
ಕೇರಳ: ದೇವರನಾಡು ಕೇರಳದಲ್ಲಿ ಕೊರೋನಾ ಮಹಾ ಮಾರಿ ಮತ್ತೆ ಆರ್ಭಟಿಸುತ್ತಿದೆ. ಒಮಿಕ್ರಾನ್ ಬಳಿಕ ಹೊಸ ತಳಿಯ ಭೀತಿ ಶುರುವಾಗಿದ್ದು, ಇದೀಗ ಕೇರಳದ ಕಣ್ಣೂರಿನಲ್ಲಿ ಕೊರೋನಾಗೆ ವೃದ್ಧ ಬಲಿಯಾಗಿದ್ದಾರೆ. ಈ ಮೂಲಕ ದೇಶಾಧ್ಯಂತ ಕೋವಿಡ್ ಹೆಚ್ಚಳದ ಆತಂಕ ಸೃಷ್ಠಿಸಿದೆ.
ಕೇರಳದ ಕಣ್ಣೂರಿನಲ್ಲಿ ಕೋವಿಡ್ ಸೋಂಕಿನಿಂದಾಗಿ 80 ವರ್ಷದ ವೃದ್ಧನೊಬ್ಬ ಸಾವನ್ನಪ್ಪಿದ್ದಾರೆ.
ಹೀಗಾಗಿ ಕಣ್ಣೂರಿನಲ್ಲಿ ಕೆಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಕೋವಿಡ್ ತಡೆಗಟ್ಟೋ ಸಂಬಂಧ ಮಾಸ್ಕ್ ಅನ್ನು ಕಡ್ಡಾಯಗೊಳಿಸಲಾಗಿದೆ.
ಕೇರಳದ ಕಣ್ಣೂರಿನಲ್ಲಿ 80 ವರ್ಷದ ವೃದ್ಧ ಸಾವಿನ ಬೆನ್ನಲ್ಲೇ, ಕೊರೋನಾ ಉಪ ತಳಿ ಜೆಎನ್.1 ಗೆ ಬಲಿಯಾಗಿರೋ ಆತಂಕಕ್ಕೂ ಕಾರಣವಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಕೋವಿಡ್ ವೈರಸ್ ಆತಂಕ ಸೃಷ್ಠಿಯಾಗಿದೆ.
ಕೇರಳದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಬೆನ್ನಲ್ಲೇ 80 ವರ್ಷದ ವೃದ್ಧ ನಿನ್ನೆ ಸಾವನ್ನಪ್ಪಿರೋದು ಮತ್ತಷ್ಟು ಭೀತಿಯನ್ನು ಹುಟ್ಟಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬರಬೇಕಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1