Daily Horoscope,14 July 2026: ದ್ವಾದಶ ರಾಶಿಗಳ ಇಂದಿನ ಫಲಾಫಲಗಳು ಹೇಗಿವೆ?

ಜುಲೈ 14, 2026ರ ದೈನಂದಿನ ಜಾತಕ ಇಲ್ಲಿದೆ. ಗ್ರಹಗಳ ಸ್ಥಾನ ಮತ್ತು ನಕ್ಷತ್ರಗಳ ಚಲನೆಯ ಆಧಾರದ ಮೇಲೆ ದ್ವಾದಶ ರಾಶಿಗಳ ಪ್ರೇಮ ಜೀವನ, ವೃತ್ತಿ, ಹಣಕಾಸು ಮತ್ತು ವೈಯಕ್ತಿಕ ಯೋಗಕ್ಷೇಮದ ನಿಖರ ಒಳನೋಟಗಳನ್ನು ಇಲ್ಲಿ ನೀಡಲಾಗಿದೆ. ಇಂದಿನ ದಿನವು ಕೆಲವರಿಗೆ ಶುಭವಾರ್ತೆ ತಂದರೆ, ಇನ್ನು ಕೆಲವರಿಗೆ ಎಚ್ಚರಿಕೆಯ ಹೆಜ್ಜೆ ಇಡುವ ಸೂಚನೆ ನೀಡುತ್ತಿದೆ.

ಇಂದಿನ ಪಂಚಾಂಗ

  • ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ಸಂವತ್ಸರ
  • ಆಯನ ಹಾಗೂ ಋತು: ಉತ್ತರಾಯಣ, ಗ್ರೀಷ್ಮ ಋತು
  • ಮಾಸ ಹಾಗೂ ಪಕ್ಷ: ನಿಜ ಜ್ಯೇಷ್ಠ ಮಾಸ, ಕೃಷ್ಣ ಪಕ್ಷ
  • ತಿಥಿ ಹಾಗೂ ವಾರ: ಅಮಾವಾಸ್ಯೆ, ಮಂಗಳವಾರ
  • ನಕ್ಷತ್ರ: ಪುನರ್ವಸು (ನಿತ್ಯ ನಕ್ಷತ್ರ ಹಾಗೂ ಮಹಾನಕ್ಷತ್ರ)
  • ಯೋಗ ಹಾಗೂ ಕರಣ: ಧ್ರುವ ಯೋಗ, ಶಕುನಿ ಕರಣ
  • ಸೂರ್ಯೋದಯ / ಸೂರ್ಯಾಸ್ತ: ಬೆಳಿಗ್ಗೆ 06:01 / ಸಂಜೆ 06:49
  • ದಿನದ ವಿಶೇಷ: ಶತ್ರುಗಳ ಮೇಲೆ ಜಯ, ದಿನಾಂತ್ಯದಲ್ಲಿ ಶುಭ ಸುದ್ದಿ, ಕಾರ್ಯಸಾಧನೆಗೆ ಯತ್ನ, ಮುಂಗಡ ಪಾವತಿ, ಹಾಗೂ ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ.

ಶುಭಾಶುಭ ಕಾಲಗಳು:

  • ರಾಹು ಕಾಲ: 03:37 PM ರಿಂದ 05:13 PM
  • ಯಮಗಂಡ ಕಾಲ: 09:14 AM ರಿಂದ 10:50 AM
  • ಗುಳಿಕ ಕಾಲ: 12:25 PM ರಿಂದ 02:01 PM

