ಚಿತ್ರದುರ್ಗ ಅ. 26
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ವಾಲ್ಮೀಕಿಯವರು ಕೇವಲ ನಾಯಕ ಜನಾಂಗಕ್ಕಷ್ಟೆ ರಾಮಾಯಣ ಬರೆದಿಲ್ಲ. ಅವರು ಬರೆದಿರುವ ರಾಮಾಯಣ ಇಡಿ ಮನುಕುಲಕ್ಕೆ ಸಂದೇಶ ನೀಡಿ ಎಲ್ಲಾ ಜಾತಿ ಧರ್ಮದವರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಚಿತ್ರದುಘ್ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಂಗವಾಗಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ರಾಜಕೀಯ ಪಕ್ಷವಾದ ಬಿಜೆಪಿ ವಾಲ್ಮಿಕಿ ಬರೆದ ರಾಮಾಯಣದ ಮೂಲ ರಾಮವನ್ನು ಹಿಡಿದುಕೊಂಡು ಮರೆಯುತ್ತಿದೆ ಆದರೆ ಅದನ್ನು ನಮಗೆ ನೀಡಿದ ವಾಲ್ಮೀಕಿಯನ್ನು ಮರೆತ್ತಿದೆ, ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಕೋಮುವಾದಿ ಬಿಜೆಪಿ.ಗೆ ರಾಮಾಯಣದ ಮೂಲಕ ರಾಮನನ್ನು ವಿಶ್ವಕ್ಕೆ ಪರಿಚಯಿಸಿರುವ ವಾಲ್ಮೀಕಿ ಏಕೆ ನೆನಪಾಗುತ್ತಿಲ್ಲ ಎಂದು ದೂರಿದರು.
ಪ್ರಪಂಚಕ್ಕೆ ರಾಮ ಯಾರು ಎಂದು ಗೊತ್ತಿರಲ್ಲಿಲ್ಲ ಈ ಸಮಯದಲ್ಲಿ ವಾಲ್ಮೀಕಿಯವರು ರಾಮಾಯಣವನ್ನು ಬರೆಯುವುದರ ಮೂಲಕ ಪ್ರಪಂಚಕ್ಕೆ ರಾಮನನ್ನು ಪರಿಚಯ ಮಾಡಿದರು, ಆದರೆ ಕೇಂದ್ರ ಸರ್ಕಾರ ಇವರನ್ನು ಮರೆತ್ತಿದೆ, ಮುಂದಿನ ದಿನಗಳಲ್ಲಿ ವಾಲ್ಮೀಕಿ ಜಯಂತಿ ರಾಷ್ಟ್ರೀಯ ಜಯಂತಿಯಾಗಬೇಕೆಂದು ಸರ್ಕಾರವನ್ನು ಮಂಜುನಾಥ್ ಒತ್ತಾಯಿಸಿದರು.


ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಬುದ್ದ, ಬಸವ, ಅಂಬೇಡ್ಕರ್ ತತ್ವದಂತೆ ರಾಮಾಯಣ ಬರೆದಿರುವ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕು. ಭೇಟೆಗಾರನಾಗಿದ್ದ ವಾಲ್ಮೀಕಿ ಮಾರ್ಪಾಡಾಗಿ ರಾಮಾಯಣ ರಚಿಸಿರುವುದನ್ನು ನೋಡಿದರೆ ಕೆಟ್ಟವರು ಒಳ್ಳೆಯರಾಗಬಹುದು ಎನ್ನುವುದಕ್ಕೆ ನಿದರ್ಶನ. ರಾಮನ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ರಾಮಾಯಣ ಬರೆದವರು ವಾಲ್ಮೀಕಿ ಎನ್ನುವುದು ಎಷ್ಟು ಮುಖ್ಯವೋ ಅದರಂತೆ ನಮ್ಮದು ಸೂಫಿ, ಸಂತರು, ಋಷಿ ಮುನಿಗಳ ನಾಡು ಎನ್ನುವುದನ್ನು ಮರೆಯುವಂತಿಲ್ಲ. ಶ್ರೇಷ್ಟ ಗ್ರಂಥ ರಾಮಾಯಣದ ಮೂಲಕ ವಾಲ್ಮೀಕಿ ರಾಮನ ಆದರ್ಶಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ಯವರಂತೆ ಕಾಂಗ್ರೆಸ್ ಎಂದಿಗೂ ಸಮಾಜದಲ್ಲಿ ಒಡಕುಂಟು ಮಾಡುವ ಕೆಲಸಕ್ಕೆ ಕೈಹಾಕಿಲ್ಲ. ಧರ್ಮ, ಜಾತಿ, ಸೂಫಿ ಸಂತರ ಹೆಸರುಗಳನ್ನು ಮುಂದಿಟ್ಟುಕೊಂಡು ದ್ವೇಷ ಹರಡಬಾರದು. ರಾಮನ ಆದರ್ಶ, ವಾಲ್ಮೀಕಿರವರ ತತ್ವ ಸಿದ್ದಾಂತಗಳ ಮೇಲೆ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ. ರಾಮಾಯಣದ ಆಧಾರದ ಮೇಲೆ ಸಂವಿಧಾನ ರಚನೆಯಾಗಿದೆ ಎಂದರು.
ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್ ಮಾತನಾಡುತ್ತ ವಾಲ್ಮೀಕಿ ಎಂದ ಕೂಡಲೆ ಎಲ್ಲರಿಗೂ ರಾಮಾಯಣ ನೆನಪಾಗುತ್ತದೆ. ಕಾಡಿನಲ್ಲಿ ಭೇಟೆಯಾಡಿಕೊಂಡಿದ್ದ ವಾಲ್ಮೀಕಿ ಮನಃಪರಿವರ್ತನೆಗೊಂಡು ತಪಸ್ಸಿಗೆ ಕೂರುತ್ತಾರೆ. ಇದರಿಂದ ರಾಮಾಯಣ ಬರೆಯಲು ಸಾಧ್ಯವಾಯಿತು. ವಾಲ್ಮೀಕಿಯನ್ನು ಬಿಟ್ಟು ಬಿಜೆಪಿ. ಆರ್.ಎಸ್.ಎಸ್.ನವರು ರಾಮನನ್ನು ಹಿಡಿದುಕೊಂಡು ರಾಜಕಾರಣ ಮಾಡುತ್ತ ರಾಮರಾಜ್ಯದ ಬದಲಿಗೆ ರಾವಣ ರಾಜ್ಯವನ್ನಾಗಿಸಲು ಹೊರಟಿರುವುದು ದುಃಖದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡುತ್ತ ಶ್ರೇಷ್ಟ ಸಂತ ವಾಲ್ಮೀಕಿ ಬರೆದಿರುವ ರಾಮಾಯಣದ ತಿರುಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಮಹಾನ್ ಪುರುಷ ವಾಲ್ಮೀಕಿ ಎಲ್ಲೆಡೆ ಬೆಳಕಿಗೆ ಬರಬೇಕಾದರೆ ವಾಲ್ಮೀಕಿ ಜಯಂತಿಯನ್ನು ಸಡಗರ ಸಂಭ್ರಮಗಳಿಂದ ಆಚರಿಸುವಂತಾಗಬೇಕೆಂದು ನುಡಿದರು.
ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಎದುರು ವಾಲ್ಮೀಕಿ ಪ್ರತಿಮೆಯನ್ನು ಪ್ರತಿಷ್ಟಾಪಿಸಿದರು. ಕಾಡಿನಲ್ಲಿ ವಾಸಿಸುತ್ತಿದ್ದ ವಾಲ್ಮೀಕಿ ರಾಮಾಯಣ ಬರೆದಿರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಗ್ಯಾರೆಂಟಿ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪದವೀಧರ ವಿಭಾಗದ ಅಧ್ಯಕ್ಷ ಪ್ರಕಾಶ್ ರಾಮ ನಾಯ್ಕ, ತಿಮ್ಮಣ್ಣ, ಕಣ್ಮೇಶ್, ಸಚಿನ್, ನ್ಯಾಯವಾದಿ ಮಹಮದ್ ರಫಿ, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮದ್ ಆಜಾಂಬಸವರಾಜ್ ಬಚ್ಚಬೋರನ ಹಟ್ಟಿ,ಪಾಪಯ್ಯ, ರವಿ, ಮಂಜುನಾಥ್, ನಗರ ಆಶ್ರಯ ಕಮಿಟಿ ಸದಸ್ಯ ಉಮೇಶ್‍ಕುಮಾರ್, ಸೇರಿದಂತೆ ಇತರರು ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು