Daily Horoscope,13 September 2026: ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳು ಮತ್ತು ಪಂಚಾಂಗ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಈ ಭಾನುವಾರದಂದು ಶಕ್ತಿ ಪ್ರದರ್ಶನ, ಪದೋನ್ನತಿಯಲ್ಲಿ ಅಡ್ಡಿ, ಕಾಮಗಾರಿಯ ವರದಿ, ಉದ್ಯೋಗದಲ್ಲಿ ಹರಟೆಯಿಂದ ಕಾಲಹರಣ, ಕಾರ್ಯದ ಮರೆವು, ನಿಶ್ಚಿತ ಕಾರ್ಯಕ್ಕೆ ತಡೆ ಹಾಗೂ ವೇತನ ಕಡಿತದಂತಹ ವಿಶೇಷ ಫಲಗಳ ಹಿನ್ನೆಲೆಯಲ್ಲಿ ಇಂದಿನ ದ್ವಾದಶ ರಾಶಿಗಳ ಫಲಾಫಲಗಳು ಹೀಗಿವೆ:

ಇಂದಿನ ಪಂಚಾಂಗ ಮುಖ್ಯಾಂಶಗಳು:

ಶಾಲಿವಾಹನ ಶಕೆ: ೧೯೪೯ (ಪರಾಭವ ಸಂವತ್ಸರ)

ಅಯನ ಹಾಗೂ ಋತು: ದಕ್ಷಿಣಾಯನ, ವರ್ಷ ಋತು

ಮಾಸಗಳು: ಚಾಂದ್ರಮಾಸ – ಭಾದ್ರಪದ, ಸೌರ ಮಾಸ – ಸಿಂಹ

ಪಕ್ಷ ಹಾಗೂ ತಿಥಿ: ಶುಕ್ಲ ಪಕ್ಷ, ದ್ವಿತೀಯಾ ತಿಥಿ

ವಾರ ಹಾಗೂ ನಕ್ಷತ್ರ: ಭಾನುವಾರ, ಮಹಾನಕ್ಷತ್ರ – ಪೂರ್ವಾಫಲ್ಗುಣೀ, ನಿತ್ಯನಕ್ಷತ್ರ – ಹಸ್ತಾ

ಯೋಗ ಹಾಗೂ ಕರಣ: ಶುಕ್ಲ ಯೋಗ, ಕೌಲವ ಕರಣ

ಸೂರ್ಯೋದಯ ಹಾಗೂ ಸೂರ್ಯಾಸ್ತ: ಬೆಳಗ್ಗೆ 06:09 – ಸಂಜೆ 06:21

ಅಶುಭ ಕಾಲಗಳು:

  • ರಾಹು ಕಾಲ: 16:50 – 18:21
  • ಯಮಗಂಡ ಕಾಲ: 12:15 – 13:42
  • ಗುಳಿಕ ಕಾಲ: 15:18 – 16:50

ಮೇಷ ರಾಶಿ

ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಿಗಬಹುದು. ವಿವೇಚನಾತ್ಮಕ ವಿಚಾರಕ್ಕೆ ಸಮಯವನ್ನು ಪಡೆಯುವುದು ಒಳ್ಳೆಯದು. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಪ್ರಸಿದ್ಧಿಯು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು, ವಿನಮ್ರವಾಗಿ ಅದನ್ನು ಸ್ವೀಕರಿಸುವ ಸ್ವಭಾವ ಇರಲಿ.

ವೃಷಭ ರಾಶಿ

ಸಮಾರಂಭಗಳಲ್ಲಿ ನೀವು ಹೇಳಿದ ಮಾತು ವಿವಾದವಾಗಬಹುದು. ನಿಮ್ಮನ್ನು ಯಾರೂ ಸೇರಿಸಿಕೊಳ್ಳದಿದ್ದರೆ ಬೇಸರವಿಲ್ಲ. ಸ್ನೇಹಿತರನ್ನೂ ನಿಮ್ಮಿಂದ ದೂರವಿಡುವಿರಿ. ಅಮೂಲ್ಯ ವಸ್ತುವನ್ನು ಕೊಟ್ಟು ಆರ್ಥಿಕ ಸಂಕಷ್ಟವನ್ನು ತಂದುಕೊಳ್ಳುವಿರಿ. ನಿಮ್ಮ ನೌಕರರನ್ನು ಬಹಳ ಕೆಳಮಟ್ಟದಲ್ಲಿ ನೋಡುವಿರಿ. ಯಾವುದನ್ನೂ ಪೂರ್ವದಲ್ಲಿ ಖಚಿತಪಡಿಸಿಕೊಳ್ಳದೇ ಮುಂದುವರಿಯುವುದು ಬೇಡ.

ಮಿಥುನ ರಾಶಿ

ಮೇಲಧಿಕಾರಿಗಳ ಜೊತೆ ನಿಮಗೆ ಆಪ್ತತೆ ಇರಲಿದೆ. ಸಂಗಾತಿಯ ಮನಃಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವಿರಿ. ರಾಜಕಾರಣಿಗಳ ಇಬ್ಬಗೆಯ ವರ್ತನೆಯು ಬೇಸರ ತರಿಸಬಹುದು. ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಕಛೇರಿಯಲ್ಲಿ ನಿಮ್ಮ ಮಾತನ್ನು ಪಾಲಿಸುವರು. ವಿದೇಶೀ ವಿನಿಮಯದಿಂದ ಲಾಭವಾಗಲಿದೆ. ನಿಮ್ಮ ಅನುಪಸ್ಥಿತಿಯಲ್ಲಿ ಕೆಲಸವನ್ನು ಬೇರೆಯವರು ಮಾಡುವರು.

ಕರ್ಕಾಟಕ ರಾಶಿ

ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ನಿಮ್ಮ ಕಾರ್ಯದ ಉದ್ದೇಶವೇ ಮರೆತುಹೋಗಬಹುದು. ಇಂದು ನೋವು ಅತಿಯಾಗಬಹುದು. ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯಲು ಆಗದು. ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ. ವೈಯಕ್ತಿಕ ನಿಲುವನ್ನು ಯಾರ ಮೇಲೂ ಹೇರಿಕೆ ಮಾಡಬೇಡಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ.

ಸಿಂಹ ರಾಶಿ

ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ವಸ್ತುವನ್ನು ಕಳೆದುಕೊಂಡು ಚಿಂತಿತರಾಗುವಿರಿ. ಸಿದ್ಧತೆ ಇಲ್ಲದೇ ಪ್ರಯತ್ನಿಸಿ ಹಣದ ಅಪಾಯಕ್ಕೆ ಬೀಳುವಿರಿ. ಪಕ್ಕದವರು ಎಂತಹವರು ಎನ್ನುವುದನ್ನು ನೋಡಿ ಮಾತನಾಡಿ. ಅನುಮಾನಗಳ ಸುತ್ತ ಇರುವ ನಿಮ್ಮ ಮನಸ್ಸಿಗೆ ಸರಿಯಾದ ಮಾಹಿತಿ ಸಿಗಲಿದೆ. ಅಹಂಕಾರವನ್ನು ಎಲ್ಲರೆದುರು ಪ್ರದರ್ಶನ ಮಾಡಲು ಹೋಗುವುದು ಬೇಡ.

ಕನ್ಯಾ ರಾಶಿ

ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಂಗಾತಿಯ ಪರವಾಗಿ ನೀವು ಮಾತನಾಡುವುದು ಅಚ್ಚರಿಯಾದೀತು. ನಿಮ್ಮವರಿಗೆ ಆದ ಅಪಮಾನದಿಂದ ನೀವು ಕೋಪಗೊಳ್ಳುವಿರಿ. ನಿಮ್ಮ ಸಂಕುಚಿತ ಬುದ್ಧಿಯಿಂದ ಎಷ್ಟೇ ಆಲೋಚಿಸಿದರೂ ಸಮಸ್ಯೆಗೆ ಪರಿಹಾರ ಸಿಗದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ನಿಮ್ಮ ಮೇಲೆ ಯಾರಾದರೂ ಆರೋಪವನ್ನು ಮಾಡಬಹುದು.

ತುಲಾ ರಾಶಿ

ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಸೂಕ್ತ ಮಾರ್ಗವನ್ನು ಹುಡುಕುವುದು. ಒತ್ತಾಯ ಪೂರ್ವಕವಾಗಿ ಆಹಾರವನ್ನು ಸೇವಿಸಿ ಆರೋಗ್ಯ ಕೆಡಬಹುದು. ಸಣ್ಣ ಹೆಜ್ಜೆಯೂ ದೊಡ್ಡ ಗುರಿಗೆ ಕಾರಣವಾಗುವುದು. ಮನೆಯಲ್ಲಿ ಅನ್ಯರಿದ್ದರೂ ನೀವೇ ಪತ್ರವ್ಯವಹಾರವನ್ನು ಮಾಡಬೇಕಾಗುವುದು. ನಿಮ್ಮ ಸಹಜ ವರ್ತನೆಯೂ ತೋರಿಕೆಯಂತೆ ಕಾಣಬಹುದು. ತಾಯಿಯ ಜೊತೆ ಕಲಹವಾಡಿ ಅವರನ್ನು ಬೇಸರಿಸುವಿರಿ.

ವೃಶ್ಚಿಕ ರಾಶಿ

ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ಸಂಕಷ್ಟಗಳ ನಿವಾರಣೆಗೆ ದೈವದ ಮೊರೆ ಹೋಗುವಿರಿ. ಅಂತಸ್ತನ್ನು ತೋರಿಸಿದರೆ ನಿಮ್ಮನ್ನು ದೊಡ್ಡವರನ್ನಾಗಿ ಮಾಡಲಾರರು. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಉದ್ಯಮದ ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದ ಒತ್ತಡವನ್ನು ತಗ್ಗಿಸಿಕೊಳ್ಳಲು ಕೆಲಸವನ್ನು ಹಂಚುವುದು ಉತ್ತಮ.

