ಈ ವರ್ಷ ಎಲ್ಲಾ ಕಡೆ ಬಿಸಿಲಿನ ಧಗೆ ಹೆಚ್ಚಿದೆ, ಈ ಸಮಯದಲ್ಲಿ ಆರೋಗ್ಯಕ್ಕಾಗಿ ಜನರು ತಮ್ಮ ಆಹಾರಕ್ರಮದ ಕಡೆ ಗಮನಹರಿಸಿದರೆ ಒಳ್ಳೆಯದು. ಕಾಲ ಬದಲಾದಂತೆ ಆಹಾರಕ್ರಮದಲ್ಲಿಯೂ ಬದಲಾವಣೆ ಮಾಡಬೇಕಾಗುತ್ತದೆ, ಬೇಸಿಗೆಯಲ್ಲಿ ನೀರಿನಂಶ ಅಧಿಕವಿರುವ ಆಹಾರ ಸೇವಿಸಬೇಕು, ಈ ಬೇಸಿಗೆಯಲ್ಲಿ ಯಾವ ಆಹಾರಗಳನ್ನು ತಿನ್ನದಿದ್ದರೆ ಒಳ್ಳೆಯದು ಎಂದು ನೋಡೋಣ.

ಡ್ರೈ ಫ್ರೂಟ್ಸ್
ಹೌದು ನಿಮಗೆ ಅಚ್ಚರಿಯಾಗಬಹುದು, ಆದರೆ ಬೇಸಿಗೆಯಲ್ಲಿ ಈ ಗೋಡಂಬಿ, ಪಿಸ್ತಾ ಡ್ರೈಫ್ರೂಟ್ಸ್ ಮಿತಿಯಲ್ಲಿ ಬಳಸಿ, ಬದಲಿಗೆ ತಾಜಾ ಹಣ್ಣುಗಳನ್ನು ಬಳಸಿ. ಈ ಹಣ್ಣುಗಳಲ್ಲಿ ಅತ್ಯುತ್ತಮ ಪೋಷಕಾಂಶವಿದೆ ನಿಜ, ಆದರೆ ಈ ಹಣ್ಣುಗಳು ಮೈ ಉಷ್ಣಾಂಶ ಹೆಚ್ಚಿಸುತ್ತದೆ, ಆದ್ದರಿಂದ ಈ ಬಗೆಯ ಡ್ರೈ ಫ್ರೂಟ್ಸ್ ಮಳೆಗಾಲ ಹಾಗೂ ಚಳಿಗಾಲಕ್ಕೆ ತುಂಬಾನೇ ಒಳ್ಳೆಯದು.
ಖಾರದ ಆಹಾರ
ಕೆಲವರಿಗೆ ಖಾರದ ಆಹಾರ ತುಂಬಾನೇ ಇಷ್ಟ, ಬೇಸಿಗೆಯಲ್ಲಿ ಖಾರದ ಆಹಾರ ಕಡಿಮೆ ತಿನ್ನಿ. ಇನ್ನು ಸಾರು ಮಾಡುವಾಗ ಏಲಕ್ಕಿ, ಕ್ಕೆ, ಲವಂಗ, ಬೆಳ್ಳುಳ್ಳಿ, ಶುಂಠಿ ಇವುಗಳನ್ನು ಮಿತಿಯಲ್ಲಿ ಬಳಸಿ. ಇವುಗಳು ಮೈ ಉಷ್ಣಾಂಶ ಹೆಚ್ಚಿಸುತ್ತದೆ.
ಕರಿದ ಪದಾರ್ಥಗಳು ಹಾಗೂ ಬೀದಿ ಬದಿಯ ಆಹಾರಗಳು
ಬೇಸಿಗೆಯ ತಾಪ ಅಧಿಕವಿರುವಾಗ ನೀವು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಡಿ. ಇನ್ನು ಪಿಜ್ಜಾ, ಬರ್ಗರ್, ಕಬಾಬ್ ಇಮಥ ಆಹಾರ ಕೂಡ ಸೇವಿಸಬೇಡಿ. ಅಲ್ಲದೆ ಕೃತಕ ಸಿಹಿಯ ತಂಪು ಪಾನೀಯ ಕೂಡ ಸೇವಿಸಬೇಡಿ. ಇನ್ನು ಬೀದಿ ಬದಿಯ ಆಹಾರ ಸೇವನೆ ಮಾಡಬೇಡಿ.
ಈ ಬಗೆಯ ಬ್ರೇಕ್‌ಫಾಸ್ಟ್ ಸೇವಿಸಬೇಡಿ
ಬೇಸಿಗೆಯಲ್ಲಿ ಇಡ್ಲಿ, ಪೂರಿ, ಚಪಾತಿ, ಉಪ್ಪುಟ್ಟು ಈ ಬಗೆಯ ಆಹಾರ ಸೇವಿಸಬೇಡಿ, ಏಕೆಂದರೆ ಇಂಥ ಆಹಾರ ಸೇವಿಸಿದಾಗ ತುಂಬಾನೇ ಬಾಯಾರಿಕೆ ಹಾಗೂ ಸುಸ್ತು ಅನಿಸುವುದು ಹಾಗಾಗಿ ಇಂಥ ಆಹಾರ ಸೇವಿಸಬೇಡಿ.
ಮದ್ಯ ಸೇವನೆ
ಬೇಸಿಗೆಯಲ್ಲಿ ಮದ್ಯ ಸೇವನೆ ಮಾಡುವುದರಿಂದ ಮೈ ಉಷ್ಣಾಂಶ ಹೆಚ್ಚಾಗುವುದು, ಅಲ್ಲದೆ ಮದ್ಯ ಕುಡಿದು ಬಿಸಿಲಿನಲ್ಲಿ ನಡೆದರೆ ಹೀಟ್ ಸ್ಟ್ರೋಕ್ ಆಗುವುದು, ಆದ್ದರಿಂದ ಬೇಸಿಗೆಯಲ್ಲಿ ಮದ್ಯ ಸೇವನೆ ಮಾಡದಿದ್ದರೆ ಒಳ್ಳೆಯದು.
ಕಾಫಿ ಮಿತಿಯಲ್ಲಿ ಸೇವಿಸಿ
ಕಾಫಿಯನ್ನು ಮಿತಿಯಲ್ಲಿ ಸೇವಿಸಿ, ಕಾಫಿ ಹೆಚ್ಚು ಸೇವಿಸಿದರೆ ಕೆಫೀನ್ ಅಂಶ ಹೆಚ್ಚಾಗುವುದು. ಅಲ್ಲದೆ ಮೈ ಉಷ್ಣಾಂಶ ಹೆಚ್ಚಾಗುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆ,’
ಮಾಂಸಾಹಾರ
ಬೇಸಿಗೆಯಲ್ಲಿ ಮಾಂಸಾಹಾರ ಅಷ್ಟು ಒಳ್ಳೆಯದಲ್ಲ, ಅದರಲ್ಲೂ ಚಿಕನ್ ಅಂತೂ ಮೈ ಉಷ್ಣಾಂಶ ಹೆಚ್ಚಾಗುವುದು. ಅಲ್ಲದೆ ಬೇಸಿಗೆಯಲ್ಲಿ ಮಾಂಸಾಹಾರ ಬೇಗನೆ ಹಾಳಾಗುವುದು, ಇನ್ನು ಜೀರ್ಣಕ್ರಿಯೆಗೆ ತೊಂದರೆಯಾಗುವುದು. ಹಾಗಾಗಿ ಮಾಂಸಾಹಾರ ಒಳ್ಳೆಯದಲ್ಲ.
ಬೇಸಿಗೆಯಲ್ಲಿ ಆಹಾರಕ್ರಮ ಹೇಗಿರಬೇಕು
ನೀರಿನಂಶವಿರುವ ಆಹಾರ ಸೇವಿಸಿ, ಹೌದು ಬೇಸಿಗೆಯಲ್ಲಿ ಎಳನೀರು, ಹಣ್ಣುಗಳು ಅಂತ ನೀರಿನಂಶ ಅಧಿಕವಿರುವ ಆಹಾರ ಸೇವಿಸಿ. ಇನ್ನು ಬಾಯಾರಿಕೆ ಹೆಚ್ಚು ಮಾಡುವ ಆಹಾರ ಸೇವಿಸಬಾರದು, ಬದಲಿಗೆ ಗಂಜಿ ಸೇವಿಸುವುದು, ಖಾರ ಕಡಿಮೆ ಇರುವ ಆಹಾರ ಸೇವಿಸಿದರೆ ತುಂಬಾ ಒಳ್ಳೆಯದು. ಇನ್ನು ಜಂಕ್ಸ್ ಫುಡ್ಸ್ ಇವುಗಳ ಬದಲಿಗೆ ಹಣ್ಣುಗಳ ಸೇವನೆ ತುಂಬಾ ಒಳ್ಳೆಯದು.
ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯಬೇಡಿ
ತುಂಬಾನೇ ಬಾಯಾರಿಕೆ ಉಂಟಾದಾಗ ನಾವು ಫ್ರಿಡ್ಜ್‌ನಲ್ಲಿಟ್ಟ ಆಹಾರ ಸೇವನೆ ಮಾಡುತ್ತೇವೆ, ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ, ಬದಲಿಗೆ ನೀವು ಮಣ್ಣಿನ ಮಡಿಕೆಯಲ್ಲಿ ನೀರು ಅಥವಾ ಮಜ್ಜಿಗೆ ಹಾಕಿಟ್ಟರೆ ಕುಡಿಯಲು ತಂಪಾಗಿರುತ್ತದೆ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಈ ವರ್ಷ ಬಿಸಿಲಿನ ತಾಪ ಹೆಚ್ಚಿರುವುದರಿಂದ ನೀವು ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1