ಚಿತ್ರದುರ್ಗ| ಕಬೀರಾನಂದಾಶ್ರಮದಲ್ಲಿ ನವರಾತ್ರಿ ಉತ್ಸವಕ್ಕೆ ತೆರೆ: ಚಂಡಿಕಾ ಹೋಮ, ಬನ್ನಿ ಪೂಜೆಯಲ್ಲಿ ಭಕ್ತರು ಭಾಗಿ.

ಚಿತ್ರದುರ್ಗ ಅ. 22

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಕಬೀರಾನಂದ ನಗರದಲ್ಲಿನ ಶ್ರೀ ಕಬೀರಾನಂದಾಶ್ರಮದಲ್ಲಿನ ಶ್ರೀ ಭಗವತಿ ಬಗಳಾಂಬಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಕಳೆದ 11 ರಿಂದ 21ರವರೆಗೆ ಪ್ರತಿ ದಿನ ಸಂಜೆ 7 ರಿಂದ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ಸಾನಿಧ್ಯದಲ್ಲಿ ಶ್ರೀದೇವಿ ಪುರಾಣವನ್ನು ಪ್ರವಚನ ಮಾಡಲಾಗಿದ್ದು ನಿನ್ನೆ ಸಂಜೆ ಶ್ರೀಗಳ ಸಾನೀಧ್ಯದಲ್ಲಿ ವಿಜಯದಶಮಿಯನ್ನು ಆಚರಣೆ ಮಾಡಲಾಯಿತು.

ಶ್ರೀ ಮಠದ ಆವರಣದಲ್ಲಿರುವ ಬನ್ನಿ ಮರಕ್ಕೆ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ಪೂಜೆಯನ್ನು ನಡೆಸುವುದರ ಮೂಲಕ ಬನ್ನಿ ಮುಡಿಯುವುದಕ್ಕೆ ಚಾಲನೆಯನ್ನು ನೀಡಿದರು, ಈ ಸಮಯ ದಲ್ಲಿ ನೆರದಿದ್ದ ಭಕ್ತಾಧಿಗಳು ಸಮ್ಮುಖದಲ್ಲಿ ಛತ್ರಿ ಚಾಮರಗಳೊಂದಿಗೆ ಶ್ರೀಗಳ ಮೆರವಣಿಗೆಯನ್ನು ನಡೆಸಲಾಯಿತು. ಶ್ರೀಗಳು ಪೀತಾಂಬರದ ವಸ್ತ್ರವನ್ನು ಧರಿಸಿ ತಲೆಗೆ ಖಾವಿ ಬಣ್ಣದ ಪೇಟವನ್ನು ಹಾಕಿ ಕೊರಳಿಗೆ ರುದ್ರಾಕ್ಷಿ ಮಾಲೆಯನ್ನು ಧರಿಸಿ ಬನ್ನಿ ಮರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಭಕ್ತರಿಗೆ ದರ್ಶನವನ್ನು ನೀಡಿ ಆರ್ಶೀವಚನವನ್ನು ದಯಪಾಲಿಸಲಾಯಿತು.

ಕಳೆದ 11 ರಿಂದ 21ರವರೆಗೆ ಪ್ರತಿ ದಿನ ಸಂಜೆ ಮಲ್ಲಾಪುರ ಗೊಲ್ಲರಹಟ್ಟಿಯ ತಿಪ್ಪೇಸ್ವಾಮಿಯವರು ದೇವಿಯ ಚರಿತ್ರೆಯನ್ನು ಪಠಿಸಿದರೆ ಸಾಹಿತಿಗಳಾದ ಹುರಳಿ ಬಸವರಾಜು ಚರಿತ್ರೆಯನ್ನು ಪ್ರವಾಚನ ಮಾಡುತ್ತಿದ್ದಾರೆ. ಇವರೊಂದಿಗೆ ಜಾನಪದ ಕಲಾವಿದರಾದ ಆಯಿತೋಳ ವಿರೂಪಾಕ್ಷಪ್ಪ ಹಾರ್ಮೋನಿಯಂ, ಯಶವಂತಕುಮಾರ್ ತಬಲವನ್ನು ನುಡಿಸುತ್ತಿದ್ದಾರೆ. ಅ. 18ರ ಭಾನುವಾರದಂದು ಶ್ರೀ ಸದ್ಗುರು ಕಬೀರಾನಂದಸ್ವಾಮಿ ಸಂಸ್ಕøತ ಪಾಠ ಶಾಲೆಯ ಶಿಕ್ಷಕರಾದ ಸುಬ್ರಾಯ ತಿಮ್ಮಣ್ಣ ಹಾಗೂ ಮಂಜುನಾಥ್ ಭಟ್ಟರ ನೇತೃತ್ವದಲ್ಲಿ ಚಂಡಿಕಾ ಹೋಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಆಗಮಿಸುವುದರ ಮೂಲಕ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದರು.

ಅ.21ರ ಮಧ್ಯಾಹ್ನ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳವರ 120ನೇ ವರ್ಷದ ಜಯಂತ್ಯೋತ್ಸವ ಕಾರ್ಯಕ್ರಮ ನಡೆದಿದ್ದು, ಇದಾದ ನಂತರ ಬನ್ನಿ ಮುಡಿಯುವ ಕಾರ್ಯದ ನಂತರ ಶ್ರೀ ದೇವಿ ಪುರಾಣದ ಮುಕ್ತಾಯ ಸಮಾರಂಭ ನಡೆಸಲಾಯಿತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *