Daily Horoscope, September 28: ಮೇಷದಿಂದ ಮೀನ ರಾಶಿಯವರೆಗೆ ಇಂದಿನ ರಾಶಿ ಫಲ ಹೇಗಿದೆ?

ಸೋಮವಾರವಾದ ಇಂದು (ಸೆಪ್ಟೆಂಬರ್ 28, 2026) ಚಾಂದ್ರಮಾನ ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿ ಹಾಗೂ ಅಶ್ವಿನೀ ನಕ್ಷತ್ರದ ಸಂಚಾರವಿದೆ. ಇಂದಿನ ದಿನ ಹಲವು ರಾಶಿಗಳವರಿಗೆ ವಿಶೇಷ ಅನುಭವಗಳು, ಹೊಸ ಅವಕಾಶಗಳು ಹಾಗೂ ಕೆಲವು ಸವಾಲುಗಳು ಎದುರಾಗಲಿವೆ. ಮೇಷ ರಾಡಿಯಿಂದ ಮೀನ ರಾಶಿಯವರೆಗೆ ಇಂದಿನ ಸಂಪೂರ್ಣ ದಿನ ಭವಿಷ್ಯ ಇಲ್ಲಿದೆ.

ಇಂದಿನ ಪಂಚಾಂಗ ವಿಶೇಷ

  • ಶಾಲಿವಾಹನ ಶಕೆ: ೧೯೪೯ (ಪರಾಭವ ಸಂವತ್ಸರ)
  • ಅಯನ ಹಾಗೂ ಋತು: ದಕ್ಷಿಣಾಯನ, ವರ್ಷ ಋತು
  • ಮಾಸ ಹಾಗೂ ಪಕ್ಷ: ಭಾದ್ರಪದ ಮಾಸ, ಕೃಷ್ಣ ಪಕ್ಷ
  • ತಿಥಿ ಹಾಗೂ ವಾರ: ದ್ವಿತೀಯಾ ತಿಥಿ, ಸೋಮವಾರ
  • ನಕ್ಷತ್ರ ಹಾಗೂ ಯೋಗ: ಅಶ್ವಿನೀ ನಕ್ಷತ್ರ, ಧ್ರುವ ಯೋಗ
  • ಕರಣ ಹಾಗೂ ರಾಹುಕಾಲ: ಗರಜ ಕರಣ, ರಾಹುಕಾಲ ಬೆಳಿಗ್ಗೆ 07:40 ರಿಂದ 09:10 ರವರೆಗೆ

ರಾಶಿವಾರು ಫಲಗಳು

  • ಮೇಷ ರಾಶಿ: ಸ್ನೇಹಿತರ ಮೇಲಿನ ನಂಬಿಕೆಯಿಂದ ಹಣ ಕಳೆದುಕೊಳ್ಳುವ ಸಂಭವವಿದೆ. ನೂತನ ವಸ್ತ್ರ ಪ್ರಾಪ್ತಿ ಹಾಗೂ ಉದ್ಯೋಗದಲ್ಲಿ ಬದಲಾವಣೆಯ ಬಯಕೆ ಮೂಡಲಿದೆ. ಹಣಕಾಸಿನ ಹರಿವು ತೃಪ್ತಿಕರವಾಗಿದ್ದರೂ, ಕೆಲಸದೊತ್ತಡ ಅಧಿಕವಾಗಿರಲಿದೆ.
  • ವೃಷಭ ರಾಶಿ: ಅಪರೂಪದ ವಸ್ತುಗಳ ಲಾಭ ಹಾಗೂ ಕುಟುಂಬದೊಂದಿಗೆ ನೆಮ್ಮದಿಯ ಸಮಯ ಕಳೆಯುವಿರಿ. ಗಣ್ಯರ ವ್ಯಕ್ತಿತ್ವ ಪ್ರಭಾವ ಬೀರಲಿದೆ. ಖರ್ಚು ನಿಯಂತ್ರಣಕ್ಕೆ ಬರಲಿದ್ದು, ಸಿದ್ಧಾಂತಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು.
  • ಮಿಥುನ ರಾಶಿ: ಶತ್ರುಗಳ ಕಾಟ ತಡೆಯಲು ಹೊಸ ಯೋಜನೆ ರೂಪಿಸುವಿರಿ. ಉದ್ಯಮದಲ್ಲಿ ಕೆಲವು ಅಡಚಣೆಗಳು ಎದುರಾಗಬಹುದು. ಕುಟುಂಬದಲ್ಲಿ ಸಾಮರಸ್ಯ ಮೂಡಿಸಲು ಯಶಸ್ವಿಯಾಗುವಿರಿ. ದ್ವಂದ್ವ ನೀತಿಯು ಮನೆಯವರಿಗೆ ಕಿರಿಕಿರಿ ಉಂಟುಮಾಡಬಹುದು.
  • ಕರ್ಕಾಟಕ ರಾಶಿ: ಒಂದು ಕಡೆ ಆರ್ಥಿಕ ವ್ಯವಹಾರ ಮುಕ್ತಾಯವಾದರೆ ಮತ್ತೊಂದೆಡೆ ಹೊಸ ದಾರಿ ತೆರೆಯಲಿದೆ. ಸಂಗಾತಿಯ ಪ್ರೋತ್ಸಾಹದಿಂದ ಹೊಸ ಉದ್ಯೋಗದ ಆಲೋಚನೆ ಮೂಡುವುದು. ಗಾಯಗೊಂಡ ಅಂಗದ ಬಗ್ಗೆ ಎಚ್ಚರಿಕೆ ಇರಲಿ.
  • ಸಿಂಹ ರಾಶಿ: ಪರರ ನೋವಿಗೆ ಸ್ಪಂದಿಸುವ ಗುಣವಿರಲಿ. ಸಾಮಾಜಿಕ ಗೌರವ ಹೆಚ್ಚಾಗುವುದರಿಂದ ಅಹಂಕಾರ ಬರದಂತೆ ಎಚ್ಚರವಿಸಿ. ಮಕ್ಕಳೊಂದಿಗೆ ಹೆಚ್ಚು ಪ್ರೀತಿಯಿಂದಿರಿ. ಸಂಪತ್ತಿನ ಕಡೆ ಹೆಚ್ಚಿನ ಗಮನವಿದ್ದರೂ ಸಂಬಂಧಗಳ ಕಡೆಗೂ ಗಮನಹರಿಸಿ.
  • ಕನ್ಯಾ ರಾಶಿ: ನಿಮ್ಮ ಅತಿಯಾದ ಸಲುಗೆಯೇ ದ್ವೇಷಕ್ಕೆ ಕಾರಣವಾಗಬಹುದು. ಸ್ನೇಹಿತರಿಂದ ಆರ್ಥಿಕ ಸಹಾಯದ ನಿರೀಕ್ಷೆ ಇರಲಿದೆ. ಒತ್ತಡದಿಂದ ದೂರವಿರಲು ಇಷ್ಟಪಡುವಿರಿ. ವಿದೇಶ ಪ್ರಯಾಣದ ಯೋಗವಿದ್ದು, ವಾತಸಂಬಂಧಿ ಆರೋಗ್ಯ ಸಮಸ್ಯೆ ಕಾಡಬಹುದು.
  • ತುಲಾ ರಾಶಿ: ಪ್ರೇಮ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ವಾಹನ ಖರೀದಿಗೆ ಹಣಕಾಸಿನ ನೆರವು ಸಿಗಲಿದೆ. ತಂದೆಯ ಸಲಹೆ ಕಿರಿಕಿರಿ ಎನಿಸಬಹುದು. ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು.
  • ವೃಶ್ಚಿಕ ರಾಶಿ: ಅಪರಿಚಿತ ಕರೆಗಳಿಂದ ಕೆಲಸಕ್ಕೆ ಅಡ್ಡಿಯಾಗಬಹುದು. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹಾಗೂ ಪ್ರೀತಿ ಹೆಚ್ಚಾಗಲಿದೆ. ಕಳೆದುಹೋದ ಹಳೆಯ ಸಂಬಂಧಗಳು ಮರುಕಳಿಸಲಿವೆ. ಆಪ್ತರ ಮೇಲಿನ ಅಪನಂಬಿಕೆಯಿಂದ ದೂರವಿರಿ.
  • ಧನು ರಾಶಿ: ಇಷ್ಟವಿಲ್ಲದ ವಿಚಾರಗಳ ಚರ್ಚೆಯಲ್ಲಿ ಭಾಗಿಯಾಗಬೇಕಾದೀತು. ಪ್ರೀತಿಪಾತ್ರರಿಂದ ದೂರಾಗುವ ಪರಿಸ್ಥಿತಿ ಬರಬಹುದು. ಸ್ವಲ್ಪ ವಿಶ್ರಾಂತಿ ಪಡೆಯುವುದು ಒಳ್ಳೆಯದು. ಸಂಗಾತಿಯ ವರ್ತನೆ ನಿಮ್ಮಲ್ಲಿ ಅಚ್ಚರಿ ಮೂಡಿಸಬಹುದು.
  • ಮಕರ ರಾಶಿ: ಸಂಗಾತಿಯೊಂದಿಗೆ ಸಣ್ಣಪುಟ್ಟ ಅತೃಪ್ತಿ ಕಾಡಬಹುದು. ಕೋಪದಿಂದ ನಿಮ್ಮ ಅಮೂಲ್ಯ ಸಮಯ ಹಾಳಾಗಲಿದೆ. ಪ್ರೇಮ ಸಂಬಂಧಗಳು ತಾತ್ಕಾಲಿಕ ಎನಿಸಬಹುದು. ಅಪರಿಚಿತ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ಯೋಚಿಸಿ.
  • ಕುಂಭ ರಾಶಿ: ನಿಮ್ಮ ಸಮಯ ಮತ್ತು ಶಕ್ತಿ ಇತರೆ ಕೆಲಸಗಳಿಗೆ ಹೆಚ್ಚು ಬಳಕೆಯಾಗಲಿದೆ. ಸಂಬಂಧವಿಲ್ಲದ ವಿಷಯಗಳಲ್ಲಿ ಮೂಗು ತೂರಿಸಬೇಡಿ. ಹೊಸ ಯೋಜನೆಗಳಿಗೆ ಚಾಲನೆ ಸಿಗಲಿದ್ದು, ಉತ್ತಮ ಬೆಂಬಲ ದೊರೆಯಲಿದೆ.
  • ಮೀನ ರಾಶಿ: ಅತಿಯಾದ ಆಲಸ್ಯದಿಂದ ಕೆಲಸಗಳು ವಿಳಂಬವಾಗಬಹುದು. ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಅನಾವಶ್ಯಕ ಓಡಾಟದಿಂದ ಆಯಾಸವಾಗಲಿದೆ. ಏಕಾಂತದಲ್ಲಿರಲು ಹೆಚ್ಚು ಬಯಸುವಿರಿ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *