ಚಿತ್ರದುರ್ಗ ಆ. 23
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಖೂರವ ಸಮಾಜಕ್ಕೂ ಸಹಾ ಅಭೀವೃದ್ದಿ ನಿಗಮವನ್ನು ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಈ ನಿಗಮ ಆದರೆ ನಿಮ್ಮ ಸಮಾಜದ ಆಭೀವೃದ್ದಿಯೂ ಸಹಾ ಆಗಲಿದೆ ಎಂದು ಹಿಂದುಳಿದ ವರ್ಗ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ಆಶ್ರಯದಲ್ಲಿ ಶನಿವಾರ ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕುಳುವ ಜನಾಂಗದ ಸಮಾವೇಶ ಹಾಗೂ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ 918ನೇ ಜಯಂತ್ರ್ಯೋತ್ಸವವೂವನ್ನು ಉದ್ಗಾಟಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಯಾವುದೆ ಜಾನಾಂಗಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ, ಒಳ ಮೀಸಲಾತಿಯ ಮೂಲಕ ಎಲ್ಲರಿಗೂ ಸಹಾ ನ್ಯಾಯವನ್ನು ಹಂಚುವಂತ ಕೆಲಸವನ್ನು ಮಾಡಲಾಗುತ್ತದೆ.
ನಮ್ಮ ಪಕ್ಷ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದರು.ಒಳ ಮೀಸಲಾತಿ ಜಾರಿಯಲ್ಲಿ ಇರುವಂತ ಸಮಸ್ಯೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಶೀಘ್ರವಾಗಿ ಪರಿಹಾರ ಮಾಡಲಿದೆ ಇದಕ್ಕೆ ಯಾರೂ ಸಹಾ ಹೆದರುವ ಆಗತ್ಯ ಇಲ್ಲ, ಅಲೆಮಾರಿ ಜನಾಂಗವನ್ನು ನಮ್ಮ ಜೊತೆಯಲ್ಲಿ ಸೇರಿಸಲಾಗಿದೆ, ಇದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು.
ಪರಿಶಿಷ್ಟ ಜಾತಿಯಲ್ಲನ 101 ಜಾತಿಗಳಿಗೆ ಅನ್ಯಾಯವಾಗುವುದಕ್ಕೆ ನಮ್ಮ ಸರ್ಕಾರ ಬಿಡುವುದಿಲ್ಲ ಎಂದ ಸಚಿವರು, ಕೂರಚ, ಕೂರಮ ಹಾಗೂ ಭಂಜತ್ರಿ ಕಷ್ಟದಲ್ಲಿನ ಸಮಾಜವಾಗಿದೆ. ನಿಮ್ಮ ಸಮಾಜದವರು ನಮ್ಮ ಮನೆಯ ಹಿಂದೆ ಮುಂದೆ ಇದ್ದಾರೆ ಅವರ ಕಷ್ಟಗಳನ್ನು ನಾನು ನೋಡಿದ್ದೇನೆ. ಈ ಹಿಂದೆ ಕೂರಚ, ಕೂರಮ ಜನಾಂಗದವರಿಗೆ ವಾಂಬೆ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿತ್ತು, ಆದರೆ ಅವರಿಎಗ ಸಾಲ ಹಾಗೂ ಬಡ್ಡಿಯನ್ನು ಕಟ್ಟಲು ಆಗುವುದಿಲ್ಲ ಎಂದು ನನ್ನ ಬಳಿ ಮನವಿ ಮಾಡಿದಾಗ ಇದೇ ಸಿದ್ದರಾಮಯ್ಯ ರವರ ಬಳಿ ಈ ಸಮಸ್ಯೆಯನ್ನು ಹೇಳಿದಾಗ ಅವರು ರಾಜ್ಯದಲ್ಲಿನ ಎಲ್ಲಾ ಕೂರಚ, ಕೂರಮದವರಿಗೆ ನಿರ್ಮಾಣ ಮಾಡಿದ ಮನೆಯ ಎಲ್ಲಾ ಸಾಲ ಹಾಗೂ ಬಡ್ಡಿಯನ್ನು ಮನ್ನಾ ಮಾಡಿದರು ಎಂದರು.
ಈ ಜನಾಂಗ ಶ್ರಮ ಹಾಗೂ ಕಷ್ಟ ಜೀವಿಗಳಾಗಿದ್ದಾರೆ. ಸರ್ಕಾರ ನಿಮ್ಮ ನೆರವಿಗೆ ಬರಲಿದೆ ನಿಮ್ಮ ಬಹು ದಿನದ ಬೇಡಿಕೆಯಾದ ನಿಗಮ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ನಿಗಮ ಸ್ಥಾಪನೆಗೆ ನೆರವಾಗುವುದಾಗಿ ತಿಳಿಸಿ, ಈ ನಿಗಮ ಸ್ಥಾಪನೆಯಾದರೆ ನಿಮ್ಗೂ ಸಹಾ ಅನುಕೂಲವಾಗಲಿದೆ, ಭೂಮಿ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಕೂರಚ, ಕೂರಮ ಸುಮುದಾಯದ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ಮಾಡುವುದರ ಮೂಲಕ ನಿಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಿದೆ ಇದನ್ನು ನೋಡಿದೆ ಸಿದ್ದರಾಮಯ್ಯನವರು ನಿಮಗೆ ನಿಗಮವನ್ನು ಸ್ಥಾಪಿಸಿ ಕೂಡಲಿದ್ದಾರೆ ಇದಕ್ಕೆ ಬೇಕಾದ ಸಹಾಯವನ್ನು ನಾನು ಮಾಡುವುದಾಗಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
30 ವರ್ಷಗಳ ಕಾಲ ಜಟಿಲವಾಗಿದ್ದ ಮೀಸಲಾತಿಯನ್ನು ನಮ್ಮ ಸರ್ಕಾರ ಮೂರೇ ತಿಂಗಳಲ್ಲಿ ಪರಿಹಾರ ಮಾಡಿದೆ, ಇನ್ನೂ ಸ್ಪರ್ಶ ಪದವನ್ನು ತೆಗೆಯುವಂತೆ ಮನವಿಯನ್ನು ಮಾಡಲಾಗಿದೆ ಇದರ ಬಗ್ಗೆಯೂ ಸಹಾ ಚರ್ಚೆ ಮಾಡಲಾಗುವುದು, ನಿಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ ಆದರೆ ಇದರಿಂದ ಯಾರನ್ನು ತೆಗೆಯಲು ಆಗುವುದಿಲ್ಲ ಯಾವುದೇ ಕಾರಣಕ್ಕೂ ಸಹಾ ಭಯ ಬೀಳಬೇಡಿ, ನಿಮ್ಮ ಜೊತೆಗೆÀ ಸರ್ಕಾರ ಇದೆ ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೂಡಿಸಿ ಯಾವುದೆ ಕಾರಣಕ್ಕೂ ಸಹಾ ಶಿಕ್ಷಣವನ್ನು ನಿಲ್ಲಿಸಬೇಡಿ, ಶಿಕ್ಷಣ ಇದ್ದರೆ ಏನನ್ನದಾರೂ ಸಾಧನೆ ಮಾಡಬಹುದಾಗಿದೆ ಅಂಬೇಡ್ಕರ್ ರವರ ವಾದದಂತೆ ಶಿಕ್ಷಣ ಹೋರಾಟ, ಸಂಘಟನೆಯತ್ತ ಮುಖ ಮಾಡಿ ಎಂದು ಕರೆ ನೀಡಿದರು.ಯೋಜನಾ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಮಾತನಾಡಿ, ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಯಾರಿಗೂ ಸಃಆ ಅನ್ಯಾಯವಾಗಲು ಬಿಡುವುದಿಲ್ಲ, ಅನ್ಯಾಯವಾಗಿದ್ದರೆ ಮುಂದಿನ ದಿನದಲ್ಲಿ ಸರಿಪಡಿಸಲಾಗುವುದು. ಕಟ್ಟ ಕಡೆಯ ವ್ಯಕ್ತಿಗೂ ಸಹಾ ನಮ್ಮ ಸರ್ಕಾರ ಸೌಲಭ್ಯ ಸಿಗುವಂತಾಗಬೇಕು ಎಲ್ಲರು ಸಹಾ ಮುಖ್ಯವಾಹಿನಿಗೆ ಬರಬೇಕಿದೆ. ನಿಮ್ಮಲ್ಲಿನ 101 ಜಾತಿಗಳ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕಿದೆ, ಒಳ ಮೀಸಲಾತಿಗೆ ನಮ್ಮ ಕಾಂಗ್ರೇಸ್ ಪಕ್ಷದ ಸರ್ಕಾರವೇ ಚಾಲನೆಯನ್ನು ನೀಡಿತ್ತು ಇದನ್ನು ಕಾಂಗ್ರೆಸ್ ಸರ್ಕಾರವೇ ಜಾರಿ ಮಾಡಿದೆ ಇದರಲ್ಲಿ ಸಣ್ಣ-ಪುಟ್ಟ ತಪ್ಪುಗಳ ಆಗಿರಬಹುದು ಅದನ್ನು ಸರಿಪಡಿಸಲಾಗುವುದು ಯಾವುದೇ ಅತಂಕ ಬೇಡ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಿತ್ರದುರ್ಗ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಕೆ.ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರುವ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕ ರಾಜಕೀಯವಾಗಿ ಅತ್ಯಂತ ಹಿಂದುಳಿದ, ಅಸಂಘಟಿತ ಮತ್ತು ಶೋಷಣೆಗೊಳಗಾದ ಜನಾಂಗವೇ ಕುಳುವ. (ಕೊರಮ, ಕೊರವ, ಕೊರವಂಜಿ).
ಸಾಮಾಜಿಕ ನ್ಯಾಯ ಮತ್ತು ಉತ್ತಮ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿದ್ಯ ಮತ್ತು ಸರ್ಕಾರಿ ಸೌಲಭ್ಯ ರೀತಿಯಲ್ಲಿ ಸಿಗದೆ ಅನ್ಯಾಯಕ್ಕೆ ಒಳಪಟ್ಟು ಅನೇಕ ಕುಂದು-ಕೊರತೆಗಳಿಂದ ಕೂಡಿದ ಈ ಜನಾಂಗವು ಹಿಂದಿನವರೆಗೆ ಬಡತನದ ಬಂಧನದಲ್ಲಿ ಸಿಲುಕಿದೆ. ಎಲ್ಲಾ ರಾಜಕೀಯ ಪಕ್ಷಗಳು, ಈ ಜನಾಂಗಕ್ಕೆ ರಾಜಕೀಯ ಪ್ರಾತಿನಿದ್ಯ ನೀಡದೆ ದೊಡ್ಡಮಟ್ಟದಲ್ಲಿ ಅನ್ಯಾಯವೆಸಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಸಮಾಜದ ಬೇಡಿಕೆಗಳನ್ನು ಈ ಸರ್ಕಾರದ ಮುಂದೆ ಇಡಲು ಈ ವೇದಿಕೆ ಸಾಕ್ಷಿಯಾಗಲಿದೆ ಎಂದಿದ್ದಾರೆ. ದಿವ್ಯ ಸಾನಿಧ್ಯವನ್ನು ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಶ್ರೀಗಳು ಹಾಗೂ ಮಸ್ಕಿ ತಾಲ್ಲೂಕಿನ ಇರಕಲ್ ಮಠದ ಜಗದ್ಗುರು ಶ್ರೀ ಶಿವಶಕ್ತಿ ಪೀಠದ ಶ್ರೀ ಬಸವಪ್ರಸಾದ ಶ್ರೀಗಳು ವಹಿಸಿದ್ದರು.
ನಗರಾಭೀವೃದ್ದಿ ಪ್ರಾಧಿಕಾರದ ಆಧ್ಯಕ್ಷರಾದ ತಾಜ್‍ಪೀರ್, ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ಎಂ.ಭಜಂತ್ರಿ ಹಾಗೂ ಮಾಜಿ ಶಾಸಕರಾದ ಜಿ.ಚಂದ್ರಣ್ಣ, ಕರ್ನಾಟಕ ಪ.ಜಾ.ಮತ್ತು ಪ.ಪಂ.ಅಲೆಮಾರಿ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ, ಎ.ಕೆ.ಎಂ.ಎಸ್‍ನ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೆಶಕರಾದ ಗುರುನಾಥ್, ನಗರಸಭೆಯ ನಾಮ ನಿರ್ದೇಶನ ಸದಸ್ಯರಾದ ನರಸಿಂಹಮೂರ್ತಿ, ಗಂಗರಾಜು, ಆನಂದಪ್ಪ, ಚಿತ್ರದುರ್ಗ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ಹನುಮಂತಪ್ಪ ಗುಡೇರಿ, ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್ ಉಪಾಧ್ಯಕ್ಷರಾದ ರಾಮಪ್ಪ, ಬುಚ್ಚಪ್ಪ, ಪರಮೇಶ್ವರಪ್ಪ ಅಂಜನಮೂರ್ತಿ ಭಾಗವಹಿಸಿದ್ದರು.
ಇದಕ್ಕೂ ಮುನ್ನಾ ಬೆಳ್ಳಿಗೆ ನಗರದ ನೀಲಕಂಠೇಶ್ವರ ದೇವಾಲಯದಿಂದ ಕುಲಗುರುಗಳಾದ ಶರಣರ ಭಾವಚಿತ್ರದ ಮೆರವಣಿಗೆ ನಡೆದಿದ್ದು, ಇದರಲ್ಲಿ ವಿವಿಧ ಜಾನಪದ ಕಲಾತಂಡಗಳು, ಭಾಗವಹಿಸಲಿದ್ದವು.