ದ್ವಾದಶ ರಾಶಿಗಳ ಫಲಾಫಲಗಳು

ಮೇಷ ರಾಶಿ ಪ್ರೀತಿಯಿಂದ ಸಿಗುವ ಉಡುಗೊರೆಗಳನ್ನು ಸಂತೋಷದಿಂದ ಸ್ವೀಕರಿಸಿ. ಇಂದು ಆಲಂಕಾರಿಕ ವಸ್ತುಗಳ ಖರೀದಿಗೆ ಹೆಚ್ಚಿನ ಒಲವು ತೋರುವಿರಿ. ಆಯ್ಕೆಗಳ ವಿಚಾರದಲ್ಲಿ ಕೊಂಚ ಗೊಂದಲ ಉಂಟಾಗಬಹುದು. ವಿರೋಧಿಗಳ ಹಿನ್ನಡೆಯು ನಿಮಗೆ ನೆಮ್ಮದಿ ತರಲಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇರುವುದರಿಂದ ದುರಭ್ಯಾಸಗಳಿಂದ ದೂರವಿರಿ. ಸ್ನೇಹಿತರ ವಿವಾಹ ಅಥವಾ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ವೃಷಭ ರಾಶಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಆಲೋಚನೆಗಳು ಸ್ಪಷ್ಟವಾಗಿರಲಿವೆ. ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಬೇಡ. ವಿದೇಶಿ ಪ್ರಯಾಣದ ಆಕಾಂಕ್ಷಿಗಳಿಗೆ ಸಿದ್ಧತೆ ನಡೆಸಲು ಇದು ಸಕಾಲ. ದಿನದಂತ್ಯಕ್ಕೆ ಅತ್ಯಂತ ಸಂತಸದ ವಾತಾವರಣ ಇರಲಿದೆಯಾದರೂ, ಸಂಗಾತಿಯ ವರ್ತನೆ ಕ್ಷಣಿಕ ಬೇಸರ ತರಿಸಬಹುದು.

ಮಿಥುನ ರಾಶಿ ಸಂಗಾತಿಯೊಂದಿಗೆ ಅತ್ಯುತ್ತಮ ಸಮಯ ಕಳೆಯುವಿರಿ. ನಿಮ್ಮ ಸಾಧನೆಗೆ ತಕ್ಕ ಮನ್ನಣೆ ಸಿಗಲಿದ್ದು, ಕುಟುಂಬದ ಗೌರವ ಹೆಚ್ಚಲಿದೆ. ಸಣ್ಣ ಪ್ರಮಾಣದ ಆದಾಯವನ್ನೂ ನಿರ್ಲಕ್ಷಿಸಬೇಡಿ, ಇಂದಿನ ನಿಮ್ಮ ಉಳಿತಾಯ ಮುಂದಕ್ಕೆ ವರದಾನವಾಗಲಿದೆ. ಹೊಸ ಪರಿಚಯಸ್ಥರೊಂದಿಗೆ ಅತಿಯಾದಲು ಸಲುಗೆ ಬೆಳೆಸುವುದು ಬೇಡ.

ಕರ್ಕಾಟಕ ರಾಶಿ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ತರುವ ಮನಸ್ಸಾಗುವುದು. ಗೃಹ ಕೃತ್ಯಗಳಲ್ಲಿ ಅಷ್ಟಾಗಿ ಆಸಕ್ತಿ ಇರುವುದಿಲ್ಲ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದರೂ ನಿಮ್ಮಲ್ಲಿ ನಿರಾಸಕ್ತಿ ಕಾಡಬಹುದು. ಆರ್ಥಿಕ ವಿಚಾರಗಳು ಮತ್ತು ಸಾಲದ ಬಗ್ಗೆ ಚಿಂತೆ ಮೂಡಲಿದೆ. ರಾಜಕೀಯ ಕ್ಷೇತ್ರದ ಗಣ್ಯರಿಗೆ ಇಂದು ಶುಭ ದಿನ. ಭಾವನಾತ್ಮಕ ನಿರ್ಧಾರಗಳ ಬಗ್ಗೆ ಎಚ್ಚರವಿರಲಿ.

ಸಿಂಹ ರಾಶಿ ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲ ಖಂಡಿತ ಒಲಿಯಲಿದೆ. ಸಂಗಾತಿಯ ಕಡೆಯಿಂದ ಶುಭ ಸಮಾಚಾರ ಕೇಳುವಿರಿ. ಕೋಪಕ್ಕಿಂತ ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ವಾಹನ ಚಾಲನೆಯಲ್ಲಿ ಜಾಗರೂಕತೆ ಅಗತ್ಯ; ಸಣ್ಣಪುಟ್ಟ ಅಪಾಯಗಳ ಸಾಧ್ಯತೆ ಇದೆ. ಅಪರಿಚಿತರಿಗೆ ಸಹಾಯ ಮಾಡುವಾಗ ಅವರು ಅದನ್ನು ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರ ವಹಿಸಿ.

ಕನ್ಯಾ ರಾಶಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಅತೀ ಅಗತ್ಯ. ಕಷ್ಟಗಳು ಎದುರಾದರೂ ಅವೇ ನಿಮ್ಮ ಯಶಸ್ಸಿನ ಮೆಟ್ಟಿಲಾಗಲಿವೆ. ಕಾರ್ಯಕ್ಷೇತ್ರದಲ್ಲಿನ ತಪ್ಪುಗಳನ್ನು ನೀವೇ ಸರಿಪಡಿಸಿಕೊಂಡು ಮುನ್ನಡೆಯುವಿರಿ. ಪ್ರೇಮ ವಿಚಾರಗಳಲ್ಲಿ ಕೊಂಚ ಗೊಂದಲವಿರಲಿದೆ. ಇತರರನ್ನು ಕುರುಡಾಗಿ ಅನುಕರಿಸಲು ಹೋಗಿ ತೊಂದರೆಗೆ ಸಿಲುಕದಿರಿ. ಸಂಬಂಧಿಕರ ನೆರವು ಪಡೆದು ನಿರಾಳರಾಗಿರಿ.

ತುಲಾ ರಾಶಿ ನಿಮ್ಮನ್ನು ಹುಡುಕಿಕೊಂಡು ಆಪ್ತರು ಬರಲಿದ್ದಾರೆ. ಕಚೇರಿಯ ಕೆಲಸಗಳು ನೀವು ಅಂದುಕೊಂಡಂತೆಯೇ ಸುಗಮವಾಗಿ ಸಾಗಲಿವೆ. ಮನೆಯ ಕೆಲಸಗಳು ಹೆಚ್ಚಾಗಿ ಒತ್ತಡ ತರಬಹುದು. ಹೊಸ ವಾಹನ ಖರೀದಿಯ ಯೋಗವಿದ್ದು, ಇದಕ್ಕಾಗಿ ಪ್ರಯಾಣ ಬೆಳೆಸುವಿರಿ. ವಿರೋಧಿಗಳ ತಂತ್ರಗಳನ್ನು ಅರಿತು ಸೂಕ್ತ ಎಚ್ಚರಿಕೆ ವಹಿಸುವಿರಿ. ಅನಿರೀಕ್ಷಿತ ಲಾಭದಿಂದ ದಿನವಿಡೀ ಸಂತೋಷದಿಂದ ಇರುವಿರಿ.

ವೃಶ್ಚಿಕ ರಾಶಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಅತ್ಯಂತ ಉಪಯುಕ್ತ ಮಾಹಿತಿ ಲಭ್ಯವಾಗಲಿದೆ. ವೈಯಕ್ತಿಕ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಸುತ್ತಲಿನ ವಾತಾವರಣವು ಕೊಂಚ ಕಿರಿಕಿರಿ ತರಿಸಬಹುದು. ಅಂದುಕೊಂಡ ಕಾರ್ಯಗಳು ಪೂರ್ಣಗೊಂಡರೂ, ಹೊಸ ಕೆಲಸಗಳಿಗೆ ಕೈಹಾಕಲು ಹಿಂಜರಿಯುವಿರಿ. ಕಷ್ಟವಾದರೂ ಆರ್ಥಿಕ ಶಿಸ್ತು ಕಾಪಾಡಿಕೊಂಡು ಸಾಲ ಮರುಪಾವತಿಗೆ ಗಮನ ಹರಿಸಿ.

ಧನು ರಾಶಿ ಹೊರಗಿನ ಓಡಾಟಗಳಿಗೆ ವಿರಾಮ ನೀಡಿ, ಮನೆಯಲ್ಲಿಯೇ ನೆಮ್ಮದಿ ಕಂಡುಕೊಳ್ಳುವಿರಿ. ಇತರರ ಯೋಜನೆಗಳು ನಿಮ್ಮ ಪ್ರಸಿದ್ಧಿಗೆ ಕಾರಣವಾಗಬಹುದು. ಭವಿಷ್ಯದ ಸಂಗಾತಿಯನ್ನು ಕುಟುಂಬಕ್ಕೆ ಪರಿಚಯಿಸಲು ಸಕಾಲ. ಆರ್ಥಿಕ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುವಿರಿ. ನೀವು ನೀಡಿದ್ದ ಹಣವನ್ನು ಮರಳಿ ಕೇಳುವಾಗ ವಾಗ್ವಾದ ನಡೆಯದಂತೆ ಎಚ್ಚರ ವಹಿಸಿ.

ಮಕರ ರಾಶಿ ಸಂಗಾತಿಯಿಂದ ನಿರೀಕ್ಷಿತ ಸ್ಪಂದನೆ ಸಿಗದೆ ಬೇಸರ ಮೂಡಬಹುದು. ಮಾಧ್ಯಮ ಮತ್ತು ಪ್ರಚಾರ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಒದಗಿಬರಲಿವೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳಿತು. ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದ್ದು, ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಬೆಲೆಬಾಳುವ ವಸ್ತುಗಳ ಬಗ್ಗೆ ನಿಗಾ ಇರಲಿ.

ಕುಂಭ ರಾಶಿ ಕಾರ್ಯಕ್ಷೇತ್ರದಿಂದ ಶುಭ ಸುದ್ದಿಗಳು ಬರಲಿವೆ. ಭೂಮಿ ಹಾಗೂ ಆಸ್ತಿ ವಿಚಾರಗಳಲ್ಲಿ ಲಾಭ ಪಡೆಯುವಿರಿ. ಇತರರ ಮಾತುಗಳನ್ನು ಆಲಿಸಿದರೂ, ನಿಮ್ಮ ಸ್ವಂತ ಆಲೋಚನೆ ಮತ್ತು ನಿರ್ಧಾರಗಳಿಗೆ ಬದ್ಧರಾಗಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಾಗದಂತೆ ಎಚ್ಚರಿಕೆ ವಹಿಸಿ. ಸಂಗಾತಿಯ ಅತಿಯಾದ ನಿರೀಕ್ಷೆಗಳನ್ನು ನಾಜೂಕಾಗಿ ನಿಭಾಯಿಸಿ.

ಮೀನ ರಾಶಿ ನಿಮ್ಮ ಕಷ್ಟಗಳನ್ನು ನೀವೇ ಬಗೆಹರಿಸಿಕೊಳ್ಳಲು ಇಚ್ಛಿಸುವಿರಿ. ಕೆಲಸದ ಒತ್ತಡವಿದ್ದರೂ ಜವಾಬ್ದಾರಿಯಿಂದ ಪೂರ್ಣಗೊಳಿಸುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು. ಹೂಡಿಕೆ ಮಾಡುವ ಮುನ್ನ ನುರಿತರ ಸಲಹೆ ಪಡೆಯಿರಿ. ಬಹಳ ದಿನಗಳ ನಂತರ ಅಪರೂಪದ ಬಂಧುಗಳ ಭೇಟಿಯಾಗಲಿದೆ. ನಿಮ್ಮ ಮುಖ್ಯ ಕೆಲಸಗಳನ್ನು ಬಿಟ್ಟು ಇತರರ ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಡಿ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: samagrsuddi.co.in

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *