ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಮದ ದಿವಂಗತ ಹನುಮಂತಪ್ಪ ಮತ್ತು ಶ್ರೀಮತಿ ಕಂಪಳಮ್ಮ ಇವರ ಮಗನಾದ ಡಾ.ಮಾರುತಿ ಹೆಚ್ ಇವರು ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ, ಸಾಹಿತ್ಯ, ಸಾಮಾಜಿಕ ಸಂಶೋಧನೆ, ಶಿಕ್ಷಣ, ಕೃಷಿ ಮತ್ತು ಕಲಾ ಕ್ಷೇತ್ರದಲ್ಲಿ ಸಾಧಿಸಿದ ಅನುಪಮ ಸೇವೆ ಗಣನೀಯವಾದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇಂತಹ ಪ್ರತಿಭಾವಂತರನ್ನು ಪಡೆದಿರುವುದು ನಮಗೆ ನಿಜಕ್ಕೂ ಹೆಮ್ಮೆಯ ಸಂಗತಿ. ನಾವು ತಮ್ಮ ಅಪಾರ ಜ್ಞಾನ ಮತ್ತು ಅದ್ವಿತೀಯ ಪ್ರತಿಭೆಯನ್ನು ಗುರುತಿಸಿ ದಿನಾಂಕ 22-08-2025 ಶುಕ್ರವಾರ ರಂದು ನಮ್ಮ ಸಂಸ್ಥೆಯ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನ, ಮೈಸೂರು ನಲ್ಲಿ ಏರ್ಪಡಿಸಲಾದ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ “ಕರ್ನಾಟಕ ಭೂಷಣ” ರಾಜ್ಯ ಮಟ್ಟದ ಸೇವಾರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಇವರ ಈ ಸಾಧನೆಯ ಹಾದಿ ಹೀಗೆ ಸಾಗಲಿ ಎಂದು ಆಶಿಸುತ್ತೇವೆ.