ಸಿ.ಕೆ.ಪುರ ಸರ್ಕಾರಿ ಶಾಲೆ ಕಟ್ಟಡ ದುರಸ್ತಿ–ನೆಲಸಮಕ್ಕೆ ಪಪ್ಪೀಸ್ ಸ್ಟೂಡೆಂಟ್ ವಿಂಗ್ ಒತ್ತಾಯ: ಶಿಕ್ಷಣ ಇಲಾಖೆಗೆ ಮನವಿ.

ಚಿತ್ರದುರ್ಗ ನ. 25

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಸಿ.ಕೆ.ಪುರ ಸರ್ಕಾರಿ ಶಾಲೆಯ ಕಟ್ಟಡದ ಮೇಲ್ಚಾವಣಿ ಸಂಪೂರ್ಣವಾಗಿ ಹಾಳಾಗಿದ್ದು ಕೂಡಲೇ ದುರಸ್ತಿ ಮಾಡಬೇಕು ಹಾಗೂ ಕೊಠಡಿಗಳನ್ನು ನೆಲಸಮ ಮಾಡಬೇಕೆಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪಪ್ಪೀಸ್ ಸ್ಟೂಡೆಂಟ್ ವಿಂಗ್ ವತಿಯಿಂದ ಬುಧವಾರ ಮನವಿ ಮಾಡಿದ್ದಾರೆ.

ಸಿ.ಕೆಪುರ ಶಾಲೆಯ ಕಟ್ಟಡದ ಮೇಲ್ಚಾವಣಿ ಅತ್ಯಂತ ಹಳೆಯದಾಗಿದ್ದು, ಗೋಡೆಗಳ ಸೈಲಿಂಗ್ ಪ್ಲಾಸ್ಟಿಂಗ್ ಉದುರುತ್ತಿದ್ದು ಯಾವಾಗಾದರೂ ಅಪಘಾತ ಸಂಭವಿಸಬಹುದಾದ ಭಯದ ವಾತಾವರಣ ಸೃಷ್ಟಿಯಾಗಿದ್ದು ಕೂಡಲೇ ಸಂಬಂಧಪಟ್ಟ ಶಾಲಾ ಆಡಳಿತ ಅಧಿಕಾರಿಗಳು ಮುಂಭಾಗದ ಎರಡು ಕೊಠಡಿಗಳನ್ನು ಸಂಪೂರ್ಣ ವಾಗಿ ನೆಲಸಮಗೊಳಿಸಬೇಕು, ಶಾಲೆಯ ಸುರಕ್ಷತೆಗಾಗಿ ಮತ್ತು ಮಕ್ಕಳ ವಿದ್ಯಾಭ್ಯಾಸದ ನಿರಂತರತೆಗೆ ಕಟ್ಟಡವನ್ನು ಶೀಘ್ರದಲ್ಲಿ ದುರಸ್ತಿಗೊಳಿಸುವಂತೆ ಪಪ್ಪೀಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವಿ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಪಪ್ಪೀಸ್ ಸ್ಟೂಡೆಂಟ್ ವಿಂಗ್ ಉಪಾಧ್ಯಕ್ಷರಾದ ಸಂದೀಪ್, ಸಂಘಟನ ಕಾರ್ಯದರ್ಶಿ ಉದಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *