Cricket: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಮೇಲುಗೈ ಸಿಕ್ಕಿತ್ತು. 89 ರನ್‌ಗೆ ಗುಜರಾತ್ ಟೈಟನ್ಸ್ ಆಲೌಟ್ ಆದ್ರು. ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ್ದ ಡೆಲ್ಲಿ ಗೆದ್ದು ಬೀಗಿದೆ.
![](https://samagrasuddi.co.in/wp-content/uploads/2024/04/image-159-1024x576.png)
ಇಂದಿನ ಐಪಿಎಲ್ ಪಂದ್ಯ ಗುಜರಾತ್ ಟೈಟಾನ್ಸ್ (Gujarat Titans) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Dealhi Capitals) ನಡುವೆ ನಡೆಯುತ್ತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium) ಈ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಪ್ರಸಕ್ತ ಸೀಸನ್ನಲ್ಲಿ ಶುಭ್ಮನ್ ಗಿಲ್ (Shubaman Gill) ನೇತೃತ್ವದ ಗುಜರಾತ್ ತಂಡ ಇದುವರೆಗೆ ಮೂರು ಪಂದ್ಯಗಳನ್ನು ಗೆದ್ದು ಮೂರರಲ್ಲಿ ಸೋತಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇತ್ತ ಲೀಗ್ನಲ್ಲಿ ಕೇವಲ 2 ಪಂದ್ಯಗಳಲ್ಲಿ ಗೆದ್ದು, ನಾಲ್ಕು ಪಂದ್ಯಗಳಲ್ಲಿ ಸೋತಿರುವ ರಿಷಬ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಇನ್ನೂ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಮೇಲುಗೈ ಸಿಕ್ಕಿತ್ತು. 89 ರನ್‌ಗೆ ಗುಜರಾತ್ ಟೈಟನ್ಸ್ ಆಲೌಟ್ ಆದ್ರು. ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ್ದ ಡೆಲ್ಲಿ ಗೆದ್ದು ಬೀಗಿದೆ.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಜಯ!
ಕಡಿಮೆ ಟಾರ್ಗೆಟ್ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೂ ಆರಂಭಿಕ ಆಘಾತ ಎದುರಾಯ್ತು. 25 ರನ್‌ಗಳಿಸಿದ್ದಾಗ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಔಟಾದ್ರು. ಇನ್ನೂ ಪೃಥ್ವಿ ಶಾ ಕೂಡ ಕೇವಲ 7 ರನ್‌ಗಳಿಸಿ ಔಟಾದ್ರು . ಇವರ ನಂತ್ರ ಕೊಂಚ ಮಟ್ಟಿಗೆ ಅಬ್ಬರಿಸುತ್ತಿದ್ದ ಪೊರೇಲ್ 18 ರನ್‌ಗಳಿಸಿ ಔಟಾದ್ರು. ಹೋಪ್ ಕೂಡ 19 ರನ್‌ಗಳಿಸಿ ಔಟಾದ್ರು. ಇದು ಖಂಡಿತ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಜಯ ಅಂದ್ರೆ ತಪ್ಪಾಗಲ್ಲ.ಪಂತ್ ಹಾಗೂ ಸುಮೀತ್ ಬಂದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ತಂದುಕೊಟ್ಟರು. 8.5 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಗುಜರಾತ್‌ಗೆ ಕೈ ಕೊಟ್ಟ ಬ್ಯಾಟರ್ಸ್!
ಗುಜರಾತ್ ತಂಡದ ನಾಯಕ ಗಿಲ್‌ನ ಇಶಾಂತ್ ಶರ್ಮಾ ಔಟ್ ಮಾಡಿದ್ದಾರೆ.11 ರನ್‌ಗಳಿಗೆ ಗುಜರಾತ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದೆ. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಎಸೆತದಲ್ಲಿ ಪೃಥ್ವಿ ಶಾಗೆ ಕ್ಯಾಚ್ ನೀಡಿ ಗಿಲ್ ಔಟಾದರು. ಸಹಾ ಕೂಡ ಕೇವಲ 2 ರನ್‌ಗಳಿಸಿ ಔಟಾದ್ರು. ಇವರ ಬಳಿಕ ಸಾಯಿ ಸುದರ್ಶನ್ 12 ರನ್‌ಗಳಿಸಿ ತಮ್ಮ ಇನ್ನಿಂಗ್ಸ್ ಮುಗಿಸಿದ್ರು.
ಇನ್ನೂ ಈ ಪಂದ್ಯದಿಂದ ಕಮ್‌ಬ್ಯಾಕ್ ಮಾಡಿದ್ದ ಡೇವಿಡ್ ಮಿಲ್ಲರ್ ಕೂಡ ನಿರಾಸೆ ಮೂಡಿಸಿದ್ರು. 2 ರನ್‌ಗಳಿಸಿ ಡೇವಿಡ್ ಮಿಲ್ಲರ್ ಔಟಾದರು. ಪವರ್‌ಪ್ಲೇನಲ್ಲಿ ಗುಜರಾತ್ 32 ರನ್‌ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಳ್ತು.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಸ್ಪೆನ್ಸರ್ ಜಾನ್ಸನ್, ಸಂದೀಪ್ ವಾರಿಯರ್.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಟ್ರಿಸ್ಟಾನ್ ಸ್ಟಬ್ಸ್, ಶಾಯ್ ಹೋಪ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1