ಚಿತ್ರದುರ್ಗ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕಿಗೆ 75 ವರ್ಷ: ನ.28 ಮತ್ತು 29ರಂದು ಅಮೃತ ಮಹೋತ್ಸವ.

ಚಿತ್ರದುರ್ಗ ನ. 24

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ದಿ.ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕಿನ ಅಮೃತ ಮಹೋತ್ಸವದ ಅಂಗವಾಗಿ ನ.28 ಮತ್ತು 29 ರಂದು ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಕೃತಜ್ಞತಾ ಪರ್ವ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ರಘುರಾಮರೆಡ್ಡಿ ತಿಳಿಸಿದರು.

ಜೆಸಿಆರ್. ಬಡಾವಣೆಯಲ್ಲಿರುವ ಬ್ಯಾಂಕ್‍ನ ಶಾಖೆಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 1951, ಆ.3ರಂದು ಎ.ಭೀಮಪ್ಪನಾಯಕರ ನೇತೃತ್ವದಲ್ಲಿ ಮರ್ಚೆಂಟ್ ಬ್ಯಾಂಕ್ ಸ್ಥಾಪನೆಯಾಯಿತು. ಅಂದಿನಿಂದ ಇಲ್ಲಿಯವರೆಗೂ 75 ವರ್ಷಗಳಿಂದ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಎಂ.ಕೊಟ್ರಯ್ಯ, ಕೆ.ಹೆಚ್.ಸತ್ಯನಾರಾಯಣರಾವ್, ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಪಿ.ಎಸ್.ಜಯಪ್ಪ, ಜಂಜುಕೇಶ್ವರ್, ರಾಮಲಿಂಗಶೆಟ್ಟಿ, ಇವರೆಲ್ಲಾ ಬ್ಯಾಂಕಿಗೆ ಸೇವೆ ಸಲ್ಲಿಸಿದವರಲ್ಲಿ ಪ್ರಾತಃಸ್ಮರಣೀಯರು.35 ಮಂದಿ ಮಾಜಿ ನಿರ್ದೇಶಕರುಗಳಿಗೆ ಸನ್ಮಾನ ಹಾಗೂ ಷೇರುದಾರರು, ಠೇವಣಿದಾರರಿಗೆ ಕೃತಜ್ಞತೆ ಸಮರ್ಪಿಸಲಾಗುವುದು ಎಂದರು.

ಪ್ರಾರಂಭದಲ್ಲಿ 11 ಸಾವಿರ ಷೇರು ಬಂಡವಾಳದೊಂದಿಗೆ ಆರಂಭಗೊಂಡ ಬ್ಯಾಂಕ್‍ನಲ್ಲಿ ಈಗ 5900 ಷೇರುದಾ ರರುಗಳಿದ್ದಾರೆ. 50.5ಕೋಟಿ ಸ್ವಂತ ಬಂಡವಾಳ ಹೊಂದಿದೆ. 225 ಕೋಟಿ ರೂ. ಠೇವಣಿಯಿದ್ದು, 144 ಕೋಟಿ ರೂ.ಗಳ ಸಾಲ ನೀಡಿ 365 ಕೋಟಿ ರೂ.ಗಳ ವ್ಯವಹಾರ ನಡೆಸಿದೆ. ಕಳೆದ ಆರ್ಥಿಕ ವರ್ಷದ ಮುಕ್ತಾಯದಲ್ಲಿ ಬ್ಯಾಂಕ್‍ನ ತೆರಿಗೆ ವ್ಯವಹಾರ ಮುಂಚಿನ ವರಮಾನವು 5.57 ಕೋಟಿ ರೂ.ಗಳಾಗಿದ್ದು, 19 ವರ್ಷಗಳ ಕಾಲ ಸದಸ್ಯರುಗಳಿಗೆ ಶೇ.25 ರಷ್ಟು ಡಿವಿಡೆಂಟ್ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಅಮೃತ ಮಹೋತ್ಸವ ಅಂಗವಾಗಿ ನ.29 ರಂದು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, 80 ಜನ ನೊಂದಾಯಿಸಿದ್ದಾರೆ. ಐಯುಡಿಪಿ.ಲೇಔಟ್‍ನಲ್ಲಿ ಈ.ಲೈಬ್ರರಿ ತೆರೆಯುವ ಚಿಂತನೆಯಿದೆ. ಅಲ್ಲಿ ಓದುಗರ ಪ್ರತಿಕ್ರಿಯೆ ನೋಡಿಕೊಂಡು ಬೇರೆ ಕಡೆಗೂ ಆರಂಭಿಸಲಾಗುವುದು. 40 ಕಿ.ಮೀ. ಒಳಗೆ ಉಚಿತವಾಗಿ ಶವ ಸಾಗಿಸಲು ಅಂಬ್ಯುಲೆನ್ಸ್ ಸೇವೆ ಒದಗಿಸುತ್ತೇವೆ. ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ಹೊಸದಾಗಿ ಶಾಖೆ ತೆರೆಯಲು ಅನುಮತಿ ಸಿಕ್ಕಿದೆ. ಪ್ರಥಮವಾಗಿ ಜಗಳೂರು ಹಾಗೂ ಚಳ್ಳಕೆರೆಯಲ್ಲಿ ಆರಂಭಿಸಲಾಗುವುದೆಂದು ನುಡಿದರು.

ನ.28 ರಂದು ಸಂಜೆ 6 ಗಂಟೆಗೆ ಸಹಕಾರ ಸಚಿವ ಲಕ್ಷ್ಮಣ ಎಸ್.ಸವದಿ ಅಮೃತ ಮಹೋತ್ಸವ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಮಾಜಿ ಸಚಿವರುಗಳಾದ ಎಚ್.ಏಕಾಂತಯ್ಯ, ಹೆಚ್.ಆಂಜನೇಯ, ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ ಮರ್ಚೆಂಟ್ ಬ್ಯಾಂಕ್‍ನ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ ಭಾಗವಹಿಸಲಿದ್ದಾರೆ. ಮರ್ಚೆಂಟ್ ಬ್ಯಾಂಕ್‍ನ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ ಭಾಗವಹಿಸಲಿದ್ದು, ಮರ್ಚೆಂಟ್ ಬ್ಯಾಂಕ್‍ನ ಅಧ್ಯಕ್ಷÀರಾದ ರಘುರಾಮರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ನ. 29ರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಚಿವರಾದ ರಘುಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸ ಲಿದ್ದಾರೆ. ಮಾಜಿ ಅಧ್ಯಕ್ಷರುಗಳಿಗೆ ಮಾಜಿ ಸಹಕಾರ ಸಚಿವರಾದ ರಾಜಣ್ಣ ಸನ್ಮಾನ ಮಾಡಲಿದ್ದಾರೆ. ಸದಸ್ಯರಿಗೆವ ನೆನಪಿನ ಕಾಣಿಕೆಯನ್ನು ಸಂಸದರಾದ ಗೋವಿಂದ ಕಾರಜೋಳ ರವರು ವಿತರಣೆ ಮಾಡಲಿದ್ದಾರೆ. ಶಾಸಕರಾದ ಡಾ.ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಸ,ಕೆ,ಬಸವರಾಜನ್, ಅದಿಜಾಂಬವ ಅಭೀವೃದ್ದಿ ನಿಗಮ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ಆಗಮಿಸಲಿದ್ದು, ಮರ್ಚೆಂಟ್ ಬ್ಯಾಂಕ್‍ನ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿ.ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ರಘುರಾಮರೆಡ್ಡಿ ವಹಿಸಲಿದ್ದಾರೆ.

ಅಮೃತ ಮಹೋತ್ಸವದ ಮೊದಲ ದಿನ ಸಂಜೆ 6-30 ರಿಂದ ಮೈಸೂರಿನ ಎ.ಹರ್ಷ ಮತ್ತು ತಂಡದವರಿಂದ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮ, 29 ರಂದು ಸಂಜೆ 6-30 ರಿಂದ ಬೆಂಗಳೂರಿನ ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ ಸಂಗೀತ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಡಿ.1ರಂದು ಎಸ್.ಜಿ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದ್ದು, ಮರ್ಚೆಂಟ್ ಬ್ಯಾಂಕ್‍ನ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಸಂಸ್ಥಾಪಕ ಅಧ್ಯಕ್ಷರಾದ ಮನೋಹರ್ ಮಸ್ಕಿ, ಮಾಜಿ ಅಧ್ಯಕ್ಷರಾದ ವಿಶ್ವನಾಥ್ ಹೀರೇಮಠ್, ಸತೀಶ್ಚಂದ್ರ, ಗುರುನಾಥ್ ಜಾಂತಿಕರ್, ರಾಜೀವ ಕೃಷ್ಣಾರೆಡ್ಡಿ, ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್, ಮಾಜಿ ಉಪಾಧ್ಯಕ್ಷರಾದ ಜಗದೀಶ್ ಕವಟಿಗಿಮಠ ವ್ಯವಸ್ಥಾಪಕ ನಿರ್ದೆಶಕರಾದ ಶರಣಗೌಡ ಪಾಟೀಲ್ ಭಾಗವಹಿಸಲಿದ್ದಾರೆ. . ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿ.ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ರಘುರಾಮರೆಡ್ಡಿ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಮರ್ಚೆಂಟ್ಸ್ ಬ್ಯಾಂಕ್‍ನ ಉಪಾಧ್ಯಕ್ಷ ಎಲ್.ಇ.ಶ್ರೀನಿವಾಸಬಾಬು, ನಿರ್ದೇಶಕರುಗಳಾದ ಎಲ್.ಜಯಣ್ಣ, ಪಿ.ಎಲ್.ಸುರೇಶ್‍ರಾಜು, ರಾಜಾನಾಯ್ಕ, ಶ.ಮಂಜುನಾಥ್, ಟಿ.ಹೆಚ್.ರಾಜಪ್ಪ, ಮುಕುಂದರಾವ್, ಸುರೇಶ್, ಡಿ.ಪ್ರಕಾಶ್, ಇಂದ್ರಮ್ಮ, ಸುಜಾತ, ವೃತ್ತಿಪರ ನಿರ್ದೇಶಕರುಗಳಾದ ರಾಜೀವ್, ಕಾರ್ತಿಕ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ಮಲ್ಲಿಕಾರ್ಜುನ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *