ಬಾಲಿವುಡ್ ನ ಈ ನಟಿಯರು ತಪ್ಪಿಯೂ ಸೇವಿಸುವುದಿಲ್ಲವಂತೆ ಈ ಹಿಟ್ಟಿನ ಚಪಾತಿ

ಬೆಂಗಳೂರು : ಫಿಟ್ ಆಗಿರಲು ಸೆಲೆಬ್ರಿಟಿಗಳು ವಿಶೇಷವಾಗಿ ವಿನ್ಯಾಸಗೊಳಿಸಿದ ಆಹಾರ ಯೋಜನೆಗಳನ್ನು ಅನುಸರಿಸುತ್ತಾರೆ. ಬಾಲಿವುಡ್ ನ ಟಾಪ್ ನಟಿಯರ ತೂಕ ಇಳಿಸುವ ಡಯಟ್ ಸೀಕ್ರೆಟ್ ಗಳು ಇಲ್ಲಿವೆ. 

ಹಿನಾ ನಟನೆ ಮತ್ತು ಫಿಟ್‌ನೆಸ್‌ನಿಂದಾಗಿ ಸುದ್ದಿಯಲ್ಲಿರುತ್ತಾರೆ. ತಾನು ಫಿಟ್ ಆಗಿರಲು ಆರೋಗ್ಯಕರ ಆಹಾರವನ್ನು ಮಾತ್ರ ತಿನ್ನುತ್ತೇನೆ ಎಂದು ಹಿನಾ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು . ಇದಕ್ಕಾಗಿ  ಗೋಧಿ ಹಿಟ್ಟಿನ ಬದಲಾಗಿ ನಾಚ್ನಿ ಅಥವಾ ರಾಗಿಯಿಂದ ಮಾಡಿದ ಚಪಾತಿಯನ್ನು ಮಾತ್ರ ತಿನ್ನುವುದಾಗಿಯೂ ಹೇಳಿದ್ದರು. 

ಫಿಟ್‌ನೆಸ್‌ ಮಾತು ಬಂದಾಗ ಮೊದಲು ಕೇಳಿ ಬರುವ ಹೆಸರು ಶಿಲ್ಪಾ ಶೆಟ್ಟಿ.   ಶಿಲ್ಪಾ ಶೆಟ್ಟಿ ಎರಡು ಮಕ್ಕಳ ತಾಯಿ. ಶಿಲ್ಪಾ ಶೆಟ್ಟಿ ಯೋಗ ಮಾಡುತ್ತಾ ಫಿಟ್ ಆಗಿದ್ದಾರೆ. ಶಿಲ್ಪಾ ಶೆಟ್ಟಿ ಗೋಧಿ ಹಿಟ್ಟಿನ ಬದಲಿಗೆ ಜೋಳದ ಹಿಟ್ಟಿನಿಂದ ಮಾಡಿದ ರೊಟ್ಟಿಗಳನ್ನು ತಿನ್ನುತ್ತಾರೆ. ಜೋಳದ ಹಿಟ್ಟು ಗ್ಲುಟನ್ ಮುಕ್ತವಾಗಿದೆ ಮತ್ತು ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.  

ಕಿಯಾರಾ ಅಡ್ವಾಣಿ ಬಹಳ ದಿನಗಳಿಂದ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ಸೇವಿಸುತ್ತಿಲ್ಲ. ಇದೇ ಅವರ ಆರೋಗ್ಯದ ಗುಟ್ಟು. 

ಎರಿಕಾ ಫೆರ್ನಾಂಡಿಸ್ ಬಹಳ ದಿನಗಳ ಹಿಂದೆಯೇ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಗೆ ಗುಡ್ ಬೈ ಹೇಳಿದ್ದಾರೆ. ಅಷ್ಟೇ ಅಲ್ಲ, ನಟಿ ಕಟ್ಟುನಿಟ್ಟಾದ ಗ್ಲುಟನ್ ಮುಕ್ತ ಆಹಾರ ಯೋಜನೆಯನ್ನು ಸೇವಿಸುತ್ತಾರೆ. 

ಕಾಜೋಲ್ ಆರು ತಿಂಗಳಲ್ಲಿ ಸುಮಾರು 18 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ಮತ್ತು ಜಂಕ್ ಫುಡ್‌ನಿಂದ ದೂರವಿದ್ದರು. 

Source: https://zeenews.india.com/kannada/photo-gallery/these-bollywood-actress-never-eat-wheat-chapati-152944/erika-fernadies-152946

Leave a Reply

Your email address will not be published. Required fields are marked *