ಚಿತ್ರದುರ್ಗ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘಕ್ಕೆ ನೂತನ ಕಾರ್ಯಕಾರಿ ಸಮಿತಿ ರಚನೆ, ಅಧ್ಯಕ್ಷರಾಗಿ ಮಹಾಂತರೆಡ್ಡಿ ನೇಮಕ.
ಚಿತ್ರದುರ್ಗ, ನ. 26:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಂಘದ ಅಭಿವೃದ್ಧಿ ಮತ್ತು ಶ್ರೇಯೋಭಿವೃದ್ಧಿಗಾಗಿ ಎಲ್ಲ ಸದಸ್ಯರು, ಹಿರಿಯ ಹಾಗೂ ಕಿರಿಯ ನಿವೃತ್ತ ಪೊಲೀಸ್ ಅಧಿಕಾರಿಗಳು ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಸಹಕಾರ ನೀಡಬೇಕು ಎಂದು ಚಿತ್ರದುರ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಮಹಾಂತರೆಡ್ಡಿ ಮನವಿ ಮಾಡಿದರು.
ನಗರದ ಚಿತ್ರದುರ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಲ್ಯಾಣಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ನಂತರ ನೂತನವಾಗಿ ರಚನೆಯಾದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನದಲ್ಲಿರುವ ಮಾತ್ರಕ್ಕೆ ಯಾರೂ ದೊಡ್ಡವರಲ್ಲ, ಕೆಳಗೆ ಕುಳಿತುಕೊಂಡ ಮಾತ್ರಕ್ಕೆ ಯಾರೂ ಸಣ್ಣವರಲ್ಲ. ನಾವೆಲ್ಲರೂ ನಿವೃತ್ತ ಅಧಿಕಾರಿಗಳಾಗಿದ್ದು, ಸಂಘದ ಅಭಿವೃದ್ಧಿಯೇ ನಮ್ಮೆಲ್ಲರ ಮುಖ್ಯ ಉದ್ದೇಶವಾಗಬೇಕು ಎಂದರು.
ಸಂಘದ ಕಾರ್ಯಚಟುವಟಿಕೆಗಳನ್ನು ಉತ್ತಮವಾಗಿ ಮುನ್ನಡೆಸಲು ಹಾಗೂ ಅಭಿವೃದ್ಧಿಗೆ ಅಗತ್ಯವಾದ ನಿರ್ಧಾರಗಳನ್ನು ಕೈಗೊಳ್ಳಲು ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುವ ಎಲ್ಲ ಸದಸ್ಯರಿಗೂ ಸಾಕಷ್ಟು ಅನುಭವವಿದ್ದು, ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ಈ ಹಿಂದೆ ಸಂಘದ ಸಭೆಗಳಿಗೆ ಆಗಮಿಸಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಗೆ ನೀಡುತ್ತಿದ್ದ ಸಹಕಾರವನ್ನು ಮುಂದೆಯೂ ಮುಂದುವರಿಸಬೇಕು. ಹಿರಿಯ ಮತ್ತು ಕಿರಿಯ ನಿವೃತ್ತ ಅಧಿಕಾರಿಗಳು ಎಂಬ ಭೇದವಿಲ್ಲದೆ ಎಲ್ಲರೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಂಘದ ಪ್ರಗತಿಗಾಗಿ ಎಲ್ಲ ಸದಸ್ಯರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಮನವಿ ಮಾಡಿದರು.

ನೂತನ ಕಾರ್ಯಕಾರಿ ಸಮಿತಿ ರಚನೆ
ಚಿತ್ರದುರ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಕಾರ್ಯಕಾರಿ ಸಮಿತಿಗೆ ಗೌರವಾಧ್ಯಕ್ಷರಾಗಿ ನಿವೃತ್ತ ಡಿವೈಎಸ್ಪಿ ಭೀಮಾರೆಡ್ಡಿ ಹಾಗೂ ಎಸ್. ಬಸವರಾಜು ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಟಿ.ಎಚ್. ರಾಜಪ್ಪ ಮತ್ತು ಜಿ.ಎಸ್. ಜಯಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಡಿವೈಎಸ್ಪಿ ಯೂಸುಫ್, ಜಂಟಿ ಕಾರ್ಯದರ್ಶಿಯಾಗಿ ಪಿ. ನಾಗೇಂದ್ರಪ್ಪ, ಖಜಾಂಚಿಯಾಗಿ ಹನುಮಂತರೆಡ್ಡಿ, ಲೆಕ್ಕಾಧಿಕಾರಿಯಾಗಿ ಆರ್. ತಿಮ್ಮಣ್ಣ ಹಾಗೂ ಕಾನೂನು ಸಲಹೆಗಾರರಾಗಿ ವೀರಣ್ಣ ಅವರನ್ನು ನೇಮಕ ಮಾಡಲಾಗಿದೆ.
ನಿರ್ದೇಶಕರಾಗಿ ಎಸ್. ನಾಗರಾಜು, ಲಿಂಗಪ್ಪ, ಶಂಕರ್, ಪಿ. ನಾಗರಾಜು, ಜಿತೇಂದ್ರಪ್ಪ, ಟಿ. ಲಿಂಗಪ್ಪ, ವಿ.ಬಿ. ತಿಮ್ಮಾರೆಡ್ಡಿ, ಸಿ. ಮಹೇಶ್ವರಪ್ಪ, ಮಲ್ಲಿಕಾರ್ಜುನ, ಲಕ್ಷ್ಮೀನಾರಾಯಣ, ಜಯಪ್ಪ ಹಾಗೂ ಬಸವರಾಜು ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಕಾರ್ಯಕಾರಿ ಸಮಿತಿಯು ಸಂಘದ ಸದಸ್ಯರ ಹಿತಾಸಕ್ತಿ ಹಾಗೂ ಸಂಘದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು