
ಇಂದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ಕೊನೆಯ ದಿನವಾಗಿದ್ದು, ಈ ಬಾರಿಯ ಟೆಸ್ಟ್ ವಿಶ್ವಕಪ್ ವಿಜೇತರು ಯಾರು ಎಂಬುದು ಇಂದು ತಿಳಿಯಲಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಆಸ್ಟ್ರೇಲಿಯಾವೇ ಮೇಲುಗೈ ಸಾಧಿಸಿದಂತಿದೆ. ಭಾರತ ಗೆಲ್ಲಲು 280 ರನ್ ಬಾರಿಸಬೇಕಿದೆ. ಆದರೆ ಟೀಂ ಇಂಡಿಯಾ ಸುಲಭವಾಗಿ ಸೋಲೊಪ್ಪಿಕೊಳ್ಳುತ್ತಿಲ್ಲ. ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರೂ ತಂಡವನ್ನು ಗೆಲ್ಲಿಸಲು ಇನ್ನಿಲ್ಲದ ಕಸರತ್ತು ನಡೆಸಲಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಐದನೇ ದಿನದ ಆಟ ರೋಚಕವಾಗುವ ನಿರೀಕ್ಷೆಯಿದೆ.