ಧನು ರಾಶಿ

ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಹಿಂಸಾತ್ಮಕವಾಗಿ ಹೋಗದೇ ಸಮಾಧಾನ ಚಿತ್ತದಿಂದ ಸಮಸ್ಯೆಗೆ ಸರಿಯಾದ ಮಾರ್ಗವನ್ನು ಕಂಡುಕೊಳ್ಳುವಿರಿ. ಇಂದು ಅಸಾಧ್ಯ ಕಾರ್ಯದಲ್ಲೂ ದುಸ್ಸಾಹಸ ಮಾಡುವುದು ಬೇಡ. ಸಂಗಾತಿಯ ದುರಭ್ಯಾಸದಿಂದ ನಿಮ್ಮ ಮೇಲೂ ದುಷ್ಪರಿಣಾಮ ಬೀರುವುದು, ಸಕಾರಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಗಮನವಿರಲಿ.

ಮಕರ ರಾಶಿ

ನಿಮ್ಮದನ್ನಾಗಿ ಮಾಡಿಕೊಂಡಿದ್ದ ಸ್ವಲ್ಪ ಭೂಮಿಯು ಪರರ ಪಾಲಾಗಬಹುದು. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಶ್ರಮಪಡುವಿರಿ. ಮನೋರಂಜನೆಯನ್ನು ಪಡೆಯಲು ಪೂರಕ ವಾತಾವರಣವನ್ನು ಹುಡುಕುವಿರಿ. ಹಿತಶತ್ರುಗಳನ್ನು ದೂರವಿಟ್ಟು ಕೆಲಸವನ್ನು ಸಾಧಿಸಿಕೊಳ್ಳಬೇಕಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕೆಲಸಗಳು ಗೌರವವನ್ನು ತಂದುಕೊಡುವುವು.

ಕುಂಭ ರಾಶಿ

ಪುಣ್ಯಕ್ಷೇತ್ರಗಳ ದರ್ಶನಭಾಗ್ಯವು ಸಿಗಲಿದೆ. ಆರೋಗ್ಯದ ಸಮಸ್ಯೆಯು ದೂರವಾಗಲು ಯೋಗ್ಯವಾದ ಆಹಾರವನ್ನು ಸೇವಿಸಿ. ಬಂಧುಗಳ ಭೇಟಿಯಿಂದ ಉತ್ಸಾಹವಿರಲಿದೆ. ಅನೇಕ ಜನರ ನಡುವೆ ನೀವು ಮುಂದಡಿ ಇಡುವಿರಿ. ಕಾರ್ಯದಲ್ಲಿ ಮನಸ್ಸು ದುರ್ಬಲವಾದಂತೆ ತೋರುವುದು. ನೀವು ಇಂದು ಕಛೇರಿಯ ಚಿಂತೆಯಲ್ಲಿ ಇರುವ ಕಾರಣ ಎಲ್ಲರ ಮೇಲೂ ಸಿಟ್ಟುಗೊಳ್ಳುವಿರಿ. ನಿಮ್ಮ ಸ್ತುತಿಯನ್ನು ನೀವೇ ಆದಷ್ಟು ಕಡಿಮೆ ಮಾಡಿಕೊಳ್ಳಿ.

ಮೀನ ರಾಶಿ

ಕುಟುಂಬವು ನಿಮ್ಮ ಮಾರ್ಗದರ್ಶನವನ್ನು ಅಪೇಕ್ಷಿಸುತ್ತದೆ. ಸಭೆಗೆ ಅತಿಥಿಯಾಗಿ ಭಾಗವಹಿಸುವಿರಿ. ಆಸ್ತಿ ಹಂಚಿಕೆಯ ವಿಚಾರವು ಇಂದು ಮುನ್ನೆಲೆಗೆ ಬರಬಹುದು. ನಿಮ್ಮ ಕೆಲಸಗಳಿಗೆ ತಾತ್ಕಾಲಿಕ ತೊಂದರೆಯು ಬರಬಹುದು. ನಿಮ್ಮವರ ಮೇಲಿದ್ದ ನಿಮ್ಮ ಅಭಿಪ್ರಾಯವು ಬದಲಾಗಬಹುದು. ನಿಮ್ಮ ನಿರೀಕ್ಷೆಯು ಇಂದು ಕಡಿಮೆಯಾಗಲಿದೆ. ನಿಮ್ಮವರ ಪ್ರೀತಿಯನ್ನೂ ನೀವು ಕಳೆದುಕೊಳ್ಳುವಿರಿ.

ನಿಮ್ಮ ಇಂದಿನ ಕಾರ್ಯಗಳು ಯಶಸ್ವಿಯಾಗಲಿ, ಶುಭದಿನ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *