ಗರಿಕೆ ಸಣ್ಣ ಹುಲ್ಲೆಂದು ಕಡೆಗಣಿಸಬೇಡಿ ಅದರಲ್ಲಿಯು ಅಡಗಿದೆ ಔಷಧಿ ಗುಣ

Health: ಗರಿಕೆ ಹುಲ್ಲಿನ್ನು ಹೆಚ್ಚಿನವರು ಇದನ್ನು ಸಂಪ್ರಾದಾಯಿಕ ಪೂಜೆಗಾಗಿ ಮಾತ್ರ ಬಳಸಲಾಗುತ್ತದೆ ಎಂದೇ ಭಾವಿಸಿರುತ್ತಾರೆ. ಆದರೆ ಅದನ್ನು ಹೊರತು ಪಡಿಸಿ ನೋಡುವುದಾದರೇ ಗರಿಕೆ ಹುಲ್ಲಿನಲ್ಲಿ ಅನೇಕ ರೀತಿಯ ಔಷಧಿ ಗುಣ ಹೊಂದಿದೆ. 

ಗರಿಕೆ ಹುಲ್ಲು ಮನೆಯ ಮುಂದೆ ಹಾಗೂ ಬಯಲು ಪ್ರದೇಶದಲ್ಲಿ ಹೇರಳವಾಗಿರುತ್ತದೆ. ಗರಿಕೆ ಎಂದೊಡನೆ ಮೊದಲು ನೆನಪಿಗೆ ಬರುವುದು ಗಣಪತಿ ಪೂಜೆ ವೇಳೆ ಬಳಸಲಾಗುತ್ತೆಂದು. ಗಣೇಶನ ಹಬ್ಬ ಆರಂಭ ಆದಗಿನಿಂದ ಮುಗಿಯುವವರೆಗೂ ಗರಿಕೆ ಹುಲ್ಲಿನದ್ದೇ ಸಂಭ್ರಮ.. ಹೆಚ್ಚಿನವರು ಇದನ್ನು ಸಂಪ್ರಾದಾಯಿಕ ಪೂಜೆಗಾಗಿ ಮಾತ್ರ ಬಳಸಲಾಗುತ್ತದೆ ಎಂದೇ ಭಾವಿಸಿರುತ್ತಾರೆ. ಆದರೆ ಅದನ್ನು ಹೊರತು ಪಡಿಸಿ ನೋಡುವುದಾದರೇ ಗರಿಕೆ ಹುಲ್ಲಿನಲ್ಲಿ ಅನೇಕ ರೀತಿಯ ಔಷಧಿ ಗುಣ ಹೊಂದಿದೆ. 

ಇದರಲ್ಲಿ ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಹೇರಳವಾಗಿದೆ.  ಇದನ್ನು  ಆಯುರ್ವೇದ ಔಷಧ ವಿಧಾನಗಳಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ಗರಿಕೆ ಹುಲ್ಲಿನಲ್ಲಿ ವಿಶೇಷವಾದ ಔಷಧೀಯ ಗುಣ ಇರುವುದರಿಂದ ಸಾಕಷ್ಟು ರೋಗಗಳಿಗೆ ಮನೆ ಮದ್ದಾಗಿ ಬಳಸಲಾಗುತ್ತದೆ. 

ಇದು ಅನೇಕ ರೀತಿಯ ರೋಗ ನಿಯಂತ್ರಿಸುವುದರಿಂದ  ಆರೋಗ್ಯ ವರ್ಧಕ ಎಂದು ಹೇಳಲಾಗುತ್ತದೆ. ಗರಿಕೆ ರಸ ಸೇವನೆಯಿಂದ ಜೊತೆಗೆ ಮೈಬಣ್ಣ ಸುಧಾರಣೆ ಜೊತೆಗೆ ರಕ್ತವನ್ನು ಶುದ್ಧೀಕರಿಸಲು ಸಹಕರಿಸುತ್ತದೆ. 

ಗರಿಕೆಯಲ್ಲಿ ಸೈನೊಡಾನ್ ಡ್ಯಾಕ್ಟಿಲೋನ್ ಅಂಶವು  ಮಧುಮೇಹ ಮತ್ತು ಪಿಸಿಓಎಸ್‌ ನಲ್ಲಿ ರಕ್ತದ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ನಿಯಂತ್ರಿಸುತ್ತದೆ. ಹಾಗೂ ಆಗಾಗ ಇದರ ರಸ ಸೇವಿಸುವುದರಿಂದ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಗಾಯ ಸೋಂಕು ಸೇರಿ ಹಲವು ಚರ್ಮ ರೋಗಗಳ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ದೇಹ ನಿರ್ವಿಷವಾಗುತ್ತದೆ. ಹಲ್ಲಿನ ಆರೋಗ್ಯ ಕಾಪಾಡುತ್ತದೆ. ಬಾಯಿ ಹುಣ್ಣು, ಗಾಯದ ಸಮಸ್ಯೆ ತಡೆಯುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Samagrasuddi.co.in ಅದನ್ನು ಖಚಿತಪಡಿಸುವುದಿಲ್ಲ.)

Source: https://zeenews.india.com/kannada/health/parsley-grass-has-medicinal-properties-130473

Leave a Reply

Your email address will not be published. Required fields are marked *