“ಬಿಂಗ್ಸು ಬ್ಲೂಮ್: ಬೆಂಗಳೂರಿನಲ್ಲಿ ಕೊರಿಯನ್ ಸಿಹಿತಿಂಡಿಗೆ ಜನ ಮೆಚ್ಚುಗೆ”

ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕೊರಿಯನ್ ಮತ್ತು ಇತರ ಏಷ್ಯನ್ ಭಕ್ಷ್ಯಗಳು ಕಾಡ್ಗಿಚ್ಚಿನಂತೆ ಜನಪ್ರಿಯತೆ ಗಳಿಸಿವೆ. ಯುವಜನರ ನೆಚ್ಚಿನ ಭಕ್ಷ್ಯಗಳನ್ನು ಪೂರೈಸುವ ರೆಸ್ಟೋರೆಂಟ್‌ಗಳು ಸಹ ಹೇರಳವಾಗಿವೆ.

ಅಂದಹಾಗೆ ನಗರದಲ್ಲಿ ಹೆಚ್ಚುತ್ತಿರುವ ರೆಸ್ಟೋರೆಂಟ್‌ಗಳಲ್ಲಿ ಸಾಂಪ್ರದಾಯಿಕ ಕೊರಿಯನ್ ಸಿಹಿತಿಂಡಿ ಬಿಂಗ್ಸು ಹೆಚ್ಚು ಹೈಲೈಟ್ ಆಗ್ತಿದೆ.

ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ ಸಾಮಾನ್ಯವಾಗಿ ಏಷ್ಯನ್ ಸಿಹಿತಿಂಡಿಗಳ ಬಗ್ಗೆ ಆಸಕ್ತಿ ಗಮನಾರ್ಹವಾಗಿ ಹೆಚ್ಚಾಗಿದೆ. ವಿಶೇಷವಾಗಿ ಯುವ ಜನರಲ್ಲಿ. ಅದರಲ್ಲೂ ಬಿಂಗ್ಸು ಸಿಕ್ಕಾಪಟ್ಟೆ ಟ್ರೆಂಡಿಯಾಗಿದೆ. ಹೆಚ್ಚಿನ ಕೆಫೆಗಳು ಮತ್ತು ಸಿಹಿತಿಂಡಿ ತಾಣಗಳಲ್ಲಿ ಇದರದ್ದೇ ಈಗ ಕಾರುಬಾರು.

ಬಿಂಗ್ಸು ಟ್ರೆಂಡ್ ಆಗಲು ಕಾರಣ ಸಾಮಾಜಿಕ ಮಾಧ್ಯಮ ಎನ್ನಲಾಗಿದೆ. ಆಗ ಹೆಚ್ಚಿನ ಜನರಿಗೆ ಬಿಂಗ್ಸು ಎಂದರೇನು ಎಂದು ಸಹ ತಿಳಿದಿರಲಿಲ್ಲ. ಆದರೆ ಈಗ ಜನರಿಗೆ ಇದರ ಬಗ್ಗೆ ಹೆಚ್ಚು ತಿಳಿದಿದೆ. ಜನರೇಷನ್ ಝಡ್ (ಜೆನ್ ಝೀ) ತಲೆಮಾರಿನ ಯುವಕ, ಯುವತಿಯರ ದೃಷ್ಟಿಗೆ ಬಿಂಗ್ಸು ಆಕರ್ಷಕವಾಗಿ ಕಾಣುವುದರಿಂದ ಸಾಮಾಜಿಕ ಮಾಧ್ಯಮದಲ್ಲಿ ಇದರ ಉತ್ತಮ ಫೋಟೋಗಳನ್ನು ಪೋಸ್ಟ್ ಮಾಡುವುದನ್ನ ನೀವು ನೋಡಬಹುದು.

ಬಿಂಗ್ಸು ಯಂತ್ರಗಳು ಸಹ ಈಗ ಭಾರತದಲ್ಲಿ ಸುಲಭವಾಗಿ ಲಭ್ಯವಿದ್ದು, ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಬೇಕಾಗಿಲ್ಲ, ಆದ್ದರಿಂದಲೇ ಇದು ಹೆಚ್ಚಿನ ಮಟ್ಟದಲ್ಲಿ ಎಲ್ಲರಿಗೂ ಸಿಗುತ್ತಿದೆ.ಈ ಖಾದ್ಯವನ್ನು ಸಾಂಪ್ರದಾಯಿಕವಾಗಿ ಕೆಂಪು ಬೀನ್ ಪೇಸ್ಟ್, ಹಾಲು ಮತ್ತು ಪುಡಿಮಾಡಿದ ನಟ್ಸ್‌ಗಳಂತಹ ಮೇಲೋಗರಗಳಿಂದ ಕವರ್ ಮಾಡಲಾಗುತ್ತೆ. ಈ ಖಾದ್ಯವು 1390 ರ ಜೋಸೆನ್ ರಾಜವಂಶಕ್ಕಿಂತಲೂ ಹಿಂದಿನದು ಮತ್ತು ಜನಪ್ರಿಯ ಬೇಸಿಗೆಯ ಖಾದ್ಯವೂ ಹೌದು.

ಬೆಂಗಳೂರಿನಲ್ಲಿರುವ ಮಳಿಗೆಗಳು ಇದನ್ನು ಭಾರತೀಯ ರುಚಿಗೆ ಮ್ಯಾಚ್ ಮಾಡುತ್ತಿವೆಯಾದರೂ ಕೊರಿಯನ್ನರು ಐಸ್ ಅನ್ನು ಹಾಲಿಗೆ ಬದಲಾಯಿಸುವ ಪ್ರಯೋಗವನ್ನು ಮಾಡಿದ್ದಾರೆ. ಹಾಗೆಯೇ ಕಾಲೋಚಿತ ಹಣ್ಣುಗಳು, ಹಣ್ಣಿನ ರಸ…ಇತ್ಯಾದಿ ಸೇರಿಸಲಾಗುತ್ತಿದೆ.

“ಬಿಂಗ್ಸು ಖಾದ್ಯ ಪರಿಚಯವಿಲ್ಲದ ಸ್ಥಳೀಯರನ್ನು ಆಕರ್ಷಿಸುತ್ತಿದೆ. ಇದನ್ನು ಸಾಮಾನ್ಯವಾಗಿ ಸುಂದರವಾಗಿ ಪ್ರೆಸೆಂಟ್ ಮಾಡಲಾಗುತ್ತದೆ. ಬಿಂಗ್ಸುವಿನ ಹೊಸ ವಿನ್ಯಾಸವು ಜನರನ್ನು ಮತ್ತೆ ಮತ್ತೆ ಬರುವಂತೆ ಮಾಡುತ್ತೆ. ವಿನ್ಯಾಸವು ಯಾವುದೇ ಇತರ ಸಿಹಿತಿಂಡಿಗಳಿಗಿಂತ ಭಿನ್ನವಾಗಿದೆ. ನಿಜ ಹೇಳಬೇಕೆಂದ್ರೆ ಇದು ಐಸ್ ಕ್ರೀಮ್ ತಿಂದಂತೆ ಭಾಸವಾಗುವುದಿಲ್ಲ. ಏಕೆಂದರೆ ಅದು ನಿಮ್ಮ ಬಾಯಿಯಲ್ಲಿ ಇಡುತ್ತಿದ್ದಂತೆ ಕರಗುತ್ತದೆ. ಇದು ಸಂಪೂರ್ಣವಾಗಿ ವಿಭಿನ್ನವಾದ ಅನುಭವವನ್ನು ನೀಡುತ್ತದೆ” ಎನ್ನುತ್ತಾರೆ ಮಾರಾಟಗಾರರು.

Views: 7

Leave a Reply

Your email address will not be published. Required fields are marked *