ಲೂಸ್​ ಆಗಿರಬಹುದು ಎಂದು ಭಾವಿಸಿ, ಅದನ್ನು ಬದಲಾಯಿಸಲು ಹಿಂದೆ-ಮುಂದೆ ತಿರುಗಿಸಿದ್ದಾಳೆ. ಈ ವೇಳೆ ಆಕೆಯ ಅರಿವಿಗೆ ಬಾರದಂತೆ ಪಿನ್ ಕೈಯಿಂದ ಜಾರಿ, ನೇರವಾಗಿ ಆಕೆಯ ಶ್ವಾಸನಾಳದೊಳಗೆ ಸಿಲುಕಿಕೊಂಡಿದ್ದು, ಬಳಿಕ ಹೊರಬಂದಿಲ್ಲ. ಆದರೆ ಇದ್ಯಾವುದು ಆಕೆಗೆ ಆ ಕ್ಷಣಕ್ಕೂ ಗೊತ್ತಾಗಿಲ್ಲ. ಅದಾಗಿ ಕೆಲವು ದಿನಗಳಾದರೂ ತಿಳಿದುಬಂದಿಲ್ಲ.

ಮಹಿಳೆಯನ್ನು ಸಾಹು ಎಂದು ಹೇಳಲಾಗಿದ್ದು, ‘ಸ್ಕ್ರೂ ಲೂಸ್ ಆಗಿರಬಹುದು ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಅದನ್ನು ಸರಿಪಡಿಸಿಕೊಳ್ಳುವಾಗ ದೀರ್ಘವಾಗಿ ಉಸಿರು ಎಳೆದುಕೊಂಡೆ, ತಕ್ಷಣವೇ ಪಿನ್ ಶ್ವಾಸನಾಳದಲ್ಲಿ ಸಿಲುಕಿ, ಅಲ್ಲೇ ಉಳಿದುಕೊಂಡಿದೆ. ಇದಾದ ಕೆಲವು ದಿನಗಳ ನಂತರ ನನಗೆ ಉಸಿರಾಟದ ತೊಂದರೆ, ಕೆಮ್ಮು ಮತ್ತು ನ್ಯುಮೋನಿಯಾ ಲಕ್ಷಣಗಳು ಕಾಡತೊಡಗಿತು. ಆಗ ಈ ಬಗ್ಗೆ ವೈದ್ಯರ ಬಳಿ ದೂರು ನೀಡಿದೆ’ ಎಂದಿದ್ದಾರೆ.

‘ಮಾರ್ಚ್‌ನಲ್ಲಿ ವೈದ್ಯರನ್ನು ಭೇಟಿ ಮಾಡಿದಾಗ ಈ ಶಾಕಿಂಗ್ ಸಂಗತಿ ಬೆಳಕಿಗೆ ಬಂದಿತು. ಆಗ ನಿಜಕ್ಕೂ ನನಗೆ ನಂಬಲು ಅಸಾಧ್ಯವಾಯಿತು. ಈ ಹಿಂದೆ ಮೂಗುತಿ ಹಿಂದೆ ಆದ ಗಾಯದಿಂದ ಈ ರೋಗಲಕ್ಷಣಗಳಿಗೆ ಕಾರಣವಿರಬಹುದು ಎಂದು ನಾನು ಭಾವಿಸಿದ್ದೆ’ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಸಿಟಿ ಸ್ಕ್ಯಾನ್​ನಲ್ಲಿ ಆಕೆಯ ಶ್ವಾಸಕೋಶದಲ್ಲಿ ಸ್ಕ್ರೂ ಇರುವುದು ಪತ್ತೆಯಾಗಿದೆ. ಇದನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದ ವೈದ್ಯರು, ಈ ಪ್ರಕರಣ ಅತ್ಯಂತ ಅಪರೂಪ ಎಂದು ಹೇಳಿದ್ದಾರೆ,(ಏಜೆನ್ಸೀಸ್).

Source: https://m.dailyhunt.in/news/india/kannada/vijayvani-epaper-vijaykan/muguti+nungidha+yuvati+vaidyarindha+bayalaaytu+bhayaanaka+sangati+idu+nange+gotte+illa+antaale+eeke-newsid-n603544108?listname=topicsList&topic=for%20you&index=7&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *