General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ.
- ಭಾರತದಲ್ಲಿ “Green Credit Programme” ಯ ಉದ್ದೇಶವೇನು?
ಉತ್ತರ: ಪರಿಸರ ಸಂರಕ್ಷಣೆಗೆ ಉತ್ತೇಜನ
2. RBI ಯಲ್ಲಿ “Standing Deposit Facility (SDF)” ಯ ಅರ್ಥವೇನು?
ಉತ್ತರ: ಬ್ಯಾಂಕುಗಳಿಂದ ಹೆಚ್ಚುವರಿ ಹಣ ಸ್ವೀಕರಿಸುವ ವ್ಯವಸ್ಥೆ
3. G7 ರಾಷ್ಟ್ರಗಳಲ್ಲಿ ಭಾರತಕ್ಕೆ ಇರುವ ಸ್ಥಾನಮಾನ ಏನು?
ಉತ್ತರ: ಆಹ್ವಾನಿತ ಅತಿಥಿ ರಾಷ್ಟ್ರ
4. ಕರ್ನಾಟಕದಲ್ಲಿ ಪ್ರಥಮ ಶಾಸನ ಸಭೆ ಯಾವ ವರ್ಷದಲ್ಲಿ ಸ್ಥಾಪನೆಯಾಯಿತು?
ಉತ್ತರ: 1957
5. ರಾಜ್ಯದ ಅತಿ ದೊಡ್ಡ ಮ್ಯಾಂಗ್ರೂವ್ ಅರಣ್ಯ ಯಾವ ಜಿಲ್ಲೆಯಲ್ಲಿದೆ?
ಉತ್ತರ: ಉತ್ತರ ಕನ್ನಡ
6. “ಮೈಸೂರು ದಸರಾ” ಉತ್ಸವಕ್ಕೆ ರಾಜಕೀಯ ಸ್ವರೂಪ ನೀಡಿದ ರಾಜ ಯಾರು?
ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ್
7. ರಾಷ್ಟ್ರಪತಿ ಆದೇಶಗಳ ಮೂಲಕ ಜಾರಿಗೆ ಬರುವ ಕಾನೂನುಗಳಿಗೆ ಯಾವ ಹೆಸರು?
ಉತ್ತರ: ಆರ್ಡಿನೆನ್ಸ್‌ಗಳು
8. ರಾಜ್ಯಸಭೆಯ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣಾ ವಿಧಾನ ಯಾವುದು?
ಉತ್ತರ: ಅನುಪಾತಾತ್ಮಕ ಪ್ರತಿನಿಧಿತ್ವ ಪದ್ಧತಿ
9. ಸಂವಿಧಾನದ ಯಾವ ವಿಧಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆಯನ್ನು ನಿರ್ದಿಷ್ಟಪಡಿಸುತ್ತದೆ?
ಉತ್ತರ: ವಿಧಿ 270
10. ಭಾರತ ಅಭಿವೃದ್ಧಿಪಡಿಸುತ್ತಿರುವ “Small Modular Reactors (SMR)” ಗಳ ಪ್ರಮುಖ ಪ್ರಯೋಜನವೇನು?
ಉತ್ತರ: ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಅಣುಶಕ್ತಿ ಉತ್ಪಾದನೆ