ಚಿತ್ರದುರ್ಗ ಏ. 25
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮದಕರಿ ಯುವಕ ಸಂಘ (ರಿ), ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಐಮಂಗಲದ ಪೊಲೀಸ್ ತರಬೇತಿ ಶಾಲೆ ಸಂಯುಕ್ತಾಶ್ರಯದಲ್ಲಿ ಏ. 27ರ ಸÉೂೀಮವಾರ ಸಂಜೆ 4.30ಕ್ಕೆ ಐಮಂಗಲದ ಪೊಲೀಸ್ ತರಬೇತಿ ಶಾಲೆಯಲ್ಲಿ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮದಕರಿ ಯುವಕ ಸಂಘ (ರಿ) ಅಧ್ಯಕ್ಷರಾದ ಸೋಮಶೇಖರ್ ತಿಳಿಸಿದ್ದಾರೆ.
ಈ ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವೀಣಾವಾದನ ಜನಪದ ಸಂಗೀತ ತತ್ವ ಪದಗಳು, ವಚನ ಸಂಗೀತ, ಸಂಗಮ ಸಂಗೀತ, ದಾಸರಪದ, ಕನ್ನಡ ಗೀತಗಾಯನ, ರಂಗಗೀತೆಗಳು ಗಾಯನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯರಾದ ಡಾ. ಜೆ .ಕರಿಯಪ್ಪ ಮಾಳಿಗೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪೋಲಿಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪಿ.ಪಾಪಣ್ಣ ವಹಿಸಲಿದ್ದಾರೆ.
ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಿ.ಎಮ್. ಗುರುನಾಥ್ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಡ್ಡಿಕೆರೆ ಕಾಂತರಾಜು ಮದಕರಿ ಬಳಗದ ಡಿ. ಗೋಪಾಲಸ್ವಾಮಿ ನಾಯಕ ಆಕಾಶವಾಣಿ ಕಲಾವಿದರು, ಸಂಗೀತ ಪ್ರಾಧ್ಯಾಪಕರು, ಆನಂದ್ ಆರ್ ಪಾಟೀಲ್ ಅಮುಕುಂದಿ ಗಂಗಾಧರ .ಕೆ, ಭಾಗವಹಿಸಲಿದ್ದಾರೆ.

