Health Tips: ಪ್ಲಾಸ್ಟಿಕ್ ಬಾಟಲಿಗಳು: ವೈಟ್ ಮತ್ತು ಪೋರ್ಟಬಲ್, ಕಡಿಮೆ ಬೆಲೆಗೆ, ವಿವಿಧ ಬಣ್ಣಗಳು ಮತ್ತು ಗಾತ್ರಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಲಭ್ಯವಿದೆ. ಈ ರೀತಿಯ ಬಾಟಲಿಗಳು ಒಡೆಯುವ ಸಾಧ್ಯತೆಯೂ ಕಡಿಮೆ. ಆದರೆ ಪ್ಲಾಸ್ಟಿಕ್ ಬಾಟಲಿಗಳಿಂದ ಹಾನಿಕಾರಕ ರಾಸಾಯನಿಕಗಳು ನೀರಿನಲ್ಲಿ ಸೇರಿಕೊಳ್ಳಬಹುದು, ಉದಾಹರಣೆಗೆ ಬಿಸ್ಫೆನಾಲ್ ಎ, ಇದು ವಾಟರ್ ಇನ್ಫೆಕ್ಸನ್ಗೆ ಕಾರಣವಾಗಬಹುದು. ಇದು ದೇಹದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡಬಹುದು.

ಎಲ್ಲಾದರೂ ಹೊರಗೆ ಹೋಗುವಾಗ ನೀರಿನ ಬಾಟಲ್ ತೆಗೆದುಕೊಂಡು ಹೋಗುವುದು ಅನಿವಾರ್ಯ. ನೀರನ್ನು ಸಂಗ್ರಹಿಸಲು ಜನರು ವಿವಿಧ ರೀತಿಯ ಬಾಟಲಿಗಳನ್ನು ಬಳಸುತ್ತಾರೆ. ಕೆಲವರು ಗಾಜು, ಕೆಲವರು ಪ್ಲಾಸ್ಟಿಕ್, ಮತ್ತೆ ಕೆಲವರು ತಾಮ್ರ ಅಥವಾ ಇನ್ನೂ ಕೆಲವರು ಸ್ಟೀಲ್ ಬಾಟಲಿಗಳನ್ನು ಬಳಸುತ್ತಾರೆ. ಆದರೆ ಯಾವ ರೀತಿಯ ಬಾಟಲಿಯನ್ನು ಬಳಸುವುದು ಹೆಚ್ಚು ಉಪಯುಕ್ತ ಮತ್ತು ಆರೋಗ್ಯಕರ ಎಂದು ನಿಮಗೆ ತಿಳಿದಿದ್ಯಾ? ಪ್ರತಿಯೊಂದಕ್ಕೂ ತನ್ನದೇ ಆದ ಅರ್ಹತೆಗಳಿವೆ.
ಪ್ಲಾಸ್ಟಿಕ್ ಬಾಟಲಿಗಳು: ವೈಟ್ ಮತ್ತು ಪೋರ್ಟಬಲ್, ಕಡಿಮೆ ಬೆಲೆಗೆ, ವಿವಿಧ ಬಣ್ಣಗಳು ಮತ್ತು ಗಾತ್ರಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಲಭ್ಯವಿದೆ. ಈ ರೀತಿಯ ಬಾಟಲಿಗಳು ಒಡೆಯುವ ಸಾಧ್ಯತೆಯೂ ಕಡಿಮೆ. ಆದರೆ ಪ್ಲಾಸ್ಟಿಕ್ ಬಾಟಲಿಗಳಿಂದ ಹಾನಿಕಾರಕ ರಾಸಾಯನಿಕಗಳು ನೀರಿನಲ್ಲಿ ಸೇರಿಕೊಳ್ಳಬಹುದು, ಉದಾಹರಣೆಗೆ ಬಿಸ್ಫೆನಾಲ್ ಎ, ಇದು ವಾಟರ್ ಇನ್ಫೆಕ್ಸನ್ಗೆ ಕಾರಣವಾಗಬಹುದು. ಇದು ದೇಹದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡಬಹುದು.
ಗ್ಲಾಸ್ ಬಾಟಲ್: ಗಾಜಿನ (ಗ್ಲಾಸ್) ಬಾಟಲಿಯು ಯಾವುದೇ ರಾಸಾಯನಿಕ ಕ್ರಿಯೆಗೆ ಒಳಗಾಗುವುದಿಲ್ಲ, ಆದ್ದರಿಂದ ಇದು ಸುರಕ್ಷಿತವಾಗಿರುತ್ತದೆ ಮತ್ತು ಇದನ್ನು ಮರುಬಳಕೆ ಮಾಡಬಹುದಾದ ಹಾಗೂ ಪರಿಸರ ಸ್ನೇಹಿಯಾಗಿದೆ. ಆದರೆ ಸಮಸ್ಯೆಯೆಂದರೆ, ಗಾಜಿನ ಬಾಟಲಿಗಳು ಭಾರವಾಗಿರುತ್ತದೆ, ಇದು ಎತ್ತಿಕೊಂಡು ಓಡಾಡಲು ತುಂಬಾ ಕಷ್ಟಕರವಾಗಿದೆ. ಸಣ್ಣದೊಂದು ಅಜಾಗರೂಕತೆ ವಹಿಸಿದರೂ ಬೇಗ ಹೊಡೆದು ಹೋಗುತ್ತದೆ.
ತಾಮ್ರದ ಬಾಟಲಿಗಳು: ತಾಮ್ರದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ನೀರಿಗೆ ಉತ್ತಮವಾಗಿವೆ. ತಾಮ್ರವು ದೇಹಕ್ಕೆ ಅಗತ್ಯವಾದ ಕೆಲವು ಖನಿಜಗಳನ್ನು ಒದಗಿಸುತ್ತದೆ. ತಾಮ್ರದ ಬಾಟಲಿಯಲ್ಲಿ ನೀರನ್ನು ಇಟ್ಟುಕೊಂಡರೆ ಖನಿಜಾಂಶವು ನೀರಿನೊಂದಿಗೆ ಬೆರೆತು ದೇಹವನ್ನು ಸೇರುತ್ತದೆ. ಇದರ ಪರಿಣಾಮದಿಂದ ನೀರಿನ ಗುಣಮಟ್ಟ ಹೆಚ್ಚಾಗುತ್ತದೆ. ಆದರೆ ತಾಮ್ರದ ಬಾಟಲಿಗಳು ದುಬಾರಿಯಾಗಿದ್ದು, ನೀರನ್ನು ಹೊರತುಪಡಿಸಿ ಯಾವುದೇ ಆಮ್ಲೀಯ ಪಾನೀಯವನ್ನು ಬಾಟಲಿಗೆ ಸೇರಿಸುವುದು ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗಬಹುದು.
ಸ್ಟೀಲ್ ಬಾಟಲ್: ಸ್ಟೀಲ್ ಬಾಟಲ್ ನಲ್ಲಿ ನೀರು ಕುಡಿಯುವುದು ಕೂಡ ಒಳ್ಳೆಯದು. ನೀರನ್ನು ಹೊರತುಪಡಿಸಿ ಯಾವುದೇ ಆಮ್ಲೀಯ ಪಾನೀಯವು ಬಾಟಲಿಯಲ್ಲಿ ರಾಸಾಯನಿಕ ಪ್ರತಿಕ್ರಿಯೆಗಳನ್ನು ಉಂಟು ಮಾಡಬಹುದು.
ಆರೋಗ್ಯದ ಮೇಲೆ ಪ್ಲಾಸ್ಟಿಕ್ ಬಾಟಲ್ ಅಡ್ಡಪರಿಣಾಮ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಕುಡಿಯುತ್ತಾರೆ. ಆ ಮೂಲಕ ತಮಗೆ ತಿಳಿಯದೆಯೇ ತಮ್ಮ ಆರೋಗ್ಯಕ್ಕೆ ಹಾನಿ ತಂದುಕೊಳ್ಳುತ್ತಿದ್ದಾರೆ. ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಕೆಯಿಂದ ಏನೆಲ್ಲಾ ತೊಂದರೆಗಳಾಗುತ್ತದೆ ಎಂಬುವುದನ್ನು ಮೊದಲು ತಿಳಿಯಲೇಬೇಕು..
ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಪ್ಲಾಸ್ಟಿಕ್ ಬಾಟಲಿಗಳು ಮೈಕ್ರೋಪ್ಲಾಸ್ಟಿಕ್ ಗಳನ್ನು ಬಿಡುಗಡೆ ಮಾಡುತ್ತವೆ. ಅದು ನೀರಿನೊಂದಿಗೆ ಬೆರೆಯುತ್ತದೆ. ಆ ನೀರನ್ನು ಕುಡಿಯುವುದರಿಂದ ಹಾರ್ಮೋನ್ ಸಮತೋಲನಕ್ಕೆ ತೊಂದರೆಯಾಗುತ್ತದೆ. ಇದಲ್ಲದೆ, ಯಕೃತ್ತು ಕೂಡ ಹಾನಿಗೊಳಗಾಗುತ್ತದೆ.
ಪ್ಲಾಸ್ಟಿಕ್ ಬಾಟಲಿಯನ್ನು ಬಿಸಿಲಿನಲ್ಲಿಟ್ಟರೆ ಡಯಾಕ್ಸಿನ್ ನಂತಹ ವಿಷಗಳು ನೀರಿನಲ್ಲಿ ಬೆರೆಯುತ್ತವೆ. ಆ ನೀರನ್ನು ಕುಡಿಯುವುದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಸಹ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿದರೆ ರೋಗ ನಿರೋಧಕ ಶಕ್ತಿ ಕುಂದುವ ಅಪಾಯವಿದೆ. ನಿರಂತರವಾಗಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವವರು ಪದೇ ಪದೇ ಕಾಯಿಲೆ ಬೀಳುವುದನ್ನು ನೀವು ಗಮನಿಸಬಹುದು.
Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ.