ಚಿತ್ರದುರ್ಗ ಜೂ. 17
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ತಾಲ್ಲೂಕು ಅಖಿಲ ಭಾರತ ಗಾಣಿಗರ ಸಂಘದವತಿಯಿಂದ ಜಿಲ್ಲಾ ಮಟ್ಟದ ಲಿಂಗಾಯತ ಗಾಣಿಗ ಸಮಾಜದದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಪಿ.ಜ್ಞಾನಮೂರ್ತಿ ತಿಳಿಸಿದ್ದಾರೆ.
ಗಾಣಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಮತ್ತು ದ್ವೀತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಚಿತ್ರದುರ್ಗ ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹ ವಿದ್ಯಾರ್ಥಿಗಳು ಜೂ,30ರ ಮಂಗಳವಾರ ಸಂಜೆ 5 ಗಂಟೆಯೊಳಗಾಗಿ ಅಂಕಪಟ್ಟಿ, ಆಧಾರ ಕಾರ್ಡ ನಕಲು ಪ್ರತಿಯೊಂದಿಗೆ ಎರಡು ಪಾಸ್ ಪೋರ್ಟ ಸೈಜಿನ ಬಾವಚಿತ್ರದೊಂದಿಗೆ ಅರ್ಜಿಯನ್ನು ಚಿತ್ರದುರ್ಗ ತಾಲ್ಲೂಕು ಗಾಣಿಗ ಸಂಘ, ಶ್ರೀ ಕಲ್ಲೇಶ್ವರ ಸ್ವಾಮಿ ದಲ್ಲಾಳಿ ಮಂಡಿ, ಎ,ಬ್ಲಾಕ್, ಎ.ಪಿ.ಎಂ.ಸಿ. ಯಾರ್ಡ, ಚಿತ್ರದುರ್ಗ ಇಲ್ಲಿಗೆ ಖುದ್ಧಾಗಿ ಅಥವಾ ಅಂಚೆಯ ಮೂಲಕವಾಗಲಿ ಸಲ್ಲಿಸಲು ಕೊರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9448803174, 9481722217,6360951193 ಈ ದೂರವಾಣಿಯನ್ನು ಸಂಪರ್ಕ ಮಾಡಬಹುದಾಗಿದೆ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp:
https://whatsapp.com/channel/0029VbDbOsBD8SE2H0L3d40j
