Asia Cup 2023: ಹೈಬ್ರಿಡ್ ಟೂರ್ನಿ: 2 ದೇಶಗಳಲ್ಲಿ ನಡೆಯಲಿದೆ ಏಷ್ಯಾಕಪ್

Asia Cup 2023:  ಈ ಬಾರಿಯ ಏಷ್ಯಾಕಪ್​ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅನುಮೋದಿಸಿದೆ. ಅಂದರೆ ಏಷ್ಯಾಕಪ್ 2023 ನಿಗದಿಯಂತೆ ಪಾಕಿಸ್ತಾನದಲ್ಲೇ ನಡೆಯಲಿದ್ದು, ಇದಾಗ್ಯೂ ಭಾರತದ ಮ್ಯಾಚ್​ಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ.ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯಗಳಿಗೆ ಉಳಿದ ತಂಡಗಳು ಶ್ರೀಲಂಕಾಗೆ ಆಗಮಿಸಲಿದೆ. ಹಾಗೆಯೇ ಭಾರತ ತಂಡ ಫೈನಲ್​ ಪ್ರವೇಶಿಸಿದರೆ, ಅಂತಿಮ ಹಣಾಹಣಿ ಕೂಡ ಲಂಕಾದಲ್ಲೇ ನಡೆಯಲಿದೆ. ಇನ್ನುಳಿದ ಪಂದ್ಯಗಳು ಪಾಕಿಸ್ತಾನದಲ್ಲೇ ಜರುಗಲಿದೆ.ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ ಹೊಂದಿದ್ದು, ಇದಾಗ್ಯೂ ಪಾಕ್​ನಲ್ಲಿ ಟೂರ್ನಿ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಪಿಸಿಬಿ ಮುಂದಾಗಿದೆ.ಅದರಂತೆ ಇದೀಗ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ 2023 ನಡೆಯುವುದು ಖಚಿತವಾಗಿದೆ. ಇನ್ನು ಟೂರ್ನಿ ಆಯೋಜನೆಗೆ ಸೆಪ್ಟೆಂಬರ್ 1 ರಿಂದ 17 ರವರೆಗೆ ದಿನಾಂಕವನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.ಇನ್ನು ಈ ಬಾರಿ ಕೂಡ ಭಾರತ-ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್​ನಲ್ಲಿದೆ. ಹೀಗಾಗಿ ಶ್ರೀಲಂಕಾದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಯನ್ನು ಎದುರು ನೋಡಬಹುದು. ಹಾಗೆಯೇ ಇದೇ ಗ್ರೂಪ್​ಗೆ ನೇಪಾಳ ತಂಡ ಕೂಡ ಎಂಟ್ರಿ ಕೊಟ್ಟಿದೆ. ಅಂದರೆ ಇದೇ ಮೊದಲ ಬಾರಿಗೆ ನೇಪಾಳ ತಂಡಕ್ಕೆ ಏಷ್ಯಾದ ಬಲಿಷ್ಠ ಎರಡು ದೇಶಗಳ ವಿರುದ್ಧ ಆಡುವ ಅವಕಾಶ ದೊರೆಯುತ್ತಿದೆ. ಅದರಂತೆ ಈ ಬಾರಿ ಏಷ್ಯಾಕಪ್ ಆಡಲಿರುವ 6 ತಂಡಗಳು ಈ ಕೆಳಗಿನಂತಿವೆ.ಪಾಕಿಸ್ತಾನ್ (ಗ್ರೂಪ್-A) ಭಾರತ (ಗ್ರೂಪ್-A)ನೇಪಾಳ (ಗ್ರೂಪ್-A)ಶ್ರೀಲಂಕಾ (ಗ್ರೂಪ್-B)ಬಾಂಗ್ಲಾದೇಶ್ (ಗ್ರೂಪ್-B)ಅಫ್ಘಾನಿಸ್ತಾನ್ (ಗ್ರೂಪ್-B)

source https://tv9kannada.com/photo-gallery/cricket-photos/asia-cup-2023-asia-cup-set-to-be-played-in-pakistan-and-sri-lanka-kannada-news-zp-598853.html

Leave a Reply

Your email address will not be published. Required fields are marked *