ಪದವೀಧರ ಯುವಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಉತ್ತಮ ಅವಕಾಶ
ಬ್ಯಾಂಕ್ ಆಫ್ ಇಂಡಿಯಾ (BOI) ದೇಶಾದ್ಯಂತ 400 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಡಿಸೆಂಬರ್ 25ರಿಂದ ಆರಂಭವಾಗಿದ್ದು, ಜನವರಿ 10 ಕೊನೆಯ ದಿನಾಂಕವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಕನಸು ಕಾಣುತ್ತಿರುವ ಪದವೀಧರ ಯುವಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು. ಅಭ್ಯರ್ಥಿಗಳು 01.04.2021 ರಿಂದ 01.12.2025ರ ನಡುವೆ ಪದವಿ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳ ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ
- ಸಾಮಾನ್ಯ ವರ್ಗ: ₹800 + GST
- SC / ST / ಎಲ್ಲಾ ಮಹಿಳಾ ಅಭ್ಯರ್ಥಿಗಳು: ₹600 + GST
- ಅಂಗವಿಕಲ ಅಭ್ಯರ್ಥಿಗಳು: ₹400 + GST
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆಯಲ್ಲಿ:
- 100 ಪ್ರಶ್ನೆಗಳು
- ಒಟ್ಟು 100 ಅಂಕ
- ಪರೀಕ್ಷಾ ಅವಧಿ: 90 ನಿಮಿಷಗಳು
ಅರ್ಜಿ ಸಲ್ಲಿಸುವ ವಿಧಾನ
- bankofindia.bank.in ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- “Careers” ವಿಭಾಗಕ್ಕೆ ಹೋಗಿ
- ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯನ್ನು ತೆರೆಯಿರಿ
- ಸೂಚನೆಗಳನ್ನು ಓದಿ ಆನ್‌ಲೈನ್ ಅರ್ಜಿ ಸಲ್ಲಿಸಿ
- ಅರ್ಜಿ ಶುಲ್ಕ ಪಾವತಿಸಿ ಸಲ್ಲಿಕೆಯನ್ನು ಪೂರ್ಣಗೊಳಿಸಿ
BOI ಅಪ್ರೆಂಟಿಸ್ ಹುದ್ದೆಯ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸೂಚನೆ
ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಕಡ್ಡಾಯ. ತಪ್ಪು ಮಾಹಿತಿಯಿದ್ದಲ್ಲಿ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.
Views: 35