ಅಖಂಡ ಭಾರತ ಸಂಕಲ್ಪ ದಿವಸ: ಯುವ ಪೀಳಿಗೆಗೆ ನೈಜ ಇತಿಹಾಸ ತಲುಪಿಸಲು ಹಿಂದೂ ಜಾಗರಣ ವೇದಿಕೆ ಕರೆ.

ಚಿತ್ರದುರ್ಗ ಆ. 14

ಪೋಟೋ ಮತ್ತು ಸುರೇಶ್ ಪಟ್ಟಣ್

ದೇಶದ ಸಾರ್ವಭೌಮತ್ವ, ಅಖಂಡತೆ ಹಾಗೂ ಸಶಕ್ತ ಭಾರತದ ನಿರ್ಮಾಣಕ್ಕಾಗಿ ಯುವಪೀಳಿಗೆಯು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಅಖಂಡ ಭಾರತದ ಕಲ್ಪನೆಯನ್ನು ನನಸು ಮಾಡುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕರಾಧ ಸತೀಶ್ ಪೂಜಾರ್ ತಿಳಿಸಿದರು. 

ಹಿಂದೂ ಜಾಗರಣಾ ವೇದಿಕೆಯವತಿಯಿಂದ ನಗರದ ಆನೆಬಾಗಿಲ ಬಳಿಯಲ್ಲಿನ ಆವರಣದಲ್ಲಿ ಗುರುವಾರ ಸಂಜೆ ನಡೆದ ಅಖಂಡ ಭಾರತ ಸಂಕಲ್ಪ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಆಗಸ್ಟ್ 1 ರಿಂದ 31ರವರೆಗೆ ಹಿಂದೂ ಜಾಗರಣ ವೇದಿಕೆಯು `ತಾಯಿ ಭಾರತೀಯ ಹೆಸರು’ ಕಾರ್ಯಕ್ರಮದಡಿ ಭಾರತ್ ಮಾತಾ ಪೂಜೆ ಹಾಗೂ `ಅಖಂಡ ಭಾರತ ಸಂಕಲ್ಪ ದಿವಸ’ವನ್ನು ಆಚರಿಸುತ್ತಿದ್ದು, ದೇಶದ ನೈಜ ಇತಿಹಾಸ ಮತ್ತು ಕ್ರಾಂತಿಕಾರಿಗಳ ತ್ಯಾಗವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ಇದರ ಮೂಲ ಉದ್ದೇಶವಾಗಿದೆ. ಆರೆಸ್ಸೆಸ್ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಜಾಗರಣ ವೇದಿಕೆಯು ದೇಶದ ರಕ್ಷಣೆ ಹಾಗೂ ನೈಜ ಇತಿಹಾಸದ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದೆ. ಅಶೋಕ ಚಕ್ರವರ್ತಿ ಹಾಗೂ ಮೌರ್ಯ ಸಾಮ್ರಾಜ್ಯದ ಅವಧಿಯಲ್ಲಿ ಹಿಮಾಲಯದಿಂದ ಸಮುದ್ರದವರೆಗೆ ವಿಸ್ತರಿಸಿದ್ದ ವಿಶಾಲ ಭಾರತದ ಭೂಭಾಗವು, ಕಾಲಕ್ರಮೇಣ ನಾಯಕರ ಅಪಕಲ್ಪನೆ ಹಾಗೂ ತುಷ್ಟೀಕರಣದ ರಾಜಕಾರಣದಿಂದಾಗಿ ವಿಭಜನೆಗೊಂಡು ಸಣ್ಣದಾಗುತ್ತಾ ಬಂದಿದೆ ಎಂದು ವಿಷಾದಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಸುಮಾರು  ಆರು ಲಕ್ಷ  ಜನರು ತಮ್ಮ ಜೀವವನ್ನು ಬಲಿ ಕೊಟ್ಟಿದ್ದಾರೆ. ಯುವಜನರಲ್ಲಿ ದೇಶಭಕ್ತಿ ಹಾಗೂ ಧರ್ಮನಷ್ಠೆಯ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಇಂತಹ ಹೋರಾಟಗಳ ಅರಿವು ಕಡಿಮೆಯಾಗುತ್ತಿದೆ. ಆದ್ದರಿಂದ, ಈ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಹಾಗೂ ಮುಂಬರುವ ದಿನಗಳಲ್ಲಿ ಭಾರತವನ್ನು ಮರಳಿ ‘ಅಖಂಡ ಭಾರತ’ವನ್ನಾಗಿ ನಿರ್ಮಿಸಲು ಇಂದಿನ ಯುವ ಪೀಳಿಗೆ ಕಂಕಣಬದ್ಧರಾಗಬೇಕು ಭವಿಷ್ಯದಲ್ಲಿ ನಮ್ಮ ಪೂರ್ವಜರ ಕನಸಾದ ಅಖಂಡ ಭಾರತದ ಕಲ್ಪನೆ ನನಸಾಗಲಿದೆ ಈ ಐತಿಹಾಸಿಕ ಮತ್ತು ನೈಜ ಇತಿಹಾಸವನ್ನು ಮುಂಬರುವ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಸಶಕ್ತ ಹಾಗೂ ಸದೃಢ ಭಾರತವನ್ನು ಕಟ್ಟಲು ಯುವಪೀಳಿಗೆಯು ಯಾವುದೇ ರೀತಿಯ ಮಾದಕ ವ್ಯಸನಗಳಿಂದ ದೂರವಿರಬೇಕು ರಾಜ್ಯವನ್ನು ನಶಾಮುಕ್ತ ಗೊಳಿಸುವ ನಿಟ್ಟಿನಲ್ಲಿ ಗಾಂಜಾ, ಅಫೀಮು ಹಾಗೂ ಡ್ರಗ್ಸ್‍ನಂತಹ ಮಾದಕ ಜಾಲಗಳ ಕುರಿತು ಸುಳಿವು ಸಿಕ್ಕ ತಕ್ಷಣವೇ ಪೊಲೀಸ್ ಅಥವಾ ಗುಪ್ತಚರ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸುಭಾಷ್ ಚಂದ್ರ ಬೋಸ್ ಹಾಗೂ ಸ್ವಾಮಿ ವಿವೇಕಾನಂದರ ತತ್ವಗಳನ್ನು ಉದಾಹರಿಸಿದ ಅವರು, ಜಾತಿ, ಪಕ್ಷ, ಪ್ರಾಂತ ಹಾಗೂ ಭಾಷಾ ಭೇದಗಳನ್ನು ಮರೆತು ‘ನಾವೆಲ್ಲರೂ ಒಂದು’ ಎಂಬ ಭಾವನೆಯಿಂದ ತಾಯಿ ಭಾರತಿಯ ಸೇವೆಗೆ ಸಿದ್ಧರಾಗಬೇಕು ಹಿಂದೂ ಜಾಗರಣ ವೇದಿಕೆಯು ಎಂದಿಗೂ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ದೇಶಪ್ರೇಮಿಗಳಾದ ಪ್ರತಿಯೊಬ್ಬ ನಾಗರಿಕರೂ ನಮ್ಮ ಬಂಧುಗಳೇ ಆಗಿದ್ದಾರೆ. ಸಲೀಂ ಅಲಿ, ಅಶ್ಫಾಖುಲ್ಲಾ ಖಾನ್, ಸಂತ ಶಿಶುನಾಳ ಶರೀಫ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ಅವರಂತಹ ಮಹನೀಯರನ್ನು ದೇಶ ಗೌರವಿಸುತ್ತದೆ ರಾಷ್ಟ್ರದ್ರೋಹವನ್ನು ಸಹಿಸುವುದಿಲ್ಲ ಹಾಗೂ ರಾಷ್ಟ್ರಪ್ರೇಮವನ್ನು ಎತ್ತಿಹಿಡಿಯುವುದೇ ಮುಖ್ಯ ಗುರಿ ಎಂದು ತಿಳಿಸಿದರು. 

