ವಿಷ ಹಾಕಿರಬಹುದು ಎಂಬ ಭಯಕ್ಕೆ ಪೊಲೀಸರು ನೀಡಿದ ಚಹಾ ನಿರಾಕರಿಸಿದ ಅಖಿಲೇಶ್ ಯಾದವ್..!

ಲಕ್ನೋ: ಉತ್ತರ ಪ್ರದೇಶದ ಪೊಲೀಸ್ ಪ್ರಧಾನ ಕಚೇರಿಗೆ ಇಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭೇಟಿ ನೀಡಿದ್ದರು. ಈ ವೇಳೆ ಪೊಲೀಸರು, ಅಖಿಲೇಶ್ ಯಾದವ್ ಅವರಿಗೆ ಚಹಾ ನೀಡಲು ಹೋಗಿದ್ದಾರೆ. ಆದರೆ ಆ ಚಹಾವನ್ನು ಅಖಿಲೇಶ್ ಯಾದವ್ ನಿರಾಕರಿಸಿದ್ದಾರೆ. ನೀವಿದರಲ್ಲಿ ವಿಷ ಬೆರೆಸಿದ್ದರೆ ಎಂಬ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.

ಅಖಿಲೇಶ್ ಯಾದವ್ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ, ನಾನು ಇಲ್ಲಿ ಚಹಾ ಕುಡಿಯುವುದಿಲ್ಲ. ನಾವೂ ಹೊರಗಿನಿಂದ ಚಹಾ ತರಿಸಿಕೊಂಡು ಕುಡಿಯುತ್ತೇವೆ. ಬೇಕೆಂದರೆ ನಿಮ್ಮ ಬಳಿ ಕಪ್ ತೆಗೆದುಕೊಳ್ಳುತ್ತೇನೆ. ನೀವೂ ನನಗೆ ವಿಷ ಕೊಟ್ಟರೆ ಏನು ಮಾಡುವುದು..? ಎಂದು ಪೊಲೀಸರು ನೀಡಿದ ಚಹಾವನ್ನು ನಿರಾಕರಿಸಿದ್ದಾರೆ.

ನನಗೆ ನಿಮ್ಮ ಬಗ್ಗೆ ನಂಬಿಕೆ ಇಲ್ಲ ಎಂದಿದ್ದಾರೆ. ಅವರ ಪಕ್ಷದ ಸಾಮಾಜಿಕ ಜಾಲತಾಣದ ನಿರ್ವಾಹಕ ಅಗರ್ವಾಲ್ ಅವರನ್ನು ಪೊಲೀಸರು ಬಂಧಿಸಿದ್ದರು. ಆ ಬಗ್ಗೆ ವಿಚಾರಿಸಲು ಹಜರ್ ಗಂಜ್ ಪೊಲೀಸ್ ಠಾಣೆಗೆ ಅಖಿಲೇಶ್ ಯಾದವ್ ಭೇಟಿ ನಿಡೀದ್ದರು. ಆ ವೇಳೆ ಈ ಘಟನೆ ನಡೆದಿದೆ.

The post ವಿಷ ಹಾಕಿರಬಹುದು ಎಂಬ ಭಯಕ್ಕೆ ಪೊಲೀಸರು ನೀಡಿದ ಚಹಾ ನಿರಾಕರಿಸಿದ ಅಖಿಲೇಶ್ ಯಾದವ್..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/VQCp1Rt
via IFTTT

Leave a Reply

Your email address will not be published. Required fields are marked *