ಭಾರತದ ಜಾಗತಿಕ ಪ್ರಭಾವ ಹಾಗೂ ಪ್ರಸ್ತುತ ವಿದೇಶಾಂಗ ಸ್ಥಿತಿಗತಿಗಳ ಕುರಿತು ಪ್ರಸ್ತಾಪಿಸಿದರು. ಬಲೂಚಿಸ್ತಾನದ ವಿಷಯ, ವಿಶ್ವ ಯೋಗ ದಿನಾಚರಣೆಗೆ ಜಾಗತಿಕ ಮಟ್ಟದಲ್ಲಿ ದೊರೆತ ಬೆಂಬಲ ಹಾಗೂ ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದ ನಿರ್ಧಾರಗಳನ್ನು ಉಲ್ಲೇಖಿಸಿದ ಅವರು, ಇವೆಲ್ಲವೂ ಭಾರತದ ಬಲ ಮತ್ತು ಜಾಗತಿಕ ಮಟ್ಟದಲ್ಲಿ ದೇಶಕ್ಕಿರುವ ಗೌರವಕ್ಕೆ ಸಾಕ್ಷಿಯಾಗಿದೆ ನೆರೆಹೊರೆಯ ದೇಶಗಳಾದ ನೇಪಾಳ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನಗಳೊಂದಿಗೆ ಭಾರತ ಹೊಂದಿರುವ ಸಾಂಸ್ಕೃತಿಕ ಹಾಗೂ ಹಿತಕರ ಬಾಂಧವ್ಯವನ್ನು ಸ್ಮರಿಸಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ರಾಜ್‍ಗುರು, ಅಂಬೇಡ್ಕರ್, ಮದಕರಿ ನಾಯಕ, ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದ ವೀರರ ಹೆಸರಿನಲ್ಲಿ ಜೈಕಾರಗಳನ್ನು ಕೂಗುವ ಮೂಲಕ, ಸಶಕ್ತ ಹಾಗೂ ಅಖಂಡ ಭಾರತ ನಿರ್ಮಾಣದ ಸಂಕಲ್ಪವನ್ನು ಪ್ರಕಟಿಸಲಾಯಿತು.

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ರಕ್ತಸಿಕ್ತ ಮಣ್ಣನ್ನು ಪೂಜಿಸಿ ದೇಶಸೇವೆಗೆ ತೊಡಗಿದ ಭಗತ್ ಸಿಂಗ್, 14ನೇ ವಯಸ್ಸಿನಲ್ಲಿ ಬ್ರಿಟಿಷರಿಗೆ ಸಿಗುವುದಿಲ್ಲವೆಂದು ಶಪಥ ಮಾಡಿ ಕೊನೆಗೆ ತಮಗೆ ತಾವೇ ಗುಂಡು ಹಾರಿಸಿಕೊಂಡು ಹುತಾತ್ಮರಾದ ಚಂದ್ರಶೇಖರ್ ಆಜಾದ್, ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಹೋರಾಟದ ನೈಜ ಇತಿಹಾಸವನ್ನು ಇಂದಿನ ಶಾಲಾ ಪಠ್ಯಪುಸ್ತಕಗಳಲ್ಲಿ ಸರಿಯಾಗಿ ಪ್ರಕಟಿಸುತ್ತಿಲ್ಲ ಎಂದು ಆರೋಪಿಸಿದರು. ಜೊತೆಗೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತ್ಯಾಗ ಮಾಡಿದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಖುಲ್ಲಾ ಖಾನ್ ಹಾಗೂ ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರಂತಹ ಎಲ್ಲ ಧರ್ಮೀಯ ಕ್ರಾಂತಿಕಾರಿಗಳ ತ್ಯಾಗವನ್ನು ಸ್ಮರಿಸುವುದು ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಹನುಮಂತಪ್ಪ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜ ಕರಾದ ರುದ್ರೇಶ್ ಭಾಗÀವಹಿಸಿದ್ದರು. ಭರತ ರಾಕಯ್ಕರ್ ವಂದೇ ಮಾತರಂ ಹಾಡಿದರೆ, ಕಿರಣ ಸ್ವಾಗತಿಸಿದರೆ ಸಂಜಯ್ ಜಾಲಿಕಟ್ಟೆ ಸಂಕಲ್ಪವನ್ನು ಭೋಧಿಸಿದರು, ಸೃತಿ ರಾಮಕರಣ ವಯ್ಯುತ್ತಿಕ ಗೀತೆಯ ಗಾಯನ ಮಾಡಿದರು